ಮೊಳಕಾಲ್ಮೂರು: ಬೇಸಿಗೆ ಸಮೀಪಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪೂರಕ ಸಿದ್ಧತಾ ಕ್ರಮ ಕೈಗೊಳ್ಳಬೇಕು ಎಂದು ಇಒ ಎಚ್. ಹನುಮಂತಪ್ಪ ಅವರು ಇಂಜಿನಿಯರ್ ವಿಲಾಸ್ ಅವರಿಗೆ ತಾಕೀತು ವಾಡಿದರು. ತಾಪಂ ಕಚೇರಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಎಂ. ಬಿಂದು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿಪರಿಶೀಲನಾ ಸಭೆಯಲ್ಲಿ ವಾತನಾಡಿದ ಅವರು ರಾಜ್ಯದಲ್ಲಿ ಬೀಕರ ಬರ ಕಾಣಿಸಿಕೊಂಡಿದೆ. ಜನ, ಜಾನುನಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗೆ ಸಿದ್ಧತೆ ವಾಡಿಕೊಳ್ಳಬೇಕು. ಇದಕ್ಕೆ ಜಿಲ್ಲಾಡಳಿತದ ಸೂಚನೆಯೂ ಇದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈಗಾಗಲೇ ನೀರಿನ ಅಭಾವ ತಲೆದೋರಿದ್ದು, ಟ್ಯಾಂಕರ್ಗಳ ಮೊರೆ ಹೋಗುವಂತಾಗಿದೆ. ನಮ್ಮ ತಾಲೂಕಿನಲ್ಲಿ ಅಂತಹ ಪರಿಸ್ಥಿತಿ ಕಂಡು ಬಂದಿಲ್ಲ. ತುಂಗಾ ಭದ್ರಾ ಹಿನ್ನೀರು ಲಭ್ಯ ಇರುವುದು ನಮ್ಮ ಪುಣ್ಯ. ಆರ್ಓ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಮಳೆ ಅಭಾವದಿಂದ ಜಾನುವಾರುಗಳಿಗೆ ಮೇವು, ನೀರು ಒದಗಿಸಲು ಸರ್ಕಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ನ. 7ರ ಒಳಗೆ ತಾಲೂಕಿನ ಮುತ್ತಿಗಾರಹಳ್ಳಿ, ವಾರಮ್ಮನ ಹಳ್ಳಿ ಹಾಗೂ ಕೊಂಡ್ಲಹಳ್ಳಿ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ತರೆಯುವಂತೆ ಜಿಲ್ಲಾಡಳಿತ ಸೂಚಿಸಿದೆ. ಅದಕ್ಕೆ ಪೂರಕವಾಗಿ ಪಶು ಇಲಾಖೆ ಅಧಿಕಾರಿಗಳು ಸಿದ್ಧತೆ ವಾಡಿಕೊಳ್ಳಬೇಕು ಎಂದು ಸೂಚಿಸಿದರು. ಆಯಾ ಪ್ರದೇಶದ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಆಂಧ್ರ ಪ್ರದೇಶದಿಂದ ಮೇವು ತರಿಸುವ ವ್ಯವಸ್ಥೆ ವಾಡಿಕೊಳ್ಳಲಾಗಿದೆ. ಈ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪಶು ಇಲಾಖೆ ಅಧಿಕಾರಿಗೆ ಇಒ ಸೂಚಿಸಿದರು.
ಅನಿರ್ಬಂಧಿತ ಯೋಜನೆಯಡಿ 2 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಶಾಲಾ ಕಟ್ಟಡ ದುರಸ್ತಿ, ಅಂಗನವಾಡಿ ಕಟ್ಟಡಗಳ ನಿರ್ವಾಣ, ಅವಶ್ಯಕ ಸಾಮಗ್ರಿ ಖರೀದಿ, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ದೈನಂದಿನ ವೈದ್ಯಕೀಯ ಅಗತ್ಯಳಿಗೆ ಪೂರಕ ಸಾಮಗ್ರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಇಒ ಸೂಚಿಸಿದರು. ತಾಲೂಕು ಪಂಚಾಯಿತಿ, ಬಿಇಒ ಕಚೇರಿ ಹಾಗೂ ಒಳ ಕ್ರೀಡಾಂಗಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ತುರ್ತಾಗಿ ಪೂರ್ಣಗೊಳಿಸಬೇಕು ಎಂದು ನಿರ್ಮಿತಿ ಕೇಂದ್ರದ ಇಂಜಿನಿಯರ್ ಸತೀಶ್ ಅವರಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು.
ಅಂಗನವಾಡಿ ಹಾಗೂ ಶಾಲೆಗಳಲ್ಲಿ ಅನೈರ್ಮಲ್ಯ ಕುರಿತಂತೆ ದೂರುಗಳು ಬರುತ್ತಿವೆ. ಅಡುಗೆ ಸಿಬ್ಬಂದಿಗೆ ಕಡಕ್ ಸೂಚನೆ ಕೊಡಬೇಕು. ಸರ್ಕಾರದ ವಾರ್ಗಸೂಚಿಯಂತೆ ಸ್ವಚ್ಛತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂಬ ಆಪಾದನೆ ಇದೆ. ಮಕ್ಕಳ ದೈಹಿಕ ಹಾಗೂ ವಾನಸಿಕ ಆರೋಗ್ಯ ರಕ್ಷಣೆಯ ಜವಾಬ್ದಾರಿ ನಿರ್ವಹಣೆಯಲ್ಲಿ ಲೋಪ ಕಂಡು ಬಂದರೆ ಸಹಿಸುವುದಿಲ್ಲ ಎಂದು ಸಿಡಿಪಿಒ ಹಾಗೂ ಅಕ್ಷರ ದಾಸೋಹ ಅಧಿಕಾರಿಗೆ ಆಡಳಿತಾಧಿಕಾರಿ ಎಂ. ಬಿಂದು ಎಚ್ಚರಿಕೆ ನೀಡಿದರು.
ಗ್ರಾಮೀಣರಿಗೆ ಮೂಲ ಸೌಕರ್ಯ ಗಳನ್ನು ಕಲ್ಪಿಸುವ ಉದ್ದೇಶದಿಂದ ಅನುದಾನಗಳನ್ನು ಬಳಸಿಕೊಳ್ಳಲು ಸರ್ಕಾರ ಗ್ರಾಪಂ ಆಡಳಿತಕ್ಕೆ ಪರವಾಧಿಕಾರ ಕೊಟ್ಟಿದೆ. ಆದರೆ, ಕಳೆದ 2 ವರ್ಷಗಳಿಂದ 15ನೇ ಹಣಕಾಸು ಯೋಜನೆಯಡಿ ಬಿಡಿಗಾಸು ಬಂದಿಲ್ಲ. ಇದರಿಂದ ಗ್ರಾಪಂಗಳ ಕಾರ್ಯ ನಿರ್ವಹಣೆ ಕಷ್ಟವಾಗಿದೆ. ಗ್ರಾಮೀಣ ಕುಡಿಯುವ ನೀರು ಇಲಾಖೆ ತುರ್ತು ವ್ಯವಸ್ಥೆಗೆ ಅನುದಾನ ಮೀಸಲಿಟ್ಟರೆ ಸುಧಾರಣೆ ಸಾಧ್ಯವಾಗಲಿದೆ. ತಾವೇಕೆ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿಲ್ಲ ಎಂದು ಇಂಜಿನಿಯರ್ ಅವರನ್ನು ಇಒ ತರಾಟೆಗೆ ತಗೆದುಕೊಂಡರು.