ಚಿತ್ರದುರ್ಗದಲ್ಲಿ ಆಯೋಜಿಸಿರುವ ಒನಕೆ ಓಬವ್ವ ರಾಜ್ಯಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು. ಜಿ.ಎಸ್. ಕುಮಾರ್‌ಗೌಡ, ಟಿ. ರಮೇಶ್, ಆಶೋಕ್, ರವಿಕಾಂತ್, ಎನ್.ಡಿ. ಕುಮಾರ್, ನಿರಂಜನಮೂರ್ತಿ, ಭಾಸ್ಕರ್ ಇತರರು ಇದ್ದರು.
- ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಮತ
- ಒನಕೆ ಓಬವ್ವ ರಾಜ್ಯಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ
- ಆಟದಲ್ಲಿ ಸೋಲು ಗೆಲುವು ಸಾ ಮಾನ್ಯ,
ಚಿತ್ರದುರ್ಗ: ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸ ಬೇ ಕಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಚಿತ್ರದುರ್ಗ ಕ್ರಿಕೆಟ್ ಕ್ಲಬ್ ಮತ್ತು ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್‌ನಿಂದ ಜೂ.೨೬ರಿಂದ ಜುಲೈ ೫ರವರೆಗೆ ನಗರದ ಶ್ರೀ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಒನಕೆ ಓಬವ್ವ ರಾಜ್ಯಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಶುಕ್ರ ವಾರ ಚಾಲನೆ ನೀಡಿ ಮಾತನಾಡಿದರು.
ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ, ವ್ಯಾಯಾಮ, ಯೋಗ, ಧ್ಯಾನ ಬಹುಮುಖ್ಯವಾಗಿವೆ. ಆಟದಲ್ಲಿ ಸೋಲು ಗೆಲುವು ಸಾ ಮಾನ್ಯ,ಸೋತವರು ಮುಂದಿನ ಪಂದ್ಯದಲ್ಲಿ ಗೆಲುವು ಸಾಽಸಲು ಸಿದ್ಧರಾಗಬೇಕು. ಗೆದ್ದವರು ಬೀಗದೇ ಮತ್ತಷ್ಟು ಪಂದ್ಯಗಳ ಗೆ ಲುವಿಗೆ ಅಭ್ಯಾಸ ಮುಂದುವರಿಸಬೇಕು ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ನಿರಂತರವಾಗಿ ಒಂದಲ್ಲ ಒಂದು ಪಂದ್ಯಾವಳಿಗಳು ನಡೆಯುತ್ತಿರುತ್ತವೆ. ನಮ್ಮ ಶ್ರೀಮಠವೂ ಕ್ರೀಡೆಗೆ ಸಾಕಷ್ಟು ಪೋತ್ಸಾಹ ನೀಡುತ್ತದೆ. ಕ್ರೀಡಾಪಟುಗಳು ಉತ್ತಮ ಅಭ್ಯಾಸದ ಮೂಲಕ ರಾಜ್ಯ, ರಾಷ್ಟç, ಅಂತಾರಾಷ್ಟಿçÃಯ ಮಟ್ಟದಲ್ಲಿ ನಮ್ಮ ಜಿಲ್ಲೆಗೆ ಹೆಸರು ತರಬೇಕು ಎಂದರು.
ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಬುಡಕಟ್ಟು ಸಂಪ್ರದಾಯ ಹೊಂದಿರುವ ಚಿತ್ರದುರ್ಗ ಜಿಲ್ಲೆಗೆ ತನ್ನದೇ ಆದ ಇತಿಹಾಸ ವಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂಥ ದಾನಿಗಳೂ ಇದ್ದಾರೆ. ಅವರ ನೆರವಿನೊಂದಿಗೆ ಕ್ರೀಡಾಪ ಟುಗಳು, ಕಲಾವಿದರನ್ನು ಬೆಳೆಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಒನಕೆ ಓಬವ್ವ ಕಪ್ ಅಧ್ಯಕ್ಷ ಜಿ.ಎಸ್.ಕುಮಾರ್‌ಗೌಡ ಮಾತನಾಡಿ, ಚಿತ್ರದುರ್ಗ ಕ್ರಿಕೆಟ್ ಕ್ಲಬ್, ಯಂಗ್ ಸ್ಟಾರ್ ಕ್ರಿಕೆಟ್‌ಕ್ಲಬ್ ಹಲವು ವರ್ಷಗಳಿಂದ ನಿರಂತರವಾಗಿ ಪಂದ್ಯಾವಳಿಗಳನ್ನು ಆಯೋಜಿಸಿಕೊಂಡು ಬರುತ್ತಿವೆ ಎಂದರು.
ಚಿತ್ರದುರ್ಗ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಟಿ.ರಮೇಶ್, ಕಾರ್ಯದರ್ಶಿ ಅಶೋಕ್, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಚಾರ್ಯ ರವಿಕಾಂತ್, ಅಂತಾರಾಷ್ಟಿçÃಯ ಕ್ರೀಡಾಪಟು ಎನ್.ಡಿ. ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಕ್ರೀಡಾಪಟು ಭಾಸ್ಕರ್, ರವಿಕುಮಾರ್, ಖಾನ್, ತಿಪ್ಪೇರುದ್ರಸ್ವಾಮಿ, ಅರ್ಜುನ್, ಕಮಲ್‌ಯಾದವ್, ಮಲ್ಲಿಕಾರ್ಜನ್, ಗುರುಮೂರ್ತಿ, ಪೈಲಟ್‌ನಾಗರಾಜ್, ವಿಜಯಕುಮಾರ್ ಮಂಜುನಾಥ್‌ಗುಪ್ತ ಇತರರು ಇದ್ದರು.
ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಮೊದಲಾದ ಜಿಲ್ಲೆಗಳ ಕ್ರಿಕೆಟ್ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.