ಚಿತ್ರದುರ್ಗದಲ್ಲಿ ಗುರುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗೀತಾ ನಂದಿನಿಗೌಡ, ಮುನೀರಾ ಮಕಾನಾದಾರ್, ಶಿವಣ್ಣ ಗಂಜಿಗಟ್ಟೆ, ಡಿ.ಎನ್. ಮೈಲಾರಪ್ಪ, ಸಂಪತ್‌ಕುಮಾರ್, ಮೀನಾಕ್ಷಮ್ಮ, ಭಾರತಮ್ಮ ಇತರರು ಇದ್ದರು. 
ಚಿತ್ರದುರ್ಗ

ಕೇಂದ್ರದ ಸರ್ಕಾರದ ಹುನ್ನಾರ ಬಯಲು

ಪ್ರಮುಖ ಮುಖ್ಯಾಂಶಗಳು

  • ಗೀತಾ ನಂದಿನಿಗೌಡ ಟೀಕೆ
  • ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ
  • ಪ್ರತಿಪಕ್ಷಗಳ ಒಗ್ಗಟ್ಟಿಗೆ ಸಿಕ್ಕ ಜಯ
ಚಿತ್ರದುರ್ಗ: ಮಹಿಳಾ ಮೀಸಲಾತಿ ಹೆಸರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಮುಂದಾದ ಬಿಜೆಪಿ ನೇತÊತ್ವದ ಕೇಂದ್ರ ದ ಸರ್ಕಾರದ ಹುನ್ನಾರ ಬಯಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿಗೌಡ ಟೀಕಿಸಿದರು.
ಪಕ್ಷದ ಮಹಿಳಾ ಘಟಕ ಗುರುವಾರ ನಗರದ ಕಾಂಗ್ರೆಸ್ ಕಚೇರಿ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮಸೂದೆ ಮಂಡನೆಗೆ ಮುಂದಾದ ಬಿಜೆಪಿಗೆ ಮುಖಭಂಗವಾಗಿದೆ. ಪ್ರತಿ ಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ಹೊರತು ಮಹಿಳಾ ಮೀಸಲಾತಿ ಮಸೂದೆಗಲ್ಲ ಎಂದರು.
ಜಿಲ್ಲಾ ಆಶ್ರಯ ಕಮಿಟಿ ಸದಸ್ಯೆ ಮುನೀರಾ ಮಕಾನಾದಾರ್ ಮಾತನಾಡಿ, ಮಸೂದೆ ಸೋಲು ಪ್ರಜಾಪ್ರಭುತ್ವ ದುರ್ಬಲಗೊಳಿ ಸುವ ಕೇಂದ್ರದ ಪಿತೂರಿಗೆ ತಕ್ಕ ಉತ್ತರ ಸಿಕ್ಕಿದೆ. ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ಪ್ರತಿಪಕ್ಷಗಳ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಜಯವಾಗಿದೆ ಎಂದರು.
ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಪವಿತ್ರಾ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಸಂಪತ್‌ಕುಮಾರ್, ರವಿಕುಮಾರ್, ಮುದಾಸಿರ್, ಮೀನಾಕ್ಷಮ್ಮ, ಮದರ್ ಪೆರಿ ಯಾರ್, ಭಾರತಮ್ಮ, ಅರುಣ್, ಗೀತಮ್ಮ, ರಾಧಮ್ಮ, ಸಂದೀಪ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಗೂ ಮೊದಲು ಶೇ.೩೩ ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಿ ಸಹಿ ಸಂಗ್ರಹಿಸಲಾಯಿತು.