ಹಿರಿಯೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕಾರ್ಯ, ಜೀವ ಪರ ಕಾಳಜಿಯೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ರೀಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರಗತಿ ಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟ ಧರ್ಮಪುರ ವಲಯದ ಸಹಯೋಗದಲ್ಲಿ ಆಯೋಜಿಸಿದ್ದ ಶಿವನಿಗೆ ಸಾಮೂಹಿಕ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳೆಯರ ಸಬಲೀಕರಣ, ಕೆರೆಗಳ ಪುನಶ್ಚೇತನ, ಪರಿಸರ ಸಂರಕ್ಷಣೆ, ನಮ್ಮ ಸಂಸ್ಕೃತಿ, ಪರಂಪರೆ ರಕ್ಷಣೆ, ಜೀವಪರ ಕಾಳಜಿಯೊಂದಿಗೆ ಸಮಾಜಮುಖಿ ಜನಪರ ಸೇವೆ ಮಾಡುತ್ತಿರುವುದು ಅನನ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣದ ಜತೆ ಮಕ್ಕಳಿಗೆ ಜೀನವದಲ್ಲಿ ಶಿಸ್ತು, ಉತ್ತಮ ಸಂಸ್ಕಾರ, ಮಾನವಿಯ ಮೌಲ್ಯ ಬೆಳೆಸುವ ಹೊಣೆ ಪಾಲಕರ ಮೇಲಿದೆ. ಸೇವಾ ಮನೋಭಾವ ಸಮಾಜದ ಶಕ್ತಿ, ಜ್ಞಾನಕ್ಕಿಂತ ಶ್ರೇಷ್ಠವಾದದ್ದು ಯಾವುದು ಇಲ್ಲ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಆಚಾರ-ವಿಚಾರ, ದೇಶ ಭಕ್ತಿ, ನಾಯಕತ್ವ ಗುಣ, ಸಮಾಜಮುಖಿ ಚಿಂತನೆ ಬೆಳೆಸಬೇಕಿದೆ ಎಂದು ತಿಳಿಸಿದರು.
ಅರ್ಚಕ ಕಾಂತರಾಜು ಮಾತನಾಡಿ, ಧರ್ಮಸ್ಥಳದ ಬಾಹುಬಲಿ ತ್ಯಾಗದ ಪ್ರತೀಕ, ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರು ಜೀವ ಪರ ಕಾಳಜಿ, ಮಹಿಳಾ ಸಬಲೀಕರಣ, ಜೀವಜಲ, ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿರುವುದು ಶ್ಲಾಘನೀಯ ಎಂದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಪಂ ಮಾಜಿ ಅಧ್ಯಕ್ಷೆ ಸಾವಿತ್ರಮ್ಮ ಈಶ್ವರಪ್ಪ, ಪೂಜಾ ಸಮಿತಿ ಅಧ್ಯಕ್ಷ ರಘುವೀರ್, ಉಪಾಧ್ಯಕ್ಷ ದೇವರಾಜು, ಧರ್ಮಪುರ ವಲಯ ಮೇಲ್ವಿಚಾರಕಿ ಪೂಜಾ, ಹೆಂಜೇರಪ್ಪ, ಮುದ್ದಮ್ಮ ಗುಂಡಪ್ಪ, ಎಸ್.ಕೆ. ಶಿವಮೂರ್ತಿ, ಹನುಮಂತರಾಯ, ಅರ್ಚಕ ಮನು, ಸುಧಾಮಣಿ, ಲತಾ ಇತರರು ಇದ್ದರು.
ಧರ್ಮಸ್ಥಳ ಹತ್ತಿರದ ಗ್ರಾಮದಲ್ಲಿ ಆರಂಭಿಸಿದ ಯೋಜನೆ ಇಡೀ ರಾಜ್ಯ ವ್ಯಾಪಿಸಿದೆ. ಯಶಸ್ವಿಯೂ ಆಗಿದೆ, ಧರ್ಮಸ್ಥಳ ಸಂಸ್ಥೆ ಎಲ್ಲ ಕ್ಷೇತ್ರ ಪ್ರವೇಶಿಸಿದ್ದು, 44 ವರ್ಷದಿಂದ ಸಮಾಜಮುಖಿ ಕಾರ್ಯ, ಮಹಿಳಾ ಸಬಲೀಕರಣಕ್ಕೆ ವಿಶೇಷ ಅದ್ಯತೆ ನೀಡಿದೆ. ರಾಜ್ಯದಲ್ಲಿ 6 ಲಕ್ಷ ಸ್ವ-ಸಹಾಯ ಸಂಘ ಸ್ಥಾಪನೆ, 40 ಸಾವಿರ ಕಾರ್ಯಕರ್ತರು ಸಂಸ್ಥೆ ಪರ ಕಾರ್ಯ ನಿರ್ವಹಿಸುತ್ತಿದ್ಧಾರೆ. ಮನೆ ಮನೆಗೆ ಭೇಟಿ ನೀಡಿ, ಸಂಘಟನಾ ಶಕ್ತಿಯ ಮೂಲಕ ಸ್ವ-ಸಹಾಯ ಸಂಘ ಸ್ಥಾಪಿಸಲಾಗಿದೆಂದು ಯೋಜನಾಧಿಕಾರಿ ರವಿ ಹಿತ್ತಲಮನಿ ತಿಳಿಸಿದರು.