ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಆವರಣದ ವಿನಾಯಕ ದೇವಾಲಯ.  
ಚಿತ್ರದುರ್ಗ

ಮಾರ್ಚ್ ೧ರಂದು ದೇವಾಲಯ ಉದ್ಘಾಟನೆ

ಚಿತ್ರದುರ್ಗ: ನಗರದ ಹೊರವಲಯದ ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಆವರಣದಲ್ಲಿ ಮಾ.೧ರಂದು ಮುಂಜಾನೆ ೫.೪೫ಕ್ಕೆ ವಿನಾಯಕ ದೇವಸ್ಥಾನದ ಉದ್ಘಾಟನೆ ಹಾಗೂ ವಿಘ್ನೇಶನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜಸ್ಥಾನದ ಶಿಲೆಗಳನ್ನು ಬಳಸಿ ವಿಶಿಷ್ಟವಾಗಿ ದೇವಾಲಯ ನಿರ್ಮಿಸಲಾಗಿದೆ. ದೇವತಾ ಮೂರ್ತಿಗಳನ್ನು ಅದೇ ರಾಜ್ಯದ ಶಿಲ್ಪಿಗಳು ಸಿದ್ಧಪಡಿಸಿದ್ದಾರೆ. ಸಂಸ್ಥೆಯ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರ ಸಹಕಾರದಿಂದ ನಿರ್ಮಿಸಲಾಗಿದೆ.
ಉದ್ಘಾಟನಾ ದಿನದಂದು ಪ್ರಸಾದ ವಿನಿಯೋಗವಿರುತ್ತದೆ ಎಂದು ಸಂಸ್ಥೆ ಕಾರ್ಯದರ್ಶಿ ಎಂ. ನೀಲಕಂಠದೇವರು ತಿಳಿಸಿದ್ದಾರೆ.