ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಆದಿಶಕ್ತಿ ಶ್ರೀ ಮಾತಂಗೇಶ್ವರಿ ನೂತನ ದೇಗುಲ ನಿರ್ಮಾಣ ಕಾರ್ಯಕ್ಕೆ ಯದುವೀರ ಕೃಷ್ಣದತ್ತ ಒಡೆಯರ್ ಚಾಲನೆ ನೀಡಿದರು. ನಿರಂಜನಾನAದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಲಿಂಗಾನAದ ಸ್ವಾಮೀಜಿ, ಷಡಕ್ಷರಿಮುನಿ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಕೆ.ಎಚ್. ಮುನಿಯಪ್ಪ, ಜಿ.ಎಂ. ಸಿದ್ದೇಶ್ವರ್, ಬಿ.ಎನ್. ಚಂದ್ರಪ್ಪ, ದುರ್ಯೋಧನ ಐಹೊಳೆ, ಕೆ.ಎಸ್. ನವೀನ್, ತಿಮ್ಮರಾಯಪ್ಪ, ಎಸ್.ಕೆ. ಬಸವರಾಜನ್ ಇತರರಿದ್ದರು.
- ಶ್ರೀ ಮಾತಂಗೇಶ್ವರಿ ದೇಗುಲ ಸಮಾಜಮುಖಿಯಾಗಲಿ
- ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಅಭಿಮತ
- ದೇಗುಲ ನಿರ್ಮಾಣದ ಭೂಮಿಪೂಜೆ
ಚಿತ್ರದುರ್ಗ: ಭಾರತ ಮಾತೆಯನ್ನು ಆರಾಽಸುವ ಗ್ರಂಥ ದೇಶದೊಳಗೆ ಯಾವುದಾದರೂ ಇದ್ದರೆ ಅದು ಸಂವಿಧಾನ ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.
ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಆದಿಶಕ್ತಿ ಶ್ರೀ ಮಾತಂ ಗೇಶ್ವರಿ ದೇವಿ ದೇಗುಲ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟç, ಸಮಾಜದ ಹಿತ ಕಾಯುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಹೆಜ್ಜೆ ಹಾಕುತ್ತಿದ್ದಾರೆ ಎಂದರು.
ಮೈಸೂರಿಗೂ-ಚಿತ್ರದುರ್ಗಕ್ಕೂ ಅವಿನಾಭಾವ ಸಂಬAಧವಿದೆ. ನಮ್ಮ ರಾಜ ವಂಶಸ್ಥರಿAದ ನಿರ್ಮಾಣವಾದ ವಾಣಿವಿಲಾಸ ಸಾಗರ, ಗಾಯತ್ರಿ ಜಲಾಶಯ ಎರಡೂ ತುಂಬಿರುವುದು ತುಂಬ ಸಂತಸದ ಸಂಗತಿ. ನೀರಾವರಿಗೆ ಮಾತ್ರವಲ್ಲದೆ, ಮೀಸ ಲಾತಿಗಾಗಿಯೂ ಹೋರಾಟಗಳು ನಡೆದಿವೆ. ಅದನ್ನು ರಾಜ್ಯದಲ್ಲಿ ಮೊಟ್ಟಮೊದಲು ಅನುಷ್ಠಾನಕ್ಕೆ ತಂದ ಹೆಗ್ಗಳಿಕೆ ಮೈಸೂರು ಒಡೆಯರಿಗೆ ಸಲ್ಲುತ್ತದೆ ಎಂದರು.
ಭಾರತೀಯ ಧರ್ಮ ಒಂದೇ ಆಗಿದೆ. ದೇಶದ ಭವ್ಯ ಪರಂಪರೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ. ಈ ಮೂಲಕ ಏಕತೆಯಲ್ಲಿ ವೈವಿಧ್ಯತೆ ಇದೆ ಎಂಬುದನ್ನು ವಿಶ್ವಕ್ಕೆ ಸಾರಬೇಕಿದೆ ಎಂದು ಸಲಹೆ ನೀಡಿದರು.
