ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ, ಮತದಾರರ ದಾಖಲಾತಿ ಕುರಿತು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಯೂರ ಜಯಕುಮಾರ್ ಮಾತನಾಡಿದರು. ಎಂ.ಕೆ. ತಾಜ್‌ಪೀರ್, ಹಾಲಸ್ವಾಮಿ, ಆರ್.ಕೆ. ಸರ್ದಾರ್ ಇತರರಿದ್ದರು.
- ಎಂಎಲ್ಸಿ ಚುನಾವಣೆ ಗಂಭೀರವಾಗಿ ಪರಿಗಣಿಸಿ
- ಕಾರ್ಯಕರ್ತರಿಗೆ ಮಯೂರ ಜಯಕುಮಾರ್ ಸಲಹೆ
- ಮತದಾರರ ದಾಖಲಾತಿ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆ
ಚಿತ್ರದುರ್ಗ: ಮೂರು ದಶಕದಿಂದ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಽಸಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಗೆಲುವಿಗೆ ಅಗತ್ಯ ತಯಾರಿಯೊಂದಿಗೆ ಕಾರ್ಯಕರ್ತರು, ಪದಾಽಕಾರಿಗಳು ಶ್ರಮಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಸಲಹೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪದವೀಧರ ಕ್ಷೇತ್ರದ ಚುನಾವಣೆ, ಮತದಾರರ ದಾಖಲಾತಿ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅಽಕಾರಿಗಳು ಈಗಾಗಲೇ ಪದವೀಧರರ ನೋಂದಣಿ ಆರಂಭಿಸಿದ್ದಾರೆ. ೫ ಜಿ¯್ಲೆಗಳ ಮತದಾರರ ಸಂಖ್ಯೆ ಕಳೆದ ಬಾರಿಗಿಂತಲೂ ಹೆಚ್ಚಾಗಿದೆ. ಆದರೂ, ಪಕ್ಷದ ಕಾರ್ಯಕರ್ತರು, ಪದಾಽಕಾರಿಗಳು ಅರ್ಹರನ್ನು ಗುರುತಿಸಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು.
ಚುನಾವಣೆಗೆ ಡಿಸಿಸಿಯ ಎಲ್ಲ ಘಟಕಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮತದಾರರು ಬುದ್ಧಿವಂತರಿದ್ದು, ಅವರಿಗೆ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುವ ಕಾರ್ಯವಾಗಬೇಕು. ಅರ್ಹರು ಪಟ್ಟಿಯಿಂದ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಬು. ಪ್ರತಿ ಮನೆಗೂ ಭೇಟಿ ನೀಡಿ ಪದವೀಧರ ಮತದಾರರನ್ನು ನೋಂದಾಯಿಸುವ ಕಾರ್ಯಕ್ಕೆ ವೇಗ ನೀಡಬೇಕು ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಬಹುಮತ ಪಡೆದು ಕಾಯ್ದೆ ರೂಪಿಸಿದರೂ ವಿಧಾನ ಪರಿಷತ್‌ನ ಅನುಮೋದನೆಯೊಂದಿಗೆ ರಾಜ್ಯಪಾಲರ ಅಂಕಿತ ಬೀಳಬೇಕಿದೆ. ಅದಕ್ಕಾಗಿ ಪದವೀಧರ ಚುನಾವಣೆ ಕೂಡ ಬಹುಮುಖ್ಯ ಎಂದರು.
ಎಐಸಿಸಿ, ಕೆಪಿಸಿಸಿ ಆಗ್ನೇಯ ಮಾತ್ರವಲ್ಲದೆ. ನೈರುತ್ಯ, ಈಶಾನ್ಯ ಹಾಗೂ ವಾಯುವ್ಯ ಕ್ಷೇತ್ರಗಳ ಚುನಾವಣೆಯನ್ನೂ ಗಂಭೀರ ವಾಗಿ ಪರಿಗಣಿಸಿವೆ. ಗೆಲುವು ಸಾಽಸಲೇಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಈಗಿನಿಂದಲೇ ಸಜ್ಜಾಗಬೇಕು ಎಂದು ತಿಳಿಸಿದರು.
ಡಿಸಿಸಿ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಽಕಾರದಲ್ಲಿದ್ದು, ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸೋಣ ಎಂದರು.
ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಗೀತಾ ನಂದಿನಿಗೌಡ, ಪದಾಽಕಾರಿಗಳಾದ ಹಾಲಸ್ವಾಮಿ, ಸಂಪತ್‌ಕುಮಾರ್, ಡಿ.ಎನ್. ಮೈಲಾರಪ್ಪ, ಶಿವಣ್ಣ ಗಂಜಿಗಟ್ಟೆ, ಪ್ರಕಾಶ್, ಆರ್.ಕೆ. ಸರ್ದಾರ್, ಕಾರೇಹಳ್ಳಿ ಉ¯್ಲÁಸ್, ಲಕ್ಷಿ÷್ಮÃಕಾಂತ್, ಜಯಣ್ಣ, ಮಂಜುನಾಥ್, ಮುದಾಸಿರ್, ಮುನಿರಾ ಮುಕಂದಾರ್, ಅ¯್ಲÁಭಕ್ಷಿ, ಪ್ರಕಾಶ್ ರಾಮನಾಯ್ಕï, ಖುದ್ದ್ದೂಸ್, ಮಧುಗೌಡ, ಶಬ್ಬೀರ್ ಇತರರಿದ್ದರು.