ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಗೋವಿಂದ ಎಂ. ಕಾರಜೋಳ ಮಾತನಾಡಿದರು. ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಕೆ.ಟಿ. ಕುಮಾರಸ್ವಾಮಿ ಇತರರು ಇದ್ದರು.
- ಸಂಸದ ಗೋವಿಂದ ಕಾರಜೋಳ ಆರೋಪ
- ಖಾಸಗೀಕರಣ ವಿರೋಽಸಲು ಮನವಿ
- ಕಾಂಗ್ರೆಸ್ ಸರ್ಕಾರ
ಚಿತ್ರದುರ್ಗ: ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ವಿದ್ಯುತ್ ಮೇಲೆ ೬೦ ಸಾವಿರ ಕೋಟಿ ರೂ. ಸಾಲವಿದೆ. ಇದನ್ನು ಸರಿ ದೂಗಿಸಲು ಖಾಸಗೀಕರಣದ ಹುನ್ನಾರ ನಡೆದಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ೧೯ ಜಿಲ್ಲೆಗಳಲ್ಲಿ ವಿದ್ಯುತ್ ಖಾಸಗೀಕರಣದ ಷಡ್ಯಂತ್ರ ನಡೆದಿದೆ. ಖರೀದಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಕಡೆಗೆ ಗಮನ ಹರಿಸಿದೆ. ಇದನ್ನು ರೈತರನ್ನೊಳಗೊಂಡು ಎಲ್ಲ ಶಾಸಕರು ಸಾರಾಸಗಟಾಗಿ ವಿರೋಧ ಮಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಒಡೆತನದ ವಿದ್ಯುತ್ ಕಂಪನಿಗಳಿಗೆ ನೇಮಕಾತಿ ಮಾಡಿಕೊಂಡರೆ ಮೀಸಲಾತಿ ಕೊಡಬೇಕೆಂಬ ಉದ್ದೇಶದಿಂದಲೂ ಖಾಸಗೀಕರಣ ಮಾಡಲು ಹೊರಟಿದೆ. ಇದು ಎಸ್ಸಿ, ಎಸ್ಟಿ ಸಮುದಾಯಕ್ಕೂ ಮಾಡುತ್ತಿರುವ ಬಹುದೊಡ್ಡ ದ್ರೋಹ. ಅಲ್ಲದೆ, ಖಾಸಗಿ ಕಂಪನಿಗಳೊಟ್ಟಿಗೆ ಒಳ ಒಪ್ಪಂದ ಮಾಡಿಕೊಂಡು ಲಾಭ ಮಾಡಿಕೊಳ್ಳುವ ಹುನ್ನಾರ ಎಂದು ದೂರಿದರು.
ಬಿಜೆಪಿ ಅವಽಯಲ್ಲಿ ರೈತರ ಜಮೀನುಗಳಿಗೆ ಪಂಪ್‌ಸೆಟ್ ಸಂಪರ್ಕ ಕಲ್ಪಿಸಲು ೨ರಿಂದ ೪ ಸಾವಿರ ರೂ. ಖರ್ಚಾಗುತ್ತಿತ್ತು. ಆದ ರೀಗ ಕಾಂಗ್ರೆಸ್ ಸರ್ಕಾರದಲ್ಲಿ ೨ರಿಂದ ೨.೫ ಲಕ್ಷ ರೂ. ವೆಚ್ಚ ಮಾಡಬೇಕಿದೆ. ರೈತಪರ ಯೋಜನೆಗಳಿಗೆ ಹಣ ವ್ಯಯಿಸಿದರೆ,
ಅದು ದೇಶಕ್ಕೆ ಬಂಡವಾಳ ಇದ್ದಂತೆ. ಆದರೆ, ಕಾಂಗ್ರೆಸ್ಸಿಗರಿAದ ವಿದ್ಯುತ್ ಖಾಸಗೀಕರಣವಾದರೆ ಮುಂದಿನ ದಿನಗಳಲ್ಲಿ ರೈತರ ಐಪಿ ಸೆಟ್ಟುಗಳಿಗೆ ಬಿಲ್ ಪಾವತಿಸಬೇಕಾಗುತ್ತದೆ. ಅದನ್ನು ಭರಿಸಲು ಹೊಲ ಮಾರುವ ದುಸ್ಥಿತಿ ಎದುರಾಗಲಿದೆ ಎಂದು ಅಭಿಪ್ರಾ ಯಪಟ್ಟರು.
