ಚಿತ್ರದುರ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆಯಲ್ಲಿ ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಡಾ.ಎಸ್. ಎನ್.ಹೇಮಂತರಾಜು, ಎಂ.ಕೆ.ತಾಜ್‌ಪೀರ್, ಆರ್.ಶಿವಣ್ಣ, ಡಿ.ಎನ್.ಮೈಲಾರಪ್ಪ, ನರಸಿಂಹಮೂರ್ತಿ, ಡಾ.ಬಿ.ಎಂ.ಗುರುನಾಥ್, ಡಾ. ಚಂದ್ರಕಾAತ್ ನಾಗಸಮುದ್ರ, ಡಿ.ಒ.ಮುರಾರ್ಜಿ ಇತರರು ಇದ್ದರು.  
ಚಿತ್ರದುರ್ಗ

ಎಲ್ಲ ಧರ್ಮಗಳ ಸಾರವೇ ಕುವೆಂಪು ಸಂದೇಶ

ಪ್ರಮುಖ ಮುಖ್ಯಾಂಶಗಳು

  • ಪ್ರಪAಚ ಸಮಸ್ಯೆಗಳಿಗೆ ಪ್ರಕೃತಿಯೇ ಪರಿಹಾರ
  • ವಿಶ್ವಮಾನವ ದಿನಾಚರಣೆ ಸಮಾರಂಭ
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಚಿತ್ರದುರ್ಗ: ಜಗತ್ತಿನ ಎಲ್ಲ ಧರ್ಮಗಳ ಸಾರವೇ ಕುವೆಂಪು ಅವರ ವಿಶ್ವ ಮಾನವ ಸಂದೇಶವಾಗಿದೆ ಎಂದು ಚಿತ್ರದುರ್ಗ ಬಾಲಕರ ಸರ್ಕಾರಿ ಪ.ಪೂ.ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಡಾ.ಎಸ್.ಎನ್.ಹೇಮಂತರಾಜು ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡಿಸಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದÊಷ್ಟಿ ಕುವೆಂಪು ಅವರ ವಿಶ್ವ ಮಾನವ ಸಂದೇಶವಾಗಿದ್ದು, ಇದ ನ್ನು ಅಳವಡಿಸಿಕೊಂಡರೆ ನಮ್ಮ ಬದುಕು ಪಾವನವಾಗಲಿದೆ. ನಮ್ಮ ಅಹಂಕಾರ ಭೇದಿಸಲು ಕುವೆಂಪು ಅವರು ತೋರಿದ ಮಾರ್ಗ ದ ಅಗತ್ಯವಿದೆ.
ನಮ್ಮ ಬದುಕನ್ನು ಸರಿಮಾಡಿಕೊಳ್ಳಲು ಪ್ರಪಂಚದ ಎಲ್ಲ ಸಾಹಿತ್ಯವನ್ನು ಓದಬೇಕಿದೆ. ಈ ನಿಟ್ಟಿನಲ್ಲಿ ಕುವೆಂಪು ಅಗ್ರ ಶ್ರೇಣಿಯ ಬರ ಹಗಾರರಾಗಿ ಕಾಣುತ್ತಾರೆ. ಉತ್ತಮ ಸಂದೇಶಗಳ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ್ದಾರೆ. ಪ್ರಪಂಚದ ಎಲ್ಲ ಸಮಸ್ಯೆ ಗಳಿಗೂ ಪ್ರ ಕÊತಿಯೇ ಪರಿಹಾರ. ಮಾನವ ಸÊಷ್ಟಿಸಿದ ಎಲ್ಲ ಸಮಸ್ಯೆಗಳಿಗೂ ಪ್ರಕÊತಿಯೇ ನಮಗೆ ಪರಿಹಾರವೆಂಬ ಕವಿ ವರ್ಡ್ಸ್ವರ್ತ್ ಅವರಿಂದ ಕುವೆಂಪು ಪ್ರಭಾವಿತರಾಗಿದ್ದಾರೆ ಎಂದರು.
