ರೈತ ಸಂದಿಂದ ಬೆಳೆವಿಮೆ ಮತ್ತು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಲಾಯಿತು. ಬಸವರೆಡ್ಡಿ, ಕೆ.ಒ. ತಿಪ್ಪೇಸ್ವಾಮಿ, ರಾಜಾನಾಯ್ಕ ಇತರರು ಇದ್ದರು. Protest
ಚಿತ್ರದುರ್ಗ

ಚಳ್ಳಕೆರೆಯಲ್ಲಿ ಬೆಳೆವಿಮೆಗಾಗಿ ಹೋರಾಟ

2500 ಪರಿಹಾರಕ್ಕೆ 17 ವಾನದಂಡ ವಿಧಿಸಿದ ಕ್ರಮಕ್ಕೆ ಆಕ್ರೋಶ

ಚಳ್ಳಕೆರೆ: ಬರಗಾಲದ ಪರಿಸ್ಥಿತಿಯಿಂದ ಹೈರಾಣಾದ ರೈತರಿಗೆ ರಾಜ್ಯ ಸರ್ಕಾರ ಬೆಳೆವಿಮೆ ಸಹ ನೀಡದೇ ರೈತರು, ಬಡವರ ಮತ್ತು ಕೂಲಿ ಕಾರ್ಮಿಕರ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಂತರ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಗ್ಯಾರಂಟಿಗಳಿಗಾಗಿ ಆಡಳಿತ ಮಾಡುತ್ತಿರುವ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡ ರೈತರು ಕೇವಲ 2500 ರೂ. ಪರಿಹಾರ ಪಡೆಯಲು 17 ವಾನದಂಡ ವಿಧಿಸಿ ವಂಚನೆ ವಾಡಲಾಗುತ್ತಿದೆ. ರಾಜ್ಯದ 210 ತಾಲೂಕುಗಳಲ್ಲಿ ಬರಗಾಲವಿದೆ. ಇದರ ಬಗ್ಗೆ ಗಂಭೀರ ಚರ್ಚೆ ಆಗುತ್ತಿಲ್ಲ. ರಾಜಕಾರಣಿಗಳ ವೈಯಕ್ತಿಕ ಸ್ಟಿಂಗ್, ಆಸ್ತಿ, ಬಂಡವಾಳ ಬಗ್ಗೆ ದರ್ಪದ ರಾಜಕೀಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2025-26ನೇ ಸಾಲಿನ ಬೆಳೆವಿಮೆ ಮತ್ತು ಪರಿಹಾರ ಬಿಡುಗಡೆ ವಾಡಬೇಕು. ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕೇಂದ್ರ ಸರ್ಕಾರಕ್ಕೆ ಕೇಳಿರುವ 24 ಸಾವಿರ ಕೋಟಿ ರೂ,. ಹಣ ತರಿಸಿಕೊಳ್ಳುವ ಕೆಲಸ ವಾಡಬೇಕು. ಯಾವುದೇ ವಾನದಂಡ ಹಾಕದೆ ಕೂಡಲೇ 2500 ರೂ. ರೈತರ ಖಾತೆಗೆ ಹಾಕಬೇಕು. ಬರಪೀಡಿತ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು. ಕೆರೆಯಾಗಳಹಳ್ಳಿ ಯಲ್ಲಿ ಪಡಿತರದಾರರಿಗೆ ವಂಚನೆ ವಾಡುತ್ತಿರುವ ನ್ಯಾಯಬೆಲೆ ಅಂಗಡಿ ವಾಲೀಕನ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಕೆರೆಯಾಗಳ ಹಳ್ಳಿ ವೀರಣ್ಣ, ರವಿಕುವಾರ್, ಗಡ್ಡದ ತಿಪ್ಪೇಸ್ವಾಮಿ, ಓಬನಾಯ್ಕ, ರಾಜಾನಾಯ್ಕ, ತಿವ್ಮಾರೆಡ್ಡಿ, ಮಹೇಶ್ವರಪ್ಪ, ಶಿವಣ್ಣ, ರಾಜಣ್ಣ, ಗಂಗಾಧರ್, ಚಂದ್ರಶೇಖರ್ ಇತರರು ಇದ್ದರು.

