ಚಿತ್ರದುರ್ಗ: ಹಿರಿಯೂರಲ್ಲಿ ಬೆಳಕಿಗೆ ಬಂದಿರುವ ಯುವತಿಯ ಅನುಮಾನಾಸ್ಪದÀ ಸಾವು, ಲವ್ಜಿಹಾದ್ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಗ್ರಹಪಡಿಸಿದ್ದಾರೆ.
ಹಿರಿಯೂರು ತಾಲೂಕಿನ ಗ್ರಾಮವೊಂದರ ಹಿಂದೂ ಯುವತಿಯನ್ನು ಹಿರಿಯೂರಿನ ಮುಸ್ಲಿಂ ಯುವಕ ಪ್ರೀತಿಸಿ, ೨೦೨೩ ಫೆಬ್ರವರಿ ೨೧ರಂದು ಮದುವೆಯಾಗಿದ್ದಾನೆ. ಆ ಸಂದರ್ಭದಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಹಿರಿಯೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ನಿಮ್ಮ ಮಗಳು ಮದುವೆಯಾಗಿದ್ದಾಳೆ. ನೀವು ಅವರ ಸುದ್ದಿಗೆ ಹೋಗುವಂತಿಲ್ಲವೆAದು ತಿಳಿಸಿ, ಅವರಿಂದ ಹೇಳಿಕೆ ತೆಗೆದುಕೊಂಡಿದ್ದರು ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಎಸ್ಪಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ನಂತರದ ದಿನಗಳಲ್ಲಿ ಮುಸ್ಲಿಂ ಯುವಕ ತಾನು ವರಿಸಿದ ಯುವತಿಗೆ ಮಾನಸಿಕ, ದೈಹಿಕ ಹಿಂಸೆ ನೀಡುವುದು, ತವರು ಮನೆಯಿಂದ ಹಣ ತರುವಂತೆ ಪೀಡಿಸುವುದಷ್ಟೇ ಅಲ್ಲ, ಇಸ್ಲಾಂಗೆ ಮತಾಂತರವಾಗುವAತೆ ಒತ್ತಾಯಿಸಿ ಜಾತಿ ನಿಂದನೆ ಮಾಡಿದ್ದಾನೆಂದು ವೇದಿಕೆ ಪ್ರಮುಖರು ಆರೋಪ ಮಾಡಿದ್ದಾರೆ.
ತಾನು ಅನುಭವಿಸುತ್ತಿರುವ ನೋವನ್ನು ಯುವತಿ ತನ್ನ ಅಕ್ಕ ಹಾಗೂ ತಾಯಿಗೆ ಫೋನ್ ಮೂಲಕ ತಿಳಿಸಿದ್ದು, ಹಣಕ್ಕಾಗಿ ಪೀಡಿಸುತ್ತಿರುವುದನ್ನು ತಿಳಿದ ಯುವತಿಯ ತಾಯಿ ಹಾಗೂ ಅಕ್ಕ -ೆÆÃನ್ಪೇ ಮೂಲಕ ಹಾಗೂ ನಗದಾಗಿ ಹಣ ಕೊಟ್ಟಿದ್ದಾರೆ. ಪ್ರೀತಿಸಿ ಮದುವೆಯಾಗಿ, ಈಗ ಕಿರುಕುಳ ನೀಡುತ್ತಿರುವುದು ಏಕೆ? ಎಂದು ಯುವತಿಯ ತಾಯಿ ಪ್ರಶ್ನಿಸಿದರೆ ಅವರನ್ನೂ ಬೈದು, ಜಾತಿ ನಿಂದನೆ ಮಾಡಿದ್ದಾನೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇಸ್ಲಾಂಗೆ ಮತಾಂತರವಾಗುವAತೆ ನಿತ್ಯ ಕಿರುಕುಳ ನೀಡುತ್ತಿದ್ದು, ಯುವತಿ ಅ.೧೨ರಂದು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುತ್ತಾಳೆ. ಮೋಸದ ಪ್ರೀತಿ ಬಲೆಗೆ ಬಿದ್ದು ಸಾವಿಗೀಡಾಗಿರುವುದನ್ನು ಗಮನಿಸಿದರೆ ಇದು ನೇರ ಲವ್ ಜಿಹಾದ್ ಪ್ರಕರಣ. ಆದ್ದರಿಂದ ಹೆಚ್ಚಿನ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು. ಇಂಥ ಪ್ರಕರಣಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಗಮನಹರಿಸಬೇಕೆಂದು ವೇದಿಕೆ ಪ್ರಮುಖರು ಎಸ್ಪಿ ಅವರನ್ನು ಒತ್ತಾಯಿಸಿದ್ದಾರೆ.
ವೇದಿಕೆ ಜಿಲ್ಲಾ ಸಂಯೋಜಕ ಪಿ. ರುದ್ರೇಶ್, ಶ್ರೀನಿವಾಸ್, ಮಂಜುನಾಥ್, ತೇಜು, ಭೀಮೇಶ್, ದರ್ಶನ್ ಸ್ವಾಮಿ, ಅಖಿಲೇಶ್ ಇತರರು ಎಸ್ಪಿ ಎಸ್ಪಿ ಕುಶಲ್ ಚೌಕ್ಸೆ ಅವರನ್ನು ಭೇಟಿ ಮಾಡಿದ್ದರು.