ಶಂಕುಸ್ಥಾಪನೆ ನೆರವೇರಿಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಮಾದಾರ ಚನ್ನಯ್ಯ ಗುರುಪೀಠದ ಎಲ್ಲ ಒಳ್ಳೆ ಯ ಕಾರ್ಯಗಳಿಗೂ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಮಾದಾರ ಮಹಾಸಭಾವೂ ಸಹಕರಿಸಲಿದೆ. ವೈಯಕ್ತಿಕವಾಗಿ ದೇಗುಲ ನಿರ್ಮಾಣಕ್ಕೆ ೧೦ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಮಠದ ಮೂಲಕ ಸಮಾಜ ಒಗ್ಗೂಡಿಸುವ, ಮಾರ್ಗದರ್ಶನ ನೀಡುವ ಕಾರ್ಯ ಸ್ವಾಮೀಜಿ ಮಾಡುತ್ತಿದ್ದಾರೆ. ತಾಯಿ ಮಾತಂ ಗೇಶ್ವರಿ ಪೀಠವನ್ನು ಭವ್ಯವಾಗಿ ನಿರ್ಮಿಸುವ ಸದ್ದುದ್ದೇಶ ಅವರದ್ದಾಗಿದೆ. ಭೂಮಿ ಪೂಜೆ ನೆರವೇರಿಸುವ ಸುದೈವ ನನ್ನದಾಯ್ತು. ೧೧ ತಿಂಗಳಲ್ಲಿ ದೇಗುಲ ಪೂರ್ಣಗೊಂಡು ಲೋಕಾರ್ಪಣೆ ಆಗಬೇಕು. ಈ ಮಹತ್ಕಾರ್ಯಕ್ಕೆ ಸಮುದಾಯದ ಸರ್ವರೂ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನAದಪುರಿ ಸ್ವಾಮೀಜಿ ಮಾತನಾಡಿ, ಜಗನ್ಮಾತೆ ಮಾತಂಗೇಶ್ವರಿ ದೇಗುಲವನ್ನು ಬಹುಶಃ ಭಾರತದಲ್ಲಿ ಎಲ್ಲೂ ಭವ್ಯವಾಗಿ ನಿರ್ಮಿಸಿಲ್ಲ. ದೇಗುಲ ನಿರ್ಮಿಸುವ ಕಾರ್ಯ ಶ್ರೀಮಠದಿಂದ ಆಗುತ್ತಿರುವುದು ಸ್ವಾಗ ತಾರ್ಹ. ಅದೇ ರೀತಿ ದೇಗುಲಕ್ಕಿಂತ ಶಿಕ್ಷಣಾಲಯಗಳು ಬಹಳ ಮುಖ್ಯ. ಸಮುದಾಯದವರು ವಿದ್ಯಾವಂತರಾದರೆ, ಪ್ರಗತಿಗೆ ದಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ನಮ್ಮ ಗುರುಪೀಠದಿಂದ ನಡೆಯುವ ಗ್ರಾಮ ದರ್ಶನ, ದುಶ್ಚಟ ಮುಕ್ತಿಗೆ ಸದ್ಭಾವನೆ ಮೂಡಿಸುವ, ಸಂಘಟನೆ, ಸಮಾಜಮುಖಿ ಕಾರ್ಯಗಳನ್ನು ಮೊದಲು ಮಾದಿಗರ ಮಾತಂಗಿ ಗಲ್ಲಿಯ ಜೀವಜಲ ಸ್ಪರ್ಶಿಸಿದ ನಂತರವೇ ಆರಂಭಿಸುತ್ತೇವೆ ಎಂದರು.
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ದೇಶದ ಶೇ. ೯೯ರಷ್ಟು ದೇಗುಲಗಳಲ್ಲಿ ಮಾತಂಗಿ ದೇವಿ ಗುಡಿ ಇಲ್ಲ. ಆದರೆ, ದೇವಸ್ಥಾನಗಳಿಗೆ ಹೆಚ್ಚಾಗಿ ಹೋಗುವವರು, ಆರಾಽಸುವವರು ಶೋಷಿತರು, ಹಿಂದುಳಿದವರು, ಕೆಳ ವರ್ಗದವರೇ ಆಗಿದ್ದಾರೆ ಎಂದು ಬೇಸರಿಸಿದರು.
ಮಾತಂಗೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಆಗುವ ಮೂಲಕ ಸಮಾಜದಲ್ಲಿ ಜಾಗೃತಿಯೂ ಬೆಳೆಯಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಸಮುದಾಯಕ್ಕೆ e್ಞÁನಾರ್ಜನೆ ಆಗದ ಹೊರತು ದೇಶ ಮತ್ತು ರಾಜ್ಯದ ಸಂಪತ್ತು, ಸಮಾಜ ಉಳಿಯದು ಎಂದು ಅಭಿಪ್ರಾಯಪಟ್ಟರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಲಿಂಗಾನAದ ಸ್ವಾಮೀಜಿ, ಷಡಕ್ಷರಿಮುನಿ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಶಾಸಕ ದುರ್ಯೋಧನ ಐಹೊಳೆ, ಎಂಎಲ್‌ಸಿ ಕೆ.ಎಸ್. ನವೀನ್, ಮಾಜಿ ಸಚಿವ ಶಿವಣ್ಣ, ಮಾಜಿ ಶಾಸಕ ತಿಮ್ಮರಾಯಪ್ಪ, ವಿವಿಧ ನಿಗಮ-ಆಯೋಗದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್, ಪಿ. ರಘು ಕೆಳಗೋಟೆ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮುಖಂಡರಾದ ಜಿ.ಎಸ್. ಅನಿತ್‌ಕುಮಾರ್, ಮಂಜುನಾಥ್ ಗೊಪ್ಪೆ, ಉಮೇಶ್ ಕಾರಜೋಳ, ಓ. ಶಂಕರ್, ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಬಿ.ಪಿ. ಪ್ರಕಾಶ್‌ಮೂರ್ತಿ, ರವಿ ಮಲ್ಲಾಪುರ ಇತರರಿದ್ದರು.
ಮಾದರು, ಸಾದರು ಅಣ್ಣತಮ್ಮಂದಿರು
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಮಾಜ ಕಟ್ಟುವ ಕೆಲಸ ಮಾಡಿz್ದÁರೆ. ದೊಡ್ಡಸ್ತಿಕೆಗೆ ಮಾಡದೆ, ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ಧೇಶ್ವರ ಹೇಳಿದರು. ನಮ್ಮ ಸಿರಿಗೆರೆ ಪೀಠಕ್ಕೆ ಮರುಳಸಿದ್ಧರು ಗುರುಗಳು. ಹೀಗಾಗಿ ಮಾದರು, ಸಾದರು ಅಣ್ಣತಮ್ಮಂದಿರAತೆ ಬಾಳುತ್ತಿದ್ದೇವೆ ಎಂದರು.
ಮಠದ ಕೀರ್ತಿ ದೇಶ ವಿಸ್ತರಿಸಿದೆ
ಕುಲದೇವತೆ ಮಾತಂಗೇಶ್ವರಿ ದೇಗುಲ ಇಲ್ಲಿ ಭವ್ಯವಾಗಿ ನಿರ್ಮಾಣವಾಗಲಿ. ಅದೇ ರೀತಿ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾದಾಗುವ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಸಲಹೆ ನೀಡಿದರು. ದೇಶದಲ್ಲಿ ಈ ಸಮುದಾಯಕ್ಕೆ ನ್ಯಾಯ ಒದಗಿಸಿದ ಬಸವಣ್ಣ, ಅಂಬೇಡ್ಕರ್ ಇಬ್ಬರೂ ಮಹನೀಯರು ಕಾರಣರಾಗಿದ್ದಾರೆ. ಆರಂಭದಲ್ಲಿ ಮಠ ಚಿಕ್ಕದಾದರೂ ಕೀರ್ತಿ ದೇಶಕ್ಕೆ ವಿಸ್ತರಿಸಲು ಮಾದಾರ ಚನ್ನಯ್ಯ ಶ್ರೀ ಕಾರಣರಾಗಿದ್ದಾರೆ ಎಂದರು.