ಚಿತ್ರದುರ್ಗದ ಎಸ್‌ಜೆಎಂ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದ ವಿದ್ಯಾರ್ಥಿಗಳಿಗೆ ಭಾನುವಾರ ಪ್ರಮಾಣ ಪತ್ರ ವಿತರಿಸಲಾಯಿತು. ಡಾ. ಬಸವಪ್ರಭು ಸ್ವಾಮೀಜಿ, ಸಿ. ಬಸವರಾಜ್, ಇ.ಎಸ್. ಇಂದರೇಶ್, ಟಿ. ವೆಂಕಟೇಶ್‌ನಾಯಕ್, ಶಿವಯೋಗಿ ಸಿ. ಕಳಸದ್, ಡಾ.ಎಸ್. ದಿನೇಶ್ ಇತರರಿದ್ದರು. 
ಚಿತ್ರದುರ್ಗ

ಉತ್ತಮ ರೀತಿಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕಾನೂನು ಪದವೀಧರರಿಗೆ ಬಸವಪ್ರಭು ಸ್ವಾಮೀಜಿ ಸಲಹೆ
  • ಪದವಿ ಪ್ರಮಾಣ ಪತ್ರ ವಿತರಣೆ
  • ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ,
ಚಿತ್ರದುರ್ಗ: ಕಾನೂನು ಪದವಿಧರರು ಉತ್ತಮ ರೀತಿಯಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು.
ಎಸ್‌ಜೆಎಂ ಕಾನೂನು ಮಹಾವಿದ್ಯಾಲಯದಿಂದ ೨೦೨೫ರವರೆಗೂ ಕಾನೂನು ಪದವಿ ಪ್ರಮಾಣ ಪತ್ರ ವಿತರಣೆ, ಅಂತಿಮ ವರ್ಷ ದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಲೆಕ್ಸ್ ಯೂನಿಯನ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಧರಿಸುವ ಉಡುಪಿನಷ್ಟೇ ಜೀವನವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಕಾನೂನು ವಿವಿ ಉಪಕುಲಪತಿ ಸಿ. ಬಸವರಾಜ್ ಮಾತನಾಡಿ, ಕಾನೂನು ಪದವಿ ಪಡೆದ ವಿದ್ಯಾರ್ಥಿಗಳು ವಕೀಲರಾದ ಬ ಳಿಕ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿ ದರು.
ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದರೇಶ್ ಮಾತನಾಡಿ, ಕಾನೂನು ಪದವೀಧರರು ಸಾಮಾಜಿಕ ಇಂಜಿನಿಯರ್‌ ಗಳ Aತೆ ಕಾರ್ಯನಿರ್ವಹಿಸುತ್ತಾರೆ. ಕಾಯ್ದೆ ಕಾನೂನುಗಳ ಕುರಿತು ಮಾಹಿತಿ ನೀಡಲು ವಕೀಲರ ಸೇವೆ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಹೈಕೋರ್ಟ್ ಜq್ಜï ಟಿ. ವೆಂಕಟೇಶ್‌ನಾಯಕ್ ಮಾತನಾಡಿ, ಕಾನೂನು ಕಠಿಣ ಹಾದಿಯಲ್ಲಿ ಸಾಗುವ ಪದವಿಯಾಗಿದೆ. ಅಲ್ಲದೆ, ವೃತ್ತಿನಿರತರಾದ ಬಳಿಕ ಜವಾಬ್ದಾರಿಯಿಂದ ಸೇವೆ ಸಲ್ಲಿಸಬೇಕಿದೆ ಎಂದರು.
ಇದೇ ವೇಳೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಜೆ ಎಂ ವಿದ್ಯಾಪೀಠದ ಆಡಳಿತಾಽಕಾರಿ ಶಿವಯೋಗಿ ಸಿ. ಕಳಸದ್, ಪ್ರಾಚಾರ್ಯ ಡಾ.ಎಸ್. ದಿನೇಶ್, ದೈಹಿಕ ಶಿಕ್ಷಣ ನಿರ್ದೇಶಕಿ ಸುನಿತಾ, ಸಹಾಯಕ ಪ್ರಾಧ್ಯಾಪಕಿಯರಾದ ರೂಪಾ, ಕರಕಪ್ಪ ಮೇಟಿ, ಎಂ. ರಮೇಶ್, ಟಿ. ಶೈಲಜಾ, ಟಿ.ಎಸ್. ಗಿರೀಶ್, ಅಂಬಿ ಕಾ, ಸ್ಮಿತಾ, ರೂಪಾ, ಸಲ್ಮಾ ಸುಲ್ತಾನ ಇತರರಿದ್ದರು.