ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅಂದೋಲನ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಽಕಾರದ ಅಧ್ಯಕ್ಷ ಡಾ. ಮಾನಸ, ಡಾ.ಆರ್. ಮಹೇಶ್, ನಿರಂಜನ ದೇವರಮನೆ, ಡಾ.ಎಸ್.ಎನ್. ಹೇಮಂತರಾಜ್, ಬಸವರಾಜ ಕೊಳ್ಳಿ, ಡಾ.ಬಿ.ಎಂ. ಗುರುನಾಥ್ ಮತ್ತಿತರರು ಇದ್ದರು.
- ಕನ್ನಡ ಪುಸ್ತಕ ಪ್ರಾಽಕಾರದ ಅಧ್ಯಕ್ಷ ಡಾ. ಮಾನಸ ಅಭಿಮತ
- ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ
- ಹೊಸ ಪರಿಕಲ್ಪನೆಯ ಆಂದೋಲನ
ಚಿತ್ರದುರ್ಗ: ಓದುವ ಹವ್ಯಾಸ, ಅಧ್ಯಯನ ಮತ್ತು ಜ್ಞಾನಾರ್ಜನೆಗೆ ಮನೆ ಗ್ರಂಥಾಲಯ ಸಹಕಾರಿ ಎಂದು ಕನ್ನಡ ಪುಸ್ತಕ ಪ್ರಾಽಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಪ್ರಾಽಕಾರದ ಜಿಲ್ಲಾ ಜಾಗೃತಿ ಸಮಿತಿ ನಗರದ ಡಾ.ಎಸ್.ಎನ್. ಹೇಮಂತರಾಜು ಅವರ ನಿವಾಸದಲ್ಲಿ ಸೋಮವಾರ ಆಯೋಜಿ ಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪುಸ್ತಕ ಓದು ಮನಸ್ಸಿನ ವಿಕಾಸ, ಕೌಶಲಾ ಭಿವÊದ್ಧಿ ಹಾಗೂ ನಿರಂತರ ಜ್ಞಾನದ ವೈವಿಧ್ಯತೆಯ ನವೀಕರಣಕ್ಕೆ ನೆರವಾಗುತ್ತದೆ ಎಂದರು.
ಮನೆಗೊAದು ಗ್ರಂಥಾಲಯ ಅನುಷ್ಠಾನ ಹೊಸ ಪರಿಕಲ್ಪನೆಯ ಆಂದೋಲನವಾಗಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಅನುಷ್ಠಾನಗೊ ಳ್ಳುತ್ತಿದೆ ಎಂದರು.
ಕನ್ನಡ ವಿದ್ವಾಂಸ ಡಾ.ಆರ್. ಮಹೇಶ್ ಮಾತನಾಡಿ, ಮನೆಗೊಂದು ಗ್ರಂಥಾಲಯ ಇವತ್ತಿನ ಬದುಕಿಗೆ ಅನಿವಾರ್ಯ ಮತ್ತು ಅಗತ್ಯ. ರಾಷ್ಟೀಯತೆ, ಆಧುನಿಕತೆ, ಬದುಕಿನ ಸೂಕ್ಷ÷್ಮತೆಗಳು ಮನ ಮುಟ್ಟುವಂತೆ ಮೇಳೈಸಿರುವ ಪ್ರಸಿದ್ಧ ಲೇಖಕರ ಸಾಹಿತ್ಯ ವನ್ನು ಯುವಜನರಿಗೆ ತಲುಪಿಸಬೇಕಿದೆ ಎಂದರು.
ರಾಮಾಯಣ, ಮಹಾಭಾರತ, ಬುದ್ಧನ ಜಾತಕ ಕಥೆಗಳು, ಬಸವಣ್ಣನವರ ವಚನಗಳು, ಗಾಂಽÃಜಿ ತತ್ವಾದರ್ಶಗಳು, ಡಾ.ಬಿ. ಆರ್.ಅಂಬೇಡ್ಕರ್ ಅವರ ಚಿಂತನೆಗಳು, ದಲಿತ, ಬಂಡಾಯ ಪ್ರಗತಿಪರ ಚಳವಳಿಗಳು ಹಾಗೂ ಬದುಕಿನ ಎಲ್ಲ ಮೌಲ್ಯಗಳನ್ನು ಅಡಗಿಸಿಕೊಂಡ ಮಹಾನ್ ಸಾಹಿತ್ಯ ಬಂಡಾರವನ್ನು ಓದುವ ವಿಶಿಷ್ಟ ಕೌಶಲ ಬೆಳೆಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಸಮಿತಿ ಸಂಚಾಲಕ ನಿರಂಜನ ದೇವರಮನೆ ಮಾತನಾಡಿ, ಮನೆಗೊಂದು ಗ್ರಂಥಾಲಯ ಅಭಿಯಾನ ಜಿಲ್ಲೆಯಲ್ಲಿ ಅನುಷ್ಠಾನ ಗೊಳ್ಳುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಎನ್. ಹೇಮಂತ್‌ರಾಜು ಮಾತನಾಡಿದರು. ನಗರದ ಕೇಂದ್ರ ಗ್ರಂಥಾಲ ಯದ ಮುಖ್ಯಗ್ರಂಥಾಲಯಾಽಕಾರಿ ಬಸವರಾಜಕೊಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ಲೇಖಕ ಡಾ. ಸಂಗೇನಹಳ್ಳಿ ಅಶೋಕ್‌ಕುಮಾರ್, ಕವಿ ಪರಮೇಶ್ವರಪ್ಪ ಕುದುರಿ, ಬಿಆರ್‌ಸಿ ಸಂಪತ್‌ಕುಮಾರ್, ಪ್ರಾಂಶುಪಾಲರಾದ ದೊಡ್ಡಯ್ಯ, ಬಿ. ಕೃಷ್ಣಪ್ಪ, ಎಸ್.ಆರ್. ತನುಜಾ, ನಿರ್ಮಲಾ ಮರಡಿಹಳ್ಳಿ, ಸವಿನಯ ಇತರರು ಇದ್ದರು.