ಚಿತ್ರದುರ್ಗದಲ್ಲಿ ಸೋಮವಾರ ಸ್ವಾತಂತ್ರ÷್ಯದ ಓಟ ನಾಟಕ ಪ್ರದರ್ಶನದ ಉದ್ಘಾಟನಾ ಕರ‍್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಡಾ. ಬಸವಕುಮಾರ ಸ್ವಾಮೀಜಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಮÊತ್ಯುಂಜಯಪ್ಪ, ಜಂಬುನಾಥ, ವಿನಾಯಕ ತೊಡರನಾಳ ಇತರರು ಇದ್ದರು. 
ಚಿತ್ರದುರ್ಗ

ಗಮನ ಸೆಳೆಯದ ಹೋರಾಟಗಳು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಚ್. ಆಂಜನೇಯ ವಿಷಾದ
  • ದುರ್ಗದಲ್ಲಿ ಸ್ವಾತಂತ್ರ÷್ಯದ ಓಟ ನಾಟಕ ಪ್ರದರ್ಶನ
  • ಎಲ್ಲವನ್ನು ಸಹಿಸಿಕೊಳ್ಳುವ ಮನೋಭಾವ
ಚಿತ್ರದುರ್ಗ: ಎಲ್ಲವನ್ನೂ ಸಹಿಸಿಕೊಳ್ಳುವ ಇವತ್ತಿನ ಮನೋಭಾವ ಹಿಂದೆ ಇದ್ದಿದ್ದರೆ ದೇಶವಿನ್ನೂ ಬ್ರಿಟಿಷರ ಕಪಿಮುಷ್ಠಿಯಲ್ಲೇ ಇರ ಬೇಕಾಗಿತ್ತು ಎಂದು ಮಾಜಿ ಸಚಿವ ಎಚ್. ಆಂಜನೇಯ ಅಭಿಪ್ರಾಯಪಟ್ಟರು.
ಮುರುಘಾಮಠ, ಬಸವ ಕೇಂದ್ರ, ಜಿಲ್ಲಾ ಕರ‍್ಯನಿರತ ಪತ್ರಕರ್ತರ ಸಂಘದ ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಮಾಜಗಳ ಸಹ ಯೋಗದಲ್ಲಿ ಶ್ರೀಮಠದ ಅನುಭವ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಬೊಳುವಾರು ಮಹಮದ್ ಕುಂಞ ಅವರ ಕಾದಂ ಬರಿ ಆಧಾರಿತ `ಸ್ವಾತಂತ್ರ‍್ಯದ ಓಟ' ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಚಳವಳಿ, ಹೋರಾಟಗಳಿಂದು ಗಮನ ಸೆಳೆಯುತ್ತಿಲ್ಲ. ಎಲ್ಲವನ್ನು ಸಹಿಸಿಕೊಳ್ಳುವ ಮನೋಭಾವವೇ ಅಽಕವಾಗಿ ವ್ಯಕ್ತ ವಾಗುತ್ತಿದೆ. ಅಂದಿನ ನಮ್ಮ ಸ್ವಾತಂತ್ರ‍್ಯ ಸೇನಾನಿಗಳು ಹೋರಾಟ ಮಾಡದಿದ್ದರೆ ನಾವಿನ್ನೂ ಬ್ರಿಟಿಷರ ಗುಲಾಮರಾಗಿಯೇ ಇರಬೇಕಾಗಿರುತ್ತಿತ್ತು. ಅನೇಕ ಮಹನೀಯರು ತಮ್ಮ ಪ್ರಾಣ ಬಲಿಕೊಟ್ಟು ದೇಶವನ್ನು ದಾಸ್ಯದಿಂದ ವಿವೇಚನೆಗೊಳಿಸಿದ್ದಾರೆ ಎಂದರು.
ಮಹಾತ್ಮ ಗಾಂಽÃಜಿ ಮತ್ತಿತರ ತ್ಯಾಗದ -Àಲವಾಗಿ ಸ್ವತಂತ್ರರಾಗಿದ್ದರೂ ಅದರ ಮಹತ್ವ ಗೊತ್ತಾಗದೆ ಮರೆಯುತ್ತಿರುವ ಈ ಹೊತ್ತಿನಲ್ಲಿ ಅದರ ನೆನಪನ್ನು ಇಂಥÀ ನಾಟಕಗಳ ಮೂಲಕ ಮತ್ತೆ ಈಗಿನ ಪೀಳಿಗೆಗೆ ಪರಿಚಯಿಸುವ ಕರ‍್ಯ ಶ್ಲಾಘನೀಯವೆಂದರು. ಪತ್ರಕರ್ತ ದಿ.ಜಿ.ಎಸ್. ಉಜ್ಜಿನಪ್ಪ ಅವರು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು, ಎಸ್. ನಿಜಲಿಂಗಪ್ಪ, ಎಚ್. ಹನುಮಂತಪ್ಪ ಅವರ ಒಡನಾಡಿಯಾಗಿದ್ದರೆಂದು ಸ್ಮರಿಸಿದರು.
ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಬಯಲುಸೀಮೆ ಚಿತ್ರದುರ್ಗದಲ್ಲಿ ಅನೇಕ ಪ್ರತಿಭಾನ್ವಿತರು ಆಗಿ ಹೋಗಿ ದ್ದಾರೆ. ಉಜ್ಜನಪ್ಪ ಪತ್ರಕರ್ತರಾಗಿ ರೈತ, ಜನಪರ, ಕಾರ್ಮಿಕರ ಪರ ಸೇರಿದಂತೆ ಹೋರಾಟ ಮಾಡಿದರು. ಪತ್ರಕರ್ತರಾಗಿ, ಕಾದಂಬರಿ, ಕಥೆ, ಕವನ, ಹಾಡುಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕÊಷಿ ಮಾಡಿದ್ದಾರೆ. ಅವರ ನೆನಪಿನಲ್ಲಿ ಈ ನಾಟಕ ಪ್ರದರ್ಶನ ವಾಗುತ್ತಿದೆ ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಸಾಹಿತಿ ಮೃತ್ಯುಂಜಯಪ್ಪ, ಕಲಾವಿದ ಜಂಬುನಾಥ, ಕರ‍್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿನಾಯಕ ತೊಡರನಾಳ, ರೈತಸಂಘದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನಿವೃತ್ತ ಪೊಲೀಸ್ ಅಽಕಾರಿ ಮಹಂತರೆಡ್ಡಿ ಇತರರು ಇದ್ದರು.
ಜಮುರಾ ಕಲಾವಿದರ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಕೆಪಿಎಂ ಗಣೇಶ್ ಸ್ವಾಗತಿಸಿದರು. ಮಂಜುನಾಥ ಸ್ವಾಮಿ ಹಿರೇಮಠ ಅವರ ನೇತೃತ್ವದಲ್ಲಿ ಶಿವಮೊಗ್ಗ ರಂಗಾಯಣದ ಕಲಾವಿದರು ನಾಟಕ ಪ್ರದರ್ಶಿಸಿದರು.