ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆಯಲ್ಲಿ ಆಸ್ಪತ್ರೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಡಾ. ಬಸವಕುಮಾರ ಸ್ವಾಮೀಜಿ, ಎಸ್.ಲಕ್ಷಿ÷್ಮÃ, ಡಾ. ಸವಿತಾ, ಡಾ.ಎಂ.ಎಸ್. ರಾಜೇಶ್, ಡಾ. ನಾಗೇಂದ್ರಗೌಡ ಇತರರು ಇದ್ದರು.
- ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿಕೆ
- ಬಸವೇಶ್ವರ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ
- ಎಲ್ಲ ಕ್ಷೇತ್ರಗಳಲ್ಲೂ ಮಹತ್ವದ ಸಾಧನೆ
ಚಿತ್ರದುರ್ಗ: ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಕಾರ್ಯವನ್ನಾದರೂ ಸಾಽಸ ಬಲ್ಲಳು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕುಟುಂಬದ ಹೊಣೆಗಾರಿಕೆ ಹೊತ್ತಿರುವ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮಹತ್ವದ ಸಾಧನೆಗಳನ್ನು ಮಾಡಿ ಸೈ ಎನಿಸಿಕೊಂಡಿ ದ್ದಾರೆ ಎಂದರು.
ಚಿತ್ರದುರ್ಗ ನಗರಸಭೆ ಆಯುಕ್ತೆ ಎಸ್. ಲಕ್ಷಿ÷್ಮÃ ಮಾತನಾಡಿ, ಮಹಿಳೆಯರಿಗೆ ಎಲ್ಲ ವೃತ್ತಿಗಳನ್ನು ಸಮರ್ಪಕವಾಗಿ ನಿರ್ವಹಿಸು ವು ಕರಗತವಾಗಿದೆ. ಪ್ರಮುಖ ಹುದ್ದೆಗಳನ್ನು ಸಮರ್ಪಕವಾಗಿ ನಿಬಾಯಿಸುತ್ತಿದ್ದಾರೆ. ಮಹಿಳೆಯಲ್ಲಿ ತಾಳ್ಮೆ ಇರುವುದರಿಂದ ಎಂ ತಹ ಹುದ್ದೆಯನ್ನಾಗಲಿ ಸಮಯೋಚಿತವಾಗಿ ನಿರ್ವಹಿಸುತ್ತಾರೆ ಎಂದರು.
ಎಸ್‌ಜೆಎA ಇನ್ಸಿಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ನ ಡಾ. ಸವಿತಾ, ಕಾಲೇಜಿನ ವೈದ್ಯಕೀಯ ಅಽÃಕ್ಷಕ ಡಾ.ಎಂ.ಎಸ್. ರಾಜೇಶ್, ಉಪ ವೈದ್ಯಕೀಯ ಅಽÃಕ್ಷಕ ಡಾ. ನಾಗೇಂದ್ರಗೌಡ ಮಾತನಾಡಿದರು.
ಬಸವೇಶ್ವರ ಆಸ್ಪತ್ರೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕಮಲಮ್ಮ, ನಾಗರತ್ನಮ್ಮ, ಸುಮಿತ್ರಮ್ಮ, ತ್ರಿವೇಣಿ ಹಾಗೂ ರಾಷ್ಟಿçÃಯ ಕ್ರೀಡಾಪಟು ಪಿ. ಬಿಂದುಶ್ರೀ ಅವರನ್ನು ಗೌರವಿಸಲಾಯಿತು.ಟಿ.ಎಂ. ಶ್ವೇತಾರಾಣಿ,ಜೆ.ಎಚ್. ಶಾರದಮ್ಮ ಹಾಗೂ ಕೆ.ವೈ.ರೂಪಾ ಪ್ರಾರ್ಥಿಸಿದರು. ಕೆ.ಎಸ್. ಶ್ರೀದೇವಿ ಸ್ವಾಗತಿಸಿ, ಉಷಾ ವಂದಿಸಿದರು. ಜಿ.ಯು. ಹೇಮಲತಾ ಹಾಗೂ ಸಿದ್ದಗಂಗಮ್ಮ ನಿರೂಪಿಸಿ ದರು.