ಭಾರತೀಯ ಜನತಾ ಪಕ್ಷದಿಂದ ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ವಿಬಿ ರಾಮ್ ಜಿ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಎಂಎಲ್‌ಸಿ ಕೆ.ಎಸ್. ನವೀನ್, ಕೆ.ಟಿ. ಕುಮಾರಸ್ವಾಮಿ, ಎ. ಮುರುಳಿ, ಎನ್.ಆರ್. ಲಕ್ಷಿ÷್ಮÃಕಾಂತ್, ವೆಂಕಟೇಶ್ ಯಾದವ್, ಅನಿಲ್, ಡಾ. ಮಂಜುನಾಥ್, ಮುರಾರ್ಜಿ, ಮಾಧುರಿ ಗಿರೀಶ್, ಮೋಹನ್‌ಕುಮಾರ್, ನಾಗರಾಜ್‌ಬೇದ್ರೆ ಇತರರು ಇದ್ದರು. 
ಚಿತ್ರದುರ್ಗ

ವಿಬಿಜಿ ರಾಮ್‌ಜಿ ವಿರೋಽಸುತ್ತಿರುವ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಿ

ಪ್ರಮುಖ ಮುಖ್ಯಾಂಶಗಳು

  • ದುಡ್ಡ ಹೊಡೆಲಾಗದೆಂದು`ಕೈ'ನಾಯಕರಿAದ ಅಪಪ್ರಚಾರ
  • ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆಕ್ರೋಶ
  • ಹೊಸ ಕಾಯ್ದೆ ಕುರಿತು ಜನ ಜಾಗೃತಿ ಪಾದಯಾತ್ರೆ
ಚಿತ್ರದುರ್ಗ: ಭ್ರಷ್ಟಾಚಾರ ರಹಿತ, ನಿರ್ದಿಷ್ಟ ದಿನಗಳ ಕಾಲ ಗ್ರಾಮೀಣರಿಗೆ ಉದ್ಯೋಗ ಒದಗಿಸುವ ಸಲುವಾಗಿ ಕೇಂದ್ರ ಜಾರಿಗೊಳಿಸಿರುವ ವಿಬಿಜಿ ರಾಮ್‌ಜಿ ಯೋಜನೆ ಬಗ್ಗೆ ಕಾಂಗ್ರೆಸ್‌ ಅಪಪ್ರಚಾರದಲ್ಲಿ ತೊಡಗಿದೆ ಎಂದು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ನಗರದ ಜಗಳೂರು ಮಹಾಲಿಂಗಪ್ಪ ಕಂಫರ್ಟ್ಸ್ನಲ್ಲಿ ಶನಿವಾರ ಆಯೋಜಿಸಿದ್ದ ವಿಬಿಜಿ ರಾಮ್‌ಜಿ ಜಾಗೃತಿ ಅಭಿಯಾ ನದಲ್ಲಿ ಮಾತನಾಡಿ, ಗ್ರಾಮಾಂತರ ಪ್ರದೇಶದ ಜನರಿಗೆ ಯೋಜನೆ ಕುರಿತಂತೆ ಕರಾರುವಕ್ಕಾದ ಮಾಹಿತಿ ಕೊಡುವ ಮೂಲಕ ಅಪ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವಂತೆ ಪಕ್ಷದ ಕಾರ್ಯಕರ್ತರಿಗೆ ನಿರ್ದೇಶಿಸಿದರು.
ಗ್ರಾಮೀಣ ಕೂಲಿ, ಕಾರ್ಮಿಕರ ಅನುಕೂಲಕ್ಕಾಗಿ ಮನರೇಗಾಕ್ಕೆ ತಿದ್ದುಪಡಿ ತಂದು ವಿಬಿಜಿ ರಾಮ್‌ಜಿಯನ್ನು ಕೇಂದ್ರ ಜಾರಿಗೊಳಿ ಸಿದೆ. ಇದರಿಂದ ಮನರೇಗಾದಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರಕ್ಕೆ ನರೇಂದ್ರ ಮೋದಿ ಸರ್ಕಾರ ಕಡಿವಾಣ ಹಾಕಿದೆ. ಹೊಸ ಕಾಯ್ದೆ ಯಿಂದ ದುಡ್ಡು ಹೊಡೆಯಲು ಸಾಧ್ಯವಾಗುತ್ತಿಲ್ಲವೆಂಬ ಹೊಟ್ಟೆ ಉರಿಯಿಂದ ಗಾಂಽÃಜಿ ಅವರ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ರಂಪ ರಾಮಾಯಣ ಮಾಡುತ್ತಾ ಬೀದಿಗಿಳಿದಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಮನರೇಗಾದಲ್ಲಿ ಪುಡಿ ರಾಜಕಾರಣಿಗಳು ಕಾಮಗಾರಿಗಳನ್ನು ಮಾಡದೆ ಹಣ ಲೂಟಿ ಹೊಡೆಯುತ್ತಿದ್ದರು. ಈಗ ಕೇಂದ್ರ ಸರ್ಕಾರ ಲೂಟಿ ತಡೆಯಲು ಮುಂದಾಗಿದೆ. ಯಾವುದೇ ಕಾಮಗಾರಿಗೆ ಅನುಮತಿ ಪಡೆದು ಅದನ್ನು ನಿಗದಿತ ಅವಽಯೊಳಗೆ ಪೂರ್ಣ ಗೊಳಿಸುವಂತೆ ತಾಕೀತು ಮಾಡಿದೆ ಎಂದರು.
ಇದು ಕಾಂಗ್ರೆಸ್‌ರವರಿಗೆ ನುಂಗಲಾರದ ತುತ್ತಾಗಿದೆ. ನಮ್ಮ ಅಕ್ರಮ ಸಂಪಾದನೆಗೆ ಅಡ್ಡಿಯಾಗಿದೆ ಎಂದು ಕೂರುಗುತ್ತಾ ಯೋಜನೆ ವಿರೋಽಸುತ್ತಿದ್ದಾರೆ. ವಿಬಿಜಿ ರಾಮ್‌ಜಿ ವಿರುದ್ಧ ಹೋರಾಟ ಮಾಡುವಂತೆ ಗ್ರಾಪಂ ಸದಸ್ಯರನ್ನು ಪ್ರೇರೆಪಿಸುವ ಮೂಲಕ ರಾಜ್ಯಸರ್ಕಾರ ತನ್ನ ಅಽಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ತಿಪ್ಪಾರೆಡ್ಡಿ ಹರಿಹಾಯ್ದರು.
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಕಾಂಗ್ರೆಸ್ಸಿಗೆ ಸುಳ್ಳೇ ಮನೆ ದೇವರು. ಸುಳ್ಳನ್ನು ನೂರು ಬಾರಿ ಹೇಳದರೆ ಸತ್ಯವಾ ಗುತ್ತದೆ ಎಂದು ನಂಬಿದ್ದಾರೆ. ಪಂಡಿತ್‌ಜವಾಹರ್‌ಲಾಲ್ ನೆಹರು ಅವರ ಕಾಲದಿಂದಲೂ ಸಹಾ ಅವರು ಸುಳ್ಳು ಹೇಳುತ್ತಾ ಬಂದು ಜನರನ್ನು ನಂಬಿಸುತ್ತಿದ್ದಾರೆ. ಕಾಯ್ದೆ ವಿರುದ್ಧ ರಾಜ್ಯ ಸರ್ಕಾರವೇ ಅಪ ಪ್ರಚಾರದಲ್ಲಿ ತೊಡಗಿದೆ ಎಂದರು.
ನಕಲಿ ಗಾಂಽಗಳ ಹೆಸರಲ್ಲಿ ೪೦೦ಕ್ಕೂ ಹೆಚ್ಚು ಯೋಜನೆಗಳಿವೆ. ಗಾಂಽÃಜಿ ಹೆಸರು ತೆಗೆಯಲಾಗಿದೆ ಎಂದು ಕಾಂಗ್ರೆಸ್ಸಿಗರು ಬೊಬ್ಬೆ ಹೊಡಿಯುತ್ತಿದ್ದಾರೆ. ಹೊಸ ಕಾಯ್ದೆಯಿಂದ ಕೂಲಿ, ಕಾರ್ಮಿಕರಿಗೆ ಉಪಯೋಗವಾಗಿದೆ. ಒಂದು ವಾರದಲ್ಲಿ ಕೂಲಿ ಹಣ ಬರುತ್ತದೆ.
೧೫ ದಿನವಾದರೂ ಹಣ ಬರದಿದ್ದರೆ ಅದಕ್ಕೆ ಬಡ್ಡಿ ಸೇರಿಸಿ ಕೂಡಬೇಕೆಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಯುಗಾದಿಯೊಳಗೆ ಪಕ್ಷದ ಕಾರ್ಯಕರ್ತರು ಪಾದಯಾತ್ರೆ ಮೂಲಕ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎ. ಮುರುಳಿ, ಎನ್.ಆರ್. ಲಕ್ಷಿ÷್ಮÃಕಾಂತ್, ವೆಂಕಟೇಶ್‌ ಯಾದವ್, ಅನಿಲ್, ಡಾ. ಮಂಜುನಾಥ್, ಮುರಾರ್ಜಿ, ಮಾಧುರಿ ಗಿರೀಶ್, ಮೋಹನ್‌ಕುಮಾರ್, ನಾಗರಾಜ್‌ಬೇದ್ರೆ ಇತರರು ಇದ್ದರು.
"

ಮಹಾತ್ಮ ಗಾಂಽÃಜಿ ಅವರಿಗೆ ರಾಮನ ಮೇಲೆ ಇರುವ ನಂಬಿಕೆ, ಈಗಿನ ಕಾಂಗ್ರೆಸ್ಸಿಗರಿಗೆ ಇಲ್ಲವಾಗಿದೆ. ರಾಮನ ಹೆಸರು ಹೇಳಿದರೆ ಕಾಂಗ್ರೆಸ್ ನಾಯಕರಿಗೆ ಆಗದು.