ಚಿತ್ರದುರ್ಗ ಕವಾಡಿಗರಹಟ್ಟಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಉತ್ತರಾಖಂಡ್ ರಾಜ್ಯದ ತೆಹ್ರಿಗರ್ವಾ ಲ್ ಜಿಲ್ಲೆಯ ಡಯಟ್ ಪ್ರಾಚಾರ್ಯ ಸುಮೆರ್‌ಸಿಂಗ್ ಮತ್ತು ಉಪನ್ಯಾಸಕರ ತಂಡ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಪಡೆ ಯಿತು. ಚಿತ್ರದುರ್ಗ ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಉಪ ಪ್ರಾಚಾರ್ಯ ಎಸ್. ನಾಗಭೂಷಣ್ ಇತರರು ಇದ್ದಾರೆ.
- ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಸಂಗ್ರಹ
- ಜಿಲ್ಲೆಯ ಸಂಸ್ಕೃತಿ, ಆಹಾರ ಪದ್ಧತಿಗೆ ಮೆಚ್ಚುಗೆ
- ಕಲಿಕಾ ಚಟುವಟಿಕೆಗಳು
ಚಿತ್ರದುರ್ಗ: ಶೈಕ್ಷಣಿಕ ಪ್ರವಾಸದ ನಿಮಿತ್ತ ಉತ್ತರಾಖಂಡ್ ತೆಹ್ರಿ ಗರ್ವಾಲ್ ಜಿಲ್ಲೆ ಡಯಟ್ ಪ್ರಾಚಾರ್ಯ ಮತ್ತು ಉಪನ್ಯಾಸಕರ ತಂಡ ಚಿತ್ರದುರ್ಗದ ಡಯಟ್‌ಗೆ ಗುರುವಾರ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ನಗರದ ಕವಾಡಿಗರ ಹಟ್ಟಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಚಟುವಟಿಕೆ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ತೆಹ್ರಿ ಡಯಟ್ ಪ್ರಾಚಾರ್ಯ ಸುಮೆರ್‌ಸಿಂಗ್, ಶಾಲೆಯಲ್ಲಿ ಮುಖ್ಯಶಿಕ್ಷಕರು ಮತ್ತು ಶಿಕ್ಷಕರ ನಡುವೆ ಸಹಕಾರ, ಸಮನ್ವಯತೆ ಅತ್ಯುತ್ತಮವಾಗಿದೆ. ಮಕ್ಕಳ ಕಲಿಕೆ, ಆತ್ಮವಿಶ್ವಾಸದಿಂದ ಓದುವ, ಕಲಿಕಾ ಚಟುವಟಿಕೆಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಸ್ಕೃತಿ, ಆಹಾರ ಪದ್ಧತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದುರ್ಗ ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಉಪ ಪ್ರಾಚಾರ್ಯ ಎಸ್. ನಾಗಭೂಷಣ್, ಉಪನ್ಯಾಸಕ ಎಸ್. ಬಸವ ರಾಜು, ಸಿಆರ್‌ಪಿ ತಿಮ್ಮರಾಜು, ತೆಹ್ರಿ ಡಯಟ್‌ನ ಉಪನ್ಯಾಸಕರಾದ ದೇವೇಂದ್ರಸಿAಗ್, ದೀಪಕ್‌ರತನ್, ಡಾ. ವೀರ್‌ಸಿಂಗ್, ಡಾ. ಮನ್ವೀರ್‌ಸಿಂಗ್, ವಿನೋದ್‌ಪ್ರಸಾದ್, ರಾಜೇಂದ್ರಪ್ರಸಾದ್, ಸುಮನ್, ಸೀಮಾ ಶರ್ಮಾ, ನಿರ್ಮಲಾಸಿಂಗ್ ಹಾಗೂ ಮುಖ್ಯಶಿಕ್ಷಕ ರುದ್ರಮುನಿ, ಶಿಕ್ಷಕರು ಇದ್ದರು.