ಹಿರಿಯೂರಿನಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಆರ್. ಮಂಜುನಾಥ್, ಪಿ.ಎಸ್. ಸಾದತ್‌ವುಲ್ಲಾ, ರಾಕ್ ಮಂಜು, ಎಚ್.ಆರ್. ತಿಮ್ಮಯ್ಯ ಇತರರು ಇದ್ದರು. Meeting 
ಚಿತ್ರದುರ್ಗ

ಸರ್ಕಾರದ ಜನಪರ ಆಡಳಿತ ಕಾಂಗ್ರೆಸ್ ಶ್ರೀರಕ್ಷೆ Meeting

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಉಪಾಧ್ಯಕ್ಷ ಆರ್. ಮಂಜುನಾಥ್ ಹೇಳಿಕೆ
ಹಿರಿಯೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಸಿಗುವ ವಿಶ್ವಾಸವಿದ್ದು, ಈಗಾಗಲೇ ಕಾರ್ಯಕರ್ತರು, ಮುಖಂಡರುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಆರ್. ಮಂಜುನಾಥ್ ಹೇಳಿದರು. Meeting
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರು, ಬೆಂಗಲಿಗರ ಸಭೆಯಲ್ಲಿ ಮಾತನಾಡಿ, ಉಪ ಚುನಾವಣೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದು ಅನಿರೀಕ್ಷಿತ ಚುನಾವಣೆಯಾಗಿದ್ದು, ಕಾಂಗ್ರೆಸ್ ಪಕ್ಷವನ್ನು ತಾಲೂಕಲ್ಲಿ ತಳ ಮಟ್ಟದಿಂದ ಕಟ್ಟುವ ಸಂಕಲ್ಪ ಮಾಡಿದ್ದೇನೆ ಎಂದರು.  ನಾನು 40 ವರ್ಷದಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. 10 ವರ್ಷ ಬಳ್ಳಾರಿಯಲ್ಲಿ ಪಕ್ಷದ ಕೆಲಸ ನಿರ್ವಹಿಸಿದ್ದೇನೆ. ನಿರಂತರವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. 1994ರಲ್ಲಿ ಕೇವಲ 30ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆದ್ದಂತ ಸಮಯದಲ್ಲಿ ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿದೆ. ಆಗ ಅವಿರತವಾಗಿ ಓಡಾಡಿ ಯುವಕರನ್ನೆಲ್ಲಾ ಪಕ್ಷದತ್ತ ಸೆಳೆಯುವ ಕೆಲಸ ಮಾಡಿದ್ದೆ ಎಂದರು. 1999ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಾಯಿತು. ಆನಂತರ ನನಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ತಪ್ಪಿಸಿ ತುಮಕೂರು ಕ್ಷೇತ್ರದ ಟಿಕೆಟ್ ನೀಡಲಾಯಿತು. ಅಲ್ಲಿಯೂ ಸಾಕಷ್ಟು ಹೋರಾಟ ನಡೆಸಿದ್ದಾಗ್ಯೂ 20 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು ಎಂದರು.
ಇದೀಗ ಉಪ ಚುನಾವಣೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ತಾಲೂಕಿನಲ್ಲಿ 3 ವರ್ಷದಿಂದ ಪಕ್ಷ ಕಟ್ಟುವ ಕೆಲಸ ಹಿಂದುಳಿದಿದೆ. ಹಾಗಾಗಿ ಮುಖಂಡರನ್ನೆಲ್ಲ ಒಗ್ಗೂಡಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಪಂಚ ಗ್ಯಾರಂಟಿಗಳು ಬಡವರಿಗೆ ಅನುಕೂಲ ಆಗುತ್ತಿವೆ. ಕಾಂಗ್ರೆಸ್ ನಿರಂತರ ಬಡವರ ಪರವಾಗಿರುವ ಪಕ್ಷ. ಭಾರತ್ ಜೋಡೋ ಮೂಲಕ ಯುವ ಜನರನ್ನು ಸಂಘಟಿಸಲಾಗಿದೆ ಎಂದು ತಿಳಿಸಿದರು.  ತಾಲೂಕಿನಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ವಿವಿ ಸಾಗರವನ್ನು ತಾಲೂಕಿನ ಜನರಿಗಾಗಿ ಕಟ್ಟಿಸಿದ್ದರೂ ಇಲ್ಲಿನವರಿಗೆ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ. ಜಲ ಸಂಪನ್ಮೂಲ ಮಂತ್ರಿಗಳ ಬಳಿಗೆ ನಿಯೋಗ ಒಯ್ದು ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು  ಎಂದರು.
ಮೃತ ಶಾಸಕರ ಕುಟುಂಬಕ್ಕೆ ಟಿಕೆಟ್ ಕೊಡುವ ಕಾನೂನು ಪಕ್ಷದಲ್ಲಿಲ್ಲ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಟಿಕೆಟ್ ನೀಡಿದ್ದಾರೆ ಅಷ್ಟೇ. ನಿಷ್ಠಾವಂತ ಕಾರ್ಯಕರ್ತ ನಾನು. ಪಕ್ಷದ ಗೆರೆ ದಾಟುವುದಿಲ್ಲ. ತಾಲೂಕು ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಳಿಲ್ಲ. ಇದ್ದರೂ ಪಕ್ಷದ ತೀರ್ಮಾನವೇ ಅಂತಿಮ ಎಂದರು. ಮಂಜುನಾಥ್, ಪದ್ಮನಾಭ್, ಪಿ.ಎಸ್. ಸಾದತ್ ವುಲ್ಲಾ, ಎಚ್.ಆರ್. ತಿಮ್ಮಯ್ಯ, ಕಲಾವತಿ, ಗೀತಾ, ಓಬಳೇಶ್, ಜಿ. ದಾದಾಪೀರ್, ಮಹಮ್ಮದ್ ರಫೀಕ್, ಧ್ರುವಕುಮಾರ್, ಸುಬಾನ್ ಇತರರಿದ್ದರು.