ಚಿತ್ರದುರ್ಗದ ಪ್ರಕÊತಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ೧೧ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಶಾಸಕ ಡಾ.ಎಂ.ಚಂದ್ರಪ್ಪ ಉದ್ಘಾಟಿಸಿದರು. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಡೀನ್ ಅನಂತರಾಮು, ಪ್ರಾಂಶು ಪಾಲ ಡಾ.ಎಸ್.ಬಿ.ನವಾಜ್, ಪಿಎಎಂಸಿ ಎಚ್.ಮಹಾಂತೇಶ್, ನರ್ಸಿಂಗ್ ಕಾಲೇಜು ಪ್ರಾಚಾರ‍್ಯರಾದ ಡಾ.ಅಂಬುಜಾಕ್ಷಿ, ಡಾ.ಲಿಂಗ ರಾಜ್ ಇತರರು ಇದ್ದರು.  
ಚಿತ್ರದುರ್ಗ

ಶ್ರದ್ಧೆಯಿಂದ ಓದಿ ಉತ್ತಮ ಆಯುರ್ವೇದ ವೈದ್ಯರಾಗಿ

ವಿದ್ಯಾರ್ಥಿಗಳಿಗೆ ಶಾಸಕ ಎಂ.ಚಂದ್ರಪ್ಪ ಸಲಹೆ

ಚಿತ್ರದುರ್ಗ: ಆಯುರ್ವೇದಿಕ್ ವೈದ್ಯ ಪದ್ಧತಿಯನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿ ತಾವು ವೈದ್ಯರಾದರೆ, ಇತರೆ ವೈದ್ಯಕೀಯ ಪದ್ಧತಿಗಳನ್ನು ಬಿಟ್ಟು ಜನರು ಚಿಕಿತ್ಸೆಗೆ ತಮ್ಮ ಬಳಿಗೆ ಬರುತ್ತಾರೆ. ಯಾಕೆಂದರೆ ಆಯುರ್ವೇದಕ್ಕೆ ಅಷ್ಟೊಂದು ಮಹತ್ವವಿದೆ ಎಂದು ದೇವರಾಸ ಅರಸು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ‍್ಯದರ್ಶಿ, ಶಾಸಕ ಡಾ.ಎಂ.ಚಂದ್ರಪ್ಪ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ಶಿಕ್ಷಣ ಸಂಸ್ಥೆ ಪ್ರಕÊತಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಏರ್ಪಡಿಸಿದ್ದ ೧೧ನೇ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಜಪಾನ್ ಜನರು ಇಂದಿಗೂ ಆಯುರ್ವೇದ ಚಿಕಿತ್ಸೆ ಪಡೆಯುತ್ತಿರು ವುದರಿಂದ ಅವರು ೮೦-೧೦೦ ವರ್ಷಗಳ ಕಾಲ ಬದುಕುತ್ತಿದ್ದಾರೆ.

ಒಂದು ವೈದ್ಯಕೀಯ ಸೀಟು ಪಡೆಯಲು ಎರಡೂವರೆ ಕೋಟಿ ರೂ.ಭರಿಸಬೇಕಾಗುತ್ತದೆ. ಆದರೆ ನಾವು ಸೇವಾ ಮನೋಭಾವದಿಂ ದ ಆಯುರ್ವೇದ ಕಾಲೇಜನ್ನು ಆರಂಭಿಸಿದ್ದೇವೆ ಹೊರತು ಲಾಭದ ದÊಷ್ಟಿಯಿಂದ ಅಲ್ಲ. ಸೇವಾ ಮನೋಭಾವದಿಂದ ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅತ್ಯುತ್ತಮ ವೈದ್ಯರಾಗಿ ಬಡ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆ ನೀಡ ಬೇಕು. ಪಾಲಕರು ತಮ್ಮ ಮೇಲೆ ವಿಶ್ವಾಸವಿಟ್ಟು ವೈದ್ಯಕೀಯ ಶಿಕ್ಷಣ ಕೊಡಿಸುತ್ತಿದ್ದಾರೆ. ಅವರ ನಂಬಿಕೆಗೆ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಶಿಕ್ಷಣ ಕಲಿಯ ಬೇಕೆಂದರು.

ಮಲೇಶಿಯಾಕ್ಕೆ ತೆರಳಿ ಅಲ್ಲಿಯ ವ್ಯವಸ್ಥೆ ಅಧ್ಯಯನ ಮಾಡಿಕೊಂಡು ಬನ್ನಿ ಎಂದು ಕಾಲೇಜಿನ ಪ್ರಾಂಶುಪಾಲರು ಮತ್ತು ಅಧ್ಯಾಪಕ ರಿಗೆ ಸೂಚಿಸಿದ ಚಂದ್ರಪ್ಪ, ತಮ್ಮ ಸೇವೆಯೂ ಜನ ಸಾಮಾನ್ಯರಿಗೆ ಸಿಗುವಂತಾಗ ಬೇಕೆಂದು ಆಶಿಸಿದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರನ್ನು ಉತ್ತಮ ವೈದ್ಯರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಪ್ರಾಚಾರ‍್ಯರು,ಅಧ್ಯಾಪಕರಿಗೆ ನಿರ್ದೇಶಿಸಿದರು. ಶಿಕ್ಷಣ ಸಂಸ್ಥೆ ಡೀನ್ ಅನಂತರಾಮು, ಪ್ರಾಂಶುಪಾಲ ಡಾ.ಎಸ್.ಬಿ.ನವಾಜ್, ಪಿಎಎಂಸಿ ಎಚ್.ಮಹಾಂತೇಶ್, ನರ್ಸಿಂಗ್ ಕಾಲೇಜು ಪ್ರಾಚಾರ‍್ಯ ರಾದ ಡಾ.ಅಂಬುಜಾಕ್ಷಿ, ಡಾ.ಲಿಂಗರಾಜ್ ಮತ್ತಿತರರು ಇದ್ದರು.