ಚಿತ್ರದುರ್ಗದಲ್ಲಿ ಗುರುವಾರ ಟಿಇಟಿ ಪರೀಕ್ಷೆ ಕುರಿತ ಪೂರ್ವ ಸಿದ್ಧತಾ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಿಡಿಪಿಐ ಎಂ. ಆರ್. ಮಂಜುನಾಥ್, ಡಯಟ್ ಪ್ರಾಚಾರ್ಯ ಎಂ.ನಾಸೀರುದ್ದೀನ್ ಇತರರು ಇದ್ದರು.
- ೧೨,೮೧೩ ಅಭ್ಯರ್ಥಿಗಳ ನೋಂದಣಿ
- ಪರೀಕ್ಷಾ ನಿಯಮಗಳ ಕಡ್ಡಾಯ ಪಾಲಿಸಿ
- ಅಽಕಾರಿಗಳಿಗೆ ಎಡಿಸಿ ಸೂಚನೆ
ಚಿತ್ರದುರ್ಗ: ಶಿಕ್ಷಣ ಇಲಾಖೆ, ಕೇಂದ್ರಿಕೃತ ದಾಖಲಾತಿ ಘಟಕದಿಂದ ಚಿತ್ರದುರ್ಗದಲ್ಲಿ ಡಿ.೭ರಂದು ಪತ್ರಿಕೆ-೧ ಹಾಗೂ ಪತ್ರಿಕೆ-೨ ಸೇರಿ ೧೨,೮೧೩ ಅಭ್ಯರ್ಥಿಗಳು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-೨೦೨೫(ಟಿಇಟಿ)ಗೆ ಹಾಜರಾಗಲಿದ್ದಾರೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಪರೀಕ್ಷಾ ಕೇಂದ್ರಗಳ ಮುಖ್ಯ ಅಽÃಕ್ಷಕರು ನಿಯ ಮಗಳ ಕಡ್ಡಾಯ ಪಾಲನೆ ಮೂಲಕ ಅಭ್ಯರ್ಥಿಗಳಿಗೆ ತೊಂದರೆಯಾಗದAತೆ ಕಾರ್ಯನಿರ್ವಹಿಸಬೇಕು ಎಂದರು.
೭ರಂದು ಪತ್ರಿಕೆ-೧ರ ಪರೀಕ್ಷೆ ಬೆಳಗ್ಗೆ ೯. ೩೦ ರಿಂದ ೧೨ ರವರೆಗೆ ಹಾಗೂ ಪತ್ರಿಕೆ-೨ರ ಪರೀಕ್ಷೆ ಮಧ್ಯಾಹ್ನ ೨ರಿಂದ ೪.೩೦ ರವ ರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾನೆ ೭ರಿಂದ ೯, ಮಧ್ಯಾಹ್ನ ೧೨.೧೫ ರಿಂದ ೧.೩೦ ರವರೆಗೆ ಅಭ್ಯರ್ಥಿಗಳ ಸಮಗ್ರ ತಪಾಸಣೆ ಕಾರ್ಯ ಹಾಗೂ ಪ್ರವೇಶ ಪತ್ರದ ಮುಖ ಚಹರೆ ತಾಳೆ ನೋಡಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಕೆಪಿಎಸ್‌ಸಿ ಪರೀಕ್ಷೆ ವೇಳೆ ಕೆಲವು ಕೇಂದ್ರಗಳಲ್ಲಿ ತಪಾಸಣÉ ವೇಳೆ ಅಭ್ಯರ್ಥಿಗಳ ಉದ್ದನೆಯ ಸಾಲು ರಸ್ತೆಯವರೆಗೂ ವ್ಯಾಪಿಸಿತ್ತು. ಈ ರೀತಿ ಗೊಂದಲಗಳಿಗೆ ಕೇಂದ್ರದ ಮುಖ್ಯಸ್ಥರು ಅವಕಾಶ ನೀಡಬಾರದು. ಅಭ್ಯರ್ಥಿಗಳು ಸಹ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು ಎಂದರು.
ಪತ್ರಿಕೆ-೧ ನಗರದ ೮ ಕೇಂದ್ರಗಳಲ್ಲಿ ನಡೆಯಲಿದ್ದು, ೨,೬೨೩ ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪತ್ರಿಕೆ-೨ ನಗರದ ೩೫ ಕೇಂದ್ರ ಗಳಲ್ಲಿ ನಡೆಯಲಿದ್ದು, ೧೦,೧೯೦ ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪ್ರತಿ ಕೇಂದ್ರಗಳಲ್ಲಿ ಬಂದೋಬಸ್ತ್, ಮಾರ್ಗಾಽ ಕಾರಿಗಳ ತಂಡಗಳಿಗೆ ಭದ್ರತೆ ಹಾಗೂ ೮ ರಂದು ಉತ್ತರ ಪತ್ರಿಕೆಗಳನ್ನು ಬೆಂಗಳೂರಿಗೆ ಕೊಂಡೊಯ್ಯುವ ಅಽಕಾರಿಗಳಿಗೆ ಬೆಂಗಾವಲು ಪಡೆ ನಿಯೋಜಿಸಬೇಕು ಎಂದರು.
೩೫ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗುವುದು. ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ಉಪಕರಣ ಹಾಗೂ ಔಷಧಗಳೊಂದಿಗೆ ಆರೋಗ್ಯ ಸಹಾಯಕರು ಇರಬೇಕು. ವಿದ್ಯುತ್ ಅಡಚಣÉ ಉಂಟಾಗದAತೆ ಕ್ರಮವಹಿಸಬೇಕು. ಪರೀಕ್ಷಾ ಕಾರ್ಯಕ್ಕೆ ಗೈರು ಹಾಜರಾಗುವಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಡಿಸಿ ಎಚ್ಚರಿಸಿದರು.
ಜಿಪಂ ಕಚೇರಿಯಲ್ಲಿ ಪರೀಕ್ಷೆ ವೆಬ್ ಕಾಸ್ಟಿಂಗ್ ಇರುತ್ತದೆ ಎಂದು ಡಿಡಿಪಿಐ ಎಂ.ಆರ್. ಮಂಜುನಾಥ ಮಾಹಿತಿ ನೀಡಿದರು. ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ನೋಡಲ್ ಅಽಕಾರಿ ಮಹಮದ್ ಇನಾಯತ್‌ಉಲ್ಲಾ, ಜಿಲ್ಲಾ ಖಜನಾಽಕಾರಿ ಎಚ್.ಟಿ. ಅಶೋ ಕ್ ಇತರರು ಇದ್ದರು.