ಚಿತ್ರದುರ್ಗದಲ್ಲಿ ಗುರುವಾರ ಕೆ.ವಿ. ಸುಬ್ಬಣ್ಣ ಸ್ಮರಣಾರ್ಥ ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರವನ್ನು ಮಲ್ಲಿಕಾರ್ಜುನಪ್ಪ ಉದ್ಘಾಟಿಸಿದರು. ಯೋಗೀಶ್, ಆನಂದ ತಳವಾರ, ಗೌನಹಳ್ಳಿ ಗೋವಿಂದಪ್ಪ, ಮಹೇಶ್‌ಬಾಬು, ರ‍್ರಿಸ್ವಾಮಿ, ಗಣೇಶಯ್ಯ, ಎಚ್‌ಎಸ್‌ಟಿ ಸ್ವಾಮಿ ಇತರರಿದ್ದರು. 
ಚಿತ್ರದುರ್ಗ

ದೇಶಕಂಡ ಅಪ್ರತಿಮ ರಂಗಕರ್ಮಿ ಸುಬ್ಬಣ್ಣ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಲ್ಲಿ ಸದಭಿರುಚಿಯ ಕನಸನ್ನು ಬಿತ್ತಬೇಕಿದೆ
  • ನಾಟಕಕಾರ ಮಲ್ಲಿಕಾರ್ಜುನಪ್ಪ ಸಲಹೆ
  • ಮಾನವ ಸಂಪನ್ಮೂಲ
ಚಿತ್ರದುರ್ಗ: ಶಿಕ್ಷಣದ ಸದಭಿರುಚಿ, ಸದಾಚಾರ, ಮಾನವ ಸಂಪನ್ಮೂಲ ಸದುಪಯೋಗ ಮಾಡಿಕೊಂಡ ಕೆ.ವಿ. ಸುಬ್ಬಣ್ಣ ದೇಶಕಂ ಡ ಅಪ್ರತಿಮ ರಂಗಕರ್ಮಿ ಎಂದು ನಾಟಕಕಾರ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.
ನಗರದ ಸಿದ್ಧರಾಮೇಶ್ವರ ವಸತಿ ಪ್ರೌಢಶಾಲೆ ವಿದ್ಯಾರ್ಥಿ ನಿಲಯದ ಆವರಣದಲ್ಲಿ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂ ಸ್ಕೃತಿ ನಿರ್ದೇಶನಾಲಯದಿಂದ ಹಿರಿಯ ರಂಗಕರ್ಮಿ ಕುಂಟಗೋಡು ವಿಭೂತಿ ಸುಬ್ಬಣ್ಣ ಸ್ಮರಣೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಬ್ಬಣ್ಣ ಬಹುಮುಖ ಪ್ರತಿಭೆ. ಬೋಧನಾ ವಿಧಾನದಲ್ಲಿ ರಂಗಕೌಶಲ, ಕಲೆ, ವಿಜ್ಞಾನ, ಸಂಕೀರ್ಣ ನಾಟಕಗಳ ಮೂಲಕ ಪ್ರೇಕ್ಷ ಕರಲ್ಲಿ ಹೊಸ ರಂಗಚಿAತನೆ, ಮೌಲ್ಯಾಧಾರಿತ ಬದುಕನ್ನು ಹುಟ್ಟುಹಾಕಿದರು. ಅವರ ರಂಗ ಮಾದರಿಗಳನ್ನು ಪರಿಚಯಿಸಿ ಮಕ್ಕಳಲ್ಲಿ ಸದಭಿರುಚಿಯ ಕನಸುಗಳನ್ನು ಬಿತ್ತಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಎಂ.ಎನ್.ಯೋಗೀಶ್ ಮಾತನಾಡಿ, ರಂಗಭೂಮಿ ಸಮಾಜದ ಕೈಗನ್ನಡಿ. ನೀನಾಸಂ ನಾಟಕಗಳು ಸಮಾಜವನ್ನು ಪ್ರತಿನಿಽಸುತ್ತವೆ. ವೃತ್ತಿಪರ ಜೀವನಕ್ಕೂ ಭಿನ್ನ-ವಿಭಿನ್ನವಾದ ದೃಷ್ಟಿಕೋನ ನೀಡುತ್ತದೆ ಎಂದು ಹೇಳಿದರು. ಇದೇ ವೇಳೆ ಡಿವಿಜಿ ರಾಷ್ಟç ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶ. ಮಂಜುನಾಥ, ಕಥಾಸ್ಪರ್ಧೆ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಕೆ.ಪಿ. ಓಂಕಾರಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಆನಂದ ತಳವಾರ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಪತ್ರಕರ್ತ ಈ. ಮಹೇಶ್‌ಬಾಬು, ತಾ ರಾಮಂಡಲದ ಚಳ್ಳಕೆರೆ ರ‍್ರಿಸ್ವಾಮಿ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ನಿವೃತ್ತ ವಿಜ್ಞ್ಞಾನ ಶಿಕ್ಷಕ ಎಚ್‌ಎಸ್‌ಟಿ ಸ್ವಾಮಿ, ಮರಡಿ ರಾಜು, ಎಂ.ಕೆ. ಹರೀಶ್, ಡಾ.ಕೆ. ಮೋಹನ್‌ಕುಮಾರ್, ಸಂಡೂರು ಹೇಮಂತ್, ಎಚ್. ಹನುಮಂತಪ್ಪ ಇತರರಿದ್ದರು.