ಜಾಜೂರು ಗ್ರಾಮದ ಚಿಲುಮೆ ರುದ್ರಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಗುರುವಂಧನೆ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಕರಿಯಪ್ಪ ಉದ್ಘಾಟಿಸಿದರು. ಎನ್.ಎಸ್. ನಾಗೇಗೌಡ, ಎಸ್. ಮಶ್ಚೇಂದ್ರಯ್ಯ, ಪಂಚಾಕ್ಷರಯ್ಯ, ಮಂಜುನಾಥ ಇತರರಿದ್ದರು. teacher 
ಚಿತ್ರದುರ್ಗ

ಗುರು-ಶಿಷ್ಯರ ನಡುವಿನ ಬಾಂಧವ್ಯಕ್ಕಿದೆ ಶ್ರೇಷ್ಠ ಸ್ಥಾನ teacher

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ಕರಿಯಪ್ಪ ಹೇಳಿಕೆ
  • ಜಾಜೂರಲ್ಲಿ ಗುರುವಂದನೆ ಕಾರ್ಯಕ್ರಮ
ಪರಶುರಾಮಪುರ: ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯರ ಬಾಂಧವ್ಯಕ್ಕೆ ಶ್ರೇಷ್ಠ ಸ್ಥಾನವಿದೆ ಎಂದು ನಿವೃತ್ತ ಪ್ರಾಚಾರ್ಯ ಕರಿಯಪ್ಪ ಹೇಳಿದರು. teacher
ಜಾಜೂರು ಗ್ರಾಮದ ಚಿಲುಮೆ ರುದ್ರಸ್ವಾಮಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 1993-94ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಠ ಹೇಳಿಕೊಟ್ಟ ಗುರುಗಳನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕು. ಹಳೇ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದರು.
ನಿವೃತ್ತ ಪ್ರಾಚಾರ್ಯ ಚಟ್ಟೇಕಂಬ ಪಂಚಾಕ್ಷರಪ್ಪ ಮಾತನಾಡಿ, ಮನುಷ್ಯನಿಗೆ ಸಮಯ ಪ್ರಜ್ಞೆ ಅತಿಮುಖ್ಯ. ಶಿಕ್ಷಕರು ಮಕ್ಕಳಿಗೆ ಸಮಯ ಪ್ರಜ್ಞೆ, ಸಂಸ್ಕಾರ, ನೈತಿಕ ಮೌಲ್ಯಗಳನ್ನು ಹೇಳಿಕೊಟ್ಟಲ್ಲಿ ಅವರ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಹಳೇ ವಿದ್ಯಾರ್ಥಿ ಎನ್.ಎಸ್. ನಾಗೇಗೌಡ ಮಾತನಾಡಿ, ಶಾಲೆಯಲ್ಲಿ ಗುರುಗಳು ಹೇಳಿಕೊಟ್ಟ ವಿದ್ಯೆ ಮತ್ತು ಸಂಸ್ಕಾರ ಇಂದು ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಸಮಾನ ಮನಸ್ಕರು ಒಂದೆಡೆ ಸೇರಿ ಗುರುವಂದನೆ ಕಾರ್ಯಕ್ರಮ ನಡೆಸುತ್ತಿರುವುದು ಹರ್ಷತಂದಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಸಿದ್ದಿ ಪುರುಷ ಚಿಲುಮೆ ರುದ್ರಸ್ವಾಮಿ ಮಠದ ಬಳಿಯ ಗದ್ದುಗೆ ಪೂಜೆ ಸಲ್ಲಿಸಿ ನಂತರ ಶಿಕ್ಷಕರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ನಾನಾ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಮಶ್ಚೇಂದ್ರಯ್ಯ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಪಂಚಾಕ್ಷರಯ್ಯ, ಎನ್.ಎಂ. ಮಂಜುನಾಥ, ಪಿ.ಇ. ಮಂಜುನಾಥ, ಆರ್.ಟಿ. ಲಕ್ಷ್ಮಣರೆಡ್ಡಿ, ಬಸವಂತಪ್ಪ, ಮಲ್ಲಣ್ಣ, ರಾಧಾಮಣಿ, ರೇವಣಸಿದ್ದಪ್ಪ, ರವೀಂದ್ರರೆಡ್ಡಿ, ಶಾರದಾ ತಮ್ಮ 35 ವರ್ಷಗಳ ವೃತ್ತಿ ಜೀವನದ ಅನುಭವ ಹಂಚಿಕೊಂಡರು. ನಾಗೇಗೌಡ, ಹನುಮೇಶ, ರವಿಕುಮಾರ, ಎನ್.ಟಿ. ರಾಜಣ್ಣ, ಮಂಜಣ್ಣ, ಬಸವರಾಜು, ಕರಿಯಣ್ಣ, ನಾಗರಾಜು, ತಿಪ್ಪೇಸ್ವಾಮಿ, ಮಹಾಲಿಂಗಪ್ಪ ಇದ್ದರು.