ಕುವೆAಪು ಬರೆದಂತೆ ಬದುಕಿದವರು. ಅವರ ಮಾತು ಮತ್ತು ಕÊತಿ ನಡುವೆ ವ್ಯತ್ಯಾಸವಿಲ್ಲದೇ ಬದುಕಿದ್ದ ಮಹನೀಯರು. ಅವರ ಶಿ ಕ್ಷಣ, ಬದುಕಿನ ಆಲೋಚನೆಗಳು ಆದರ್ಶಪ್ರಾಯವಾಗಿವೆ. ಅವರ ಆದರ್ಶ ಜೀವನ, ಸಾಹಿತ್ಯದ ಪರಿಚಯವನ್ನು ಮಕ್ಕಳಿಗೆ ತಿಳಿಸ ಬೇಕಿದೆ ಎಂದರು.
ಎಸಿ ಮೆಹಬೂಬ್ ಜಿಲಾನಿ ಖುರೇಷಿ ಅವರು ಮಾತನಾಡಿ, ಕುವೆಂಪು ಅವರು ಸಾಹಿತಿ, ಕವಿ, ದಾರ್ಶನಿಕ ಹಾಗೂ ತತ್ವಜ್ಞಾನಿ ಯಾಗಿ ಹೊರಹೊಮ್ಮಿದರು. ಸÊಷ್ಟಿಯಲ್ಲಿ ಮನುಷ್ಯನನ್ನು ಬುದ್ಧಿವಂತ ಪ್ರಾಣಿ ಎಂದು ಕರೆಯುವ ಈ ಪರಿಸರದಲ್ಲಿ ವಿಶ್ವಮಾನವ ರಾಗಿ ವಿಶ್ವಕ್ಕೆ ಒಳಿತು ಮಾಡುವುದು ಮಾನವ ಧರ್ಮವಾಗಿದೆ ಎಂದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಅವರು ಮಾತನಾಡಿ, ಕರ್ನಾಟಕವನ್ನೊಳಗೊಂಡ ಭಾರತ, ಜಗತ್ತು ಶಾಂತಿಯ ತೋಟವಾಗಿ ರಲಿ ಎಂದು ಆಶಿಸುವ ಉದಾತ್ತ ಭಾವ ನಾಡಗೀತೆಯಲ್ಲಿದೆ. ಕುವೆಂಪು ಅವರು ಜಾತಿ, ಮತ, ಧರ್ಮದ ಗಡಿಗಳನ್ನು ಮೀರಿ ಎಲ್ಲ ರೂ ಮಾನವರೇ ಎಂಬ ಸಂದೇಶ ನೀಡಿದ್ದಾರೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಽಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಕುವೆಂಪು ಅವರ ತತ್ವ ಸಿದ್ಧಾಂತ, ಅಲೋಚ ನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ವಿಶ್ವಮಾನವ ದಿನಾಚರಣೆ ಅಂಗವಾಗಿ ಕುವೆಂಪು ಅವರ ಕುರಿತ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಕವನ ವಾಚಿಸಿದ ಉಪನ್ಯಾಸಕರಾದ ತಿಪ್ಪೇಸ್ವಾಮಿ, ಮಂಜುನಾಥ್, ಹುಲ್ಲೂರು ವಸಂತಕುಮಾರ್ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಽಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಎಸಿ ಕಚೇರಿ ತಹಸೀಲ್ದಾರ್ ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಆಯುಷ್ ಅಽಕಾರಿ ಡಾ.ಚಂದ್ರಕಾAತ್ ನಾಗಸಮುದ್ರ ಇತರರು ಇದ್ದರು. ಚಿಕ್ಕೋಬನಹಳ್ಳಿ ಡಿ.ಒ.ಮುರಾರ್ಜಿ ತಂಡದ ಕಲಾವಿದರು ಗೀತಗಾಯನ ನಡೆಸಿಕೊಟ್ಟರು.