ಅಪರಾಧಿಗಳಂತೆ ಬಿಂಬಿಸಲು ಯತ್ನ

ಶಿಡ್ಲಯ್ಯನಕೋಟೆ ಡ್ಯಾಂನಿಂದ ಹರಿದು ಬರುವ ನೀರಿಗೆ ಬುಡುರಕುಂಟೆ ಬಳಿ ಅಡ್ಡ ಹಾಕಲಾಗಿದೆ. ಆದರೆ, ಇದರ ಬಗ್ಗೆ ಅಧಿಕಾರಗಳು ಯಾವುದೇ ಕ್ರಮವಹಿಸಿಲ್ಲ. ಪರಶುರಾಮಪುರ ರೈತರು ದೂರಿದ ತಕ್ಷಣವೇ ಟಿ.ಎನ್. ಕೋಟೆ ರೈತರ ಮೇಲೆ ಕೇಸ್ ಹಾಕಲು ಬರುತ್ತಾರೆ. ಸ್ಥಳೀಯ ಪೊಲೀಸರು ಮತ್ತು ಸಣ್ಣ ನೀರಾವರಿ ಅಧಿಕಾರಿಗಳಿಂದಾಗಿ ಗ್ರಾಮದ ರೈತರನ್ನು ಅಪರಾಧಿಗಳಂತೆ ಬಿಂಬಿಸಲಾಗಿದೆ ಎಂದು ರೈತ ಟಿ.ಎನ್. ಕೋಟೆ ಚಂದ್ರಣ್ಣ ದೂರಿದರು.

ಈಗಾಗಲೇ ತಾಲೂಕಿನ ಪರಶುರಾಮಪುರ, ತಳಕು, ನಾಯಕನಹಟ್ಟಿ ಮತ್ತು ಕಸಬಾ ವ್ಯಾಪ್ತಿಯಲ್ಲಿ ನಾಲ್ಕು ಗೋಶಾಲೆ ಆರಂಭಿಸಲು ಸ್ಥಳ ಪರಿಶೀಲನೆ ವಾಡಲಾಗಿದೆ. ಟಿ.ಎನ್. ಕೋಟೆ ವಾರ್ಗವಾಗಿ ಪರಶುರಾಮಪುರಕ್ಕೆ ಹರಿದು ಬರುವ ವೇದಾವತಿ ನದಿ ನೀರಿನ ಬಗ್ಗೆ ಕೂಡಲೇ ಅಧಿಕಾರಿಗಳ ಸಭೆ ವಾಡಲಾಗುವುದು. ಬೆಳೆವಿಮೆ ಮತ್ತು ಪರಿಹಾರದ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು.
ರೇಹಾನ್ ಪಾಷಾ ತಹಸೀಲ್ದಾರ್
ಕೆರೆಯಾಗಳಹಳ್ಳಿಯಲ್ಲಿ ಎರಡು ನ್ಯಾಯಬೆಲೆ ಅಂಗಡಿ ಸ್ಥಾಪಿಸಲಾಗಿದೆ. ಎರಡು ಅಂಗಡಿಗಳಿಗೂ ಸರ್ಕಾರದಿಂದ ಏಕಕಾಲಕ್ಕೆ ಪಡಿತರ ನೀಡುತ್ತಿಲ್ಲ. 10 ದಿನ ವ್ಯತ್ಯಾಸ ಆಗಲಿದೆ. ಇದರಿಂದ ಗ್ರಾಮದಲ್ಲಿ ಗುಂಪುಗಾರಿಕೆಗೆ ಎಡೆಮಾಡಿಕೊಟ್ಟಂತಾಗಿದೆ. ಗ್ರಾಹಕರ ಮೇಲೆ ನ್ಯಾಯಬೆಲೆ ಅಂಗಡಿ ಮಾಲೀಕನ ದೌರ್ಜನ್ಯದ ವರ್ತನೆಗೆ ಅಧಿಕಾರಿಗಳು ಬ್ರೇಕ್ ಹಾಕಬೇಕು.
ಕೆ.ಒ. ತಿಪ್ಪೇಸ್ವಾಮಿ, ರೈತ, ಕೆರೆಯಾಗಳಹಳ್ಳಿ