ಚಿತ್ರದುರ್ಗದ ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ನೇಹಾನೂಭೂತಿ ಸಮಾರಂಭದಲ್ಲಿ ಸುಜಾತಾ ಲಿಂಗಾರೆಡ್ಡಿ, ಡಾ. ಅರವಿಂದ ಡಿ. ಕರಿಬಸವನಗೌಡ, ಡಾ.ಟಿ.ಎಸ್. ರವಿ, ಡಾ.ಬಿ. ಹನುಮಂತಪ್ಪ ಮೊದಲಾದ ಗಣ್ಯರು ಇದ್ದರು.
- ಸುಜಾತ ಲಿಂಗಾರೆಡ್ಡಿ ಹೇಳಿಕೆ
- ಸ್ನೇಹಾನುಭೂತಿ
- ವಿದ್ಯಾರ್ಥಿ ಸಂಘ
ಚಿತ್ರದುರ್ಗ: ರಚನಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ಮಾನವೀಯ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘ ನೆರವಾಗಲಿದೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಹೇಳಿದರು.
ನಗರದ ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಅನಂತ ಕೃಷ್ಣ ಸಭಾಂಗಣದಲ್ಲಿ ಮಂಗಳವಾರ `ಸ್ನೇಹಾನೂಭೂತಿ'ವಿದ್ಯಾರ್ಥಿ ಸಂಘದ ಉದ್ಘಾಟನೆ, ಅಣುಬೋಧನಾ ಕಾರ್ಯಾಗಾರ ಹಾಗೂ ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಉಪನ್ಯಾಸಕರು ನಿಗಾ ವಹಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘ ಉದ್ಘಾಟಿಸಿದ ಧಾರವಾಡದ ಕರ್ನಾಟಕ ವಿವಿ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಅರವಿಂದ ಡಿ. ಕರಿಬಸವನಗೌಡ ಮಾತನಾಡಿ, ವಿದ್ಯಾರ್ಥಿ ಸಂಘ ಹಾಗೂ ಅಣುಬೋಧನಾ ತರಬೇತಿ ಯ ಮಹತ್ವ ವಿವರಿಸಿದರು. ಪ್ರಾಚಾರ್ಯ ಡಾ.ಟಿ.ಎಸ್. ರವಿ, ಡಾ.ಬಿ. ಹನುಮಂತಪ್ಪ ಇತರರು ಇದ್ದರು.