ಮಳೆ ಕೊರತೆಯಿಂದಾಗಿ ರಾಜ್ಯವನ್ನು ಕೂಡಲೇ ಬರಪೀಡಿತವೆಂದು ಸಿಎಂ ಘೋಷಿಸಬೇಕು. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರ ಕ್ಕೂ ಬರ ನಿರ್ವಹಣೆಗೆ ತಲಾ ೨೫ ಕೋಟಿ ರೂ. ಬಿಡುಗಡೆ ಮಾಡಬೇಕು. ಅದರ ಅಧ್ಯಯನಕ್ಕೆ ಕೂಡಲೇ ಐಎಎಸ್ ಕೇಡರ್ ಅಽ ಕಾರಿಯನ್ನು ಎಲ್ಲ ಜಿಲ್ಲೆಗೂ ನೇಮಿಸಬೇಕು. ಅಲ್ಲದೆ, ಗೋ ಶಾಲೆಗಳನ್ನು ತೆರೆಯಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕರು ಎದುರಿಸಬೇಕಾದ್ದು ಬಿಜೆಪಿ ಪಕ್ಷ, ನರೇಂದ್ರ ಮೋದಿ, ಅಮಿತ್ ಶಾ ಅವರನ್ನೇ ಹೊರತು ಆರ್‌ಎಸ್‌ಎಸ್ ಅಲ್ಲ. ಅದು ರಾಷ್ಟಿçÃಯ ಪಕ್ಷವೂ ಅಲ್ಲ. ಸಂಘ ಪರಿವಾರದವರು ಸನ್ಯಾಸಿಗಳ ಮಾದರಿಯಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಆದರೂ ಕೆಲವರು ಟೀಕಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದೇಶದ ಜನ ರಾಹುಲ್ ಗಾಂಽ ಅವರನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಭವಿಷ್ಯದಲ್ಲಿ ಆ ಪಕ್ಷದ ಕಚೇರಿಯಲ್ಲಿ ದೀಪ ಹಚ್ಚುವವರು ಯಾರೂ ಇರುವುದಿಲ್ಲ. ಇನ್ನೂ ಬಿ.ಕೆ. ಹರಿಪ್ರಸಾದ್ ಜನ್ಮತಃ ಕಾಂಗ್ರೆಸ್ಸಿಗ ಎನ್ನುತ್ತಾರೆ. ಅವರು ಯಾರಿಂದ ರಾಜಕೀಯಕ್ಕೆ ಬಂದರೋ ಅವರ ಜಯಂತಿ, ಪುಣ್ಯತಿಥಿಯನ್ನೇ ಆಚರಿಸುತ್ತಿಲ್ಲ. ಮುಸ್ಲಿಂ ಮತ ಸಿಗುವುದಿಲ್ಲವೆಂಬ ಭಯವಿರಬಹುದು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ,ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಪದಾಽಕಾರಿಗ ಳಾದ ಡಾ.ಸಿದ್ದಾರ್ಥ ಗುಂಡಾರ್ಪಿ, ವೆಂಕಟೇಶ್ ಯಾದವ್,ಎಸ್.ಆರ್. ಗಿರೀಶ್, ಮೋಹನ್‌ಕುಮಾರ್, ಲೋಕೇಶ್, ನಾಗರಾಜ್, ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ, ಪರಶುರಾಮ್ ಇತರರಿದ್ದರು.