ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಕಲ್ಪಿತ ಸಂಸತ್ ಅಽವೇಶನವನ್ನು ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮಉದ್ಘಾಟಿಸಿದರು. ಕೆ.ಜೆ.ಪ್ರಶಾಂತ್, ಶಿಕ್ಷಣಾಽಕಾರಿ ಇನಾಯತ್‌ವುಲ್ಲಾ, ವಿಷಯ ಪರಿವೀಕ್ಷಕರಾದ ರಂಗನಾಯ್ಕ್, ನಿತ್ಯಾನಂದ, ಡಯಟ್ ಉಪನ್ಯಾಸಕ ಬಸವರಾಜ್ ಇತರರು ಇದ್ದರು. 
ಚಿತ್ರದುರ್ಗ

ಕಲ್ಪಿತ ಸಂಸತ್‌ನಲ್ಲಿ ಪ್ರತಿಭೆ ಮೆರೆದ ವಿದ್ಯಾರ್ಥಿಗಳು

ಪ್ರಮುಖ ಮುಖ್ಯಾಂಶಗಳು

  • ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವಾಲಯ
  • ಶಿಕ್ಷಣ ಇಲಾಖೆ
  • ವಿಧೇಯಕಗಳ ಮಂಡನೆ
ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಸ್ಥಗಿತ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ, ಬೆಳೆಗೆ ಬೆಂ ಬಲ ಬೆಲೆ ಇಲ್ಲದಿರುವುದು, ವನ್ಯಜೀವಿ-ಮಾನವ ಸಂಘರ್ಷ, ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ, ಸರ್ಕಾರಿ ಬಸ್‌ಗಳ ಕೊರತೆ, ರಸ್ತೆಗಳ ದುಸ್ಥಿತಿ, ಹಾಗೂ ಅಪಘಾತ ಹೆಚ್ಚಳ, ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವ ಕುರಿತಂತೆ ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದವು.
ಬೆಂಗಳೂರು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವಾಲಯ, ಶಿಕ್ಷಣ ಇಲಾಖೆಯಿಂದ ಬುಧವಾರ ನಗರದ ಜಿಪಂನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ(ಕಲ್ಪಿತ ಸಂಸತ್ ಅಽವೇಶನ)ಯಲ್ಲಿ ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಹಾಗೂ ಸಚಿವರು ಉತ್ತರಿಸಿ, ಕರ್ನಾಟಕದ ಅಭಿವೃದ್ಧಿ ಮಂತ್ರ ಜಪಿಸಿದರು.
ಕಲಾಪದ ಆರಂಭದಲ್ಲಿ ವÊಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರಶ್ನೋತ್ತರ ವೇಳೆ ನಂತ ರ ಶೂನ್ಯ ಸಮಯದಲ್ಲಿ ನಾನಾ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಹಲವು ವಿಧೇಯಕಗಳ ಮಂಡನೆ ಹಾಗೂ ಅವುಗಳಿಗೆ ವ್ಯಕ್ತವಾದ ಪ್ರತಿಪಕ್ಷಗಳ ವಿರೋಧದಿಂದ ಸಭಾಪತಿ ಅವರು ಕಲಾಪವನ್ನು ಅನಿರ್ದಿಷ್ಟಾವಽಗೆ ಮುಂದೂಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷಿ ್ಮÃ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ನಮ್ಮ ದೇಶದಲ್ಲಿ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತರಬೇತಿ ಶಾಲೆಗಳಿದ್ದಂತೆ. ರಾಜಕೀಯ ನಾಯಕರಾಗಲು ಇವುಗಳು ಸಹಾಯಕವಾಗುತ್ತವೆ ಎಂದರು. ವಿಷಯ ಪರೀಕ್ಷಕ ಕೆ.ಜೆ. ಪ್ರಶಾಂತ್ ಪ್ರಜಾಪ್ರಭುತ್ವ ಹಾಗೂ ಜನಪ್ರತಿನಿಽ ಸಂಸ್ಥೆಗಳ ಪಾತ್ರದ ಬಗ್ಗೆ ವಿವರಿಸಿದರು.
ರಾಜ್ಯಮಟ್ಟಕ್ಕೆ ಆಯ್ಕೆ:
ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಹಿರಿಯೂರು ತಾಲೂಕಿನ ಹರಿಯಬ್ಬೆ ಕೆಪಿಎಸ್ ಶಾಲೆಯ ಎಚ್. ನಿತಿನ್ ಪ್ರಥಮ, ಹೊಸದುರ್ಗ ತಾಲೂಕಿನ ಶ್ರೀರಾಂಪುರ ಕೆಪಿಎಸ್ ಶಾಲೆಯ ಎಸ್.ಲಕ್ಷಿ÷್ಮÃ ದ್ವಿತೀಯ ಹಾಗೂ ಹೊಸದುರ್ಗ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಭಾವನಾ ತÊತೀಯ ಸ್ಥಾನ ಪಡೆದರು. ಇವರು ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಜೇತ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಾಂತ್ ಪ್ರಶಸ್ತಿ ಪತ್ರ ವಿತರಿಸಿದರು. ಶಿಕ್ಷಣಾಽಕಾರಿ ಇನಾಯತ್‌ವುಲ್ಲಾ, ವಿಷಯ ಪರಿವೀಕ್ಷಕರಾದ ರಂಗನಾಯ್ಕ್, ನಿತ್ಯಾನಂದ, ಡಯಟ್ ಉಪನ್ಯಾಸಕ ಬಸವರಾಜ್, ತೀರ್ಪುಗಾರರಾದ ಬುಡೇನ್‌ಸಾಬ್, ಬಸವರಾಜು, ಜೈಶ್ರೀನಿವಾಸ್ ಇತರರು ಇದ್ದರು.