ಚಿತ್ರದುರ್ಗದಲ್ಲಿ ಆಯವೋಜಿಸಿರುವ ೧೫ ದಿನಗಳ ಬೇಸಿಗೆ ಶಿಬಿರಕ್ಕೆ ಮಂಗಳವಾರ ಕೆ.ಎಚ್. ವಿಜಯಕುಮಾರ್ ಚಾಲನೆ ನೀಡಿದರು. ಜ್ಯೋತಿರಾಜ್, ಜೆ. ವೈಶಾಲಿ, ಸುರೇಶ್, ರಾಜನಾಯ್ಕ್, ನವೀನ್‌ಕುಮಾರ್,ನಿರ್ಮಲಾ ಇತರರು ಇದ್ದರು.
- ಕೆ.ಎಚ್. ವಿಜಯಕುಮಾರ್ ಅಭಿಪ್ರಾಯ
- ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ
- ರಾಜ್ಯ ಬಾಲಭವನ ಸೊಸೈಟಿ
ಚಿತ್ರದುರ್ಗ: ಮಕ್ಕಳ ಉಲ್ಲಾಸಕ್ಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಪೂರಕ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್ ಹೇಳಿದರು.
ರಾಜ್ಯ ಬಾಲಭವನ ಸೊಸೈಟಿ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವÊದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ೧೫ ದಿನಗಳ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ, ಟಿವಿ ಮತ್ತು ಮೊಬೈಲ್ -ೆÇÃನ್‌ಗಳಿಗೆ ದಾಸರಾಗಿ ತಮ್ಮ ಸಮಯ ಹಾಗೂ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಶಿಬಿರದಲ್ಲಿ ಶಾಲಾ ಪಠ್ಯದ ಒತ್ತಡವಿರುವುದಿಲ್ಲ. ಸಂಪನ್ಮೂಲ ವ್ಯಕ್ತಿಗಳಿಂದ ಪಠ್ಯೇತರ ಚ ಟುವಟಿಕೆಗಳ ಮೂಲಕ ಕಲಿಕೆಗೆ ಅವಕಾಶ ನೀಡಲಾಗುತ್ತದೆ. ಆದ್ದರಿಂದ ಮಕ್ಕಳು ಶಿಬಿರ ಸದ್ಬಳಕೆ ಮಾಡಿ ಕೊಳ್ಳಬೇಕು ಎ ಂದರು.
ರಾಷ್ಟಿçÃಯ ಕ್ರೀಡಾಪಟು ಜ್ಯೋತಿರಾಜ್ ಮಾತನಾಡಿ,ನಮ್ಮ ಬಾಲ್ಯದಲ್ಲಿ ಇಂಥ ಸೌಲಭ್ಯಗಳು ಇರಲಿಲ್ಲ. ಈಗ ಸರ್ಕಾರ ಇಂತಹ ವೇದಿಕೆ ಕಲ್ಪಿಸಿಕೊಡುತ್ತಿದೆ. ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿವಹಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಆಶಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ.ವೈಶಾಲಿ ಮಾತನಾಡಿ, ಆತ್ಮವಿಶ್ವಾಸ ವೃದ್ಧಿ, ನಾಯಕತ್ವ ಗುಣ ಬೆಳೆಸಿಕೊಳ್ಳುವುದು ಹಾಗೂ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದೇ ಈ ಶಿಬಿರದ ಉದ್ದೇಶ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಽಕಾರಿ ವೀಣಾ ಮಾತನಾಡಿ, ಮಕ್ಕಳ ಮನಸ್ಸಿಗೆ ಸೂರ್ತಿ ನೀಡುವಂತಹ ವೈವಿಧ್ಯಮಯ ಕಾರ್ಯಕ್ರಮಗ ಳನ್ನು ರೂಪಿಸಲಾಗಿದೆ ಎಂದರು. ಜನಪದ ರಂಗ ಕಲಾವಿದ ಸುರೇಶ್ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಿಶು ಅಭಿವೃದ್ಧಿ ಯೋಜನಾಽಕಾರಿಗಳಾದ ರಾಜನಾಯ್ಕ್, ನವೀನ್ ಕುಮಾರ್, ನಿರ್ಮಲಾ, ಜಿಲ್ಲಾ ಬಾಲಭವನ ವ್ಯವಸ್ಥಾಪಕ ಸುರೇಶ್, ಕಾರ್ಯಕ್ರಮ ಸಂಯೋಜಕ ಡಿ. ಶ್ರೀಕುಮಾರ್, ಸಂಪನ್ಮೂಲ ಶಿಕ್ಷಕರಾದ ಕುಮಾರಸ್ವಾಮಿ,ತಿಪ್ಪೇರುದ್ರಪ್ಪ, ಮಂಜುಳಾ, ಚಂದನಾ ಇದ್ದರು.