ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶನಿವಾರ ತಹಸೀಲ್ದಾರ್ ರೇಹಾನ್ ಪಾಷ ಅಧ್ಯಕ್ಷತೆಯಲ್ಲಿ ಬೆಳೆ ವಿಮೆ ಕುರಿತು ರೈತರ ಕುಂದುಕೊರತೆ ಸಭೆ ನಡಡೆಯಿತು. ರೈತರಾದ ರೆಡ್ಡಿಹಳ್ಳಿ ವೀರಣ್ಣ, ಡಾ.ಸಿ. ಶಿವಲಿಂಗಪ್ಪ, ಎಚ್. ಪ್ರಕಾಶ್, ಬಾಷಾ, ಶ್ರೀಕಂಠಪ್ಪ, ತಿಪ್ಪೇರುದ್ರಪ್ಪ ಇತರರು ಇದ್ದರು. Meeting 
ಚಿತ್ರದುರ್ಗ

ಸಮಸ್ಯೆಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ Meeting

ಪ್ರಮುಖ ಮುಖ್ಯಾಂಶಗಳು

  • ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಕುಂದುಕೊರತೆ ಸಭೆ

ಚಳ್ಳಕೆರೆ: ತಾಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ತೀವ್ರ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ರೇಹಾನ್ ಪಾಷ ಹೇಳಿದರು.

Meeting

ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಹಾಗೂ ತಾಲೂಕು ಮಟ್ಟದ ರೈತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ರೈತರ ಪರ ಇದೆ. ಪ್ರಸ್ತುತ ಬರಗಾಲ ಎದುರಾಗಿದೆ. ರೈತರು ವಿಮಾ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲ ರೈತರಿಗೂ ಸೌಲಭ್ಯ ದೊರೆಯಲಿದೆ. ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಕೃಷಿ ಸಹಾಯಕ ನಿರ್ದೇಶಕ ಡಾ.ಎಸ್.ಟಿ. ರಮೇಶ್ ಮಾತನಾಡಿ, 47,199 ಜನ ರೈತರು ವಿಮೆಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 3747 ಜನ ರೈತರ ವಿಮಾ ಕಂತು ಬ್ಯಾಂಕಿನಿಂದ ಸಂರಕ್ಷಣೆ ಪೋರ್ಟಲ್ಗೆ ಜಮೆ ಆಗಬೇಕಿದೆ. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯ ಬಗ್ಗೆ ನೇರವಾಗಿ ಇಲಾಖೆಗೆ ಬಂದು ಮಾಹಿತಿ ಪಡೆಯಬಹುದು ಎಂದು ಹೇಳಿದರು.
ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಡಾ.ಸಿ. ಶಿವಲಿಂಗಪ್ಪ, ಎಚ್. ಪ್ರಕಾಶ್, ಬಾಷಾ, ಶ್ರೀಕಂಠಪ್ಪ, ತಿಪ್ಪೇ ರುದ್ರಪ್ಪ, ಆರ್.ಎ. ದಯಾನಂದಮೂರ್ತಿ, ತಿಪ್ಪೇಸ್ವಾಮಿ, ಸಿ. ಮಹೇಶ್, ಎನ್. ಮಾರುತಿ, ಜಿ.ಎಚ್. ಹನುಮಂತಪ್ಪ, ರಾಜಣ್ಣ, ಮಂಜುನಾಥ, ಮೈರಾಡ ಚಂದ್ರಣ್ಣ, ರಂಗಪ್ಪ ಇತರರು ಇದ್ದರು.
ಅಧಿಕಾರಿಗಳ ನಿರ್ಲಕ್ಷ್ಯ ವಿಮೆ ಕಟ್ಟಿಸಿಕೊಳ್ಳುವ ಕಂಪನಿಗಳಿಂದ ರೈತರಿಗೆ ನ್ಯಾಯ ಬದ್ಧ ವಿಮಾ ಸೌಲಭ್ಯ ಸಿಗುತ್ತಿಲ್ಲ. ಜಮೀನಿನಲ್ಲಿ ಜಿಪಿಎಸ್ ಮಾಡುವಲ್ಲಿ ಸಿಬ್ಬಂದಿ ಮಾಡುವ ನಿರ್ಲಕ್ಷ್ಯದಿಂದ ರೈತರಿಗೆ ಮೋಸ ಆಗುತ್ತಿದೆ. ಎಷ್ಟೋ ರೈತರು ವಿಮಾ ಕಂತು ಕಟ್ಟಿದ್ದರೂ ನ್ಯಾಯ ಸಿಕ್ಕಿಲ್ಲ. 2022ರಲ್ಲಿ ಬೆಳೆ ಪರಿಹಾರ ವಿತರಣೆಯಲ್ಲಿ ನಡೆದ ಅವ್ಯವಹಾರದಲ್ಲಿ ಅಧಿಕಾರಿಗಳಿಗೆ ಯಾವುದೇ ಶಿಕ್ಷೆ ಆಗಲಿಲ್ಲ. ವಿಮಾ ಕಂಪನಿಗಳ ಮಾರ್ಗಸೂಚಿ ಮತ್ತು ಕೆಲ ನಿಬಂಧನೆಗಳು ರೈತ ವಿರೋಧಿ ಆಗಿವೆ. ಯಾವುದೇ ಬ್ಯಾಂಕಿನಲ್ಲಿ ಸಾಲ ಇರುವಂತಿಲ್ಲ. ಇದ್ದಲ್ಲಿ ವಿಮೆ ಕೊಡುವುದು ಮತ್ತು ತಿರಸ್ಕರಿಸುವ ಅಧಿಕಾರ ಕಂಪನಿಯದ್ದಾಗಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೂ ದೂರು ನೀಡುವಂತಿಲ್ಲ ಎನ್ನುವ ನಿಬಂಧನೆಗಳಿಗೆ ರೈತರಿಂದ ಸಹಿ ಪಡೆಯಲಾಗಿದೆ. ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ವಿಮಾ ಕಂಪನಿಗಳು ಹಿಡಿತ ಸಾಧಿಸುವ ಕೆಲಸ ಮಾಡುತ್ತಿವೆ. ಸುಲಭವಾಗಿ ವಿಮೆ ಕಟ್ಟಿಸಿಕೊಳ್ಳುವ ಕಂಪನಿಗಳು, ವಿಮೆ ಬಿಡುಗಡೆಗೆ ನಿಯಮಗಳನ್ನು ಮುಂದೆ ತರುತ್ತಿವೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಸಭೆಯಲ್ಲಿ ಆರೋಪ ಕೇಳಿಬಂದವು.