ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ತ್ರೆÊಮಾಸಿಕ ಜಿ¯್ಲÁ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಟಿ. ವೆಂಕಟೇಶ್ ಮಾತನಾಡಿದರು. ಡಾ.ಎಸ್. ಆಕಾಶ್, ಗಾಯತ್ರಿ, ಶಿವಕುಮಾರ್, ಮಲ್ಲಿಕಾರ್ಜುನ್, ಬಿ. ರಾಜಪ್ಪ, ಟಿ.ಡಿ. ರಾಜಗಿರಿ, ಅರುಣ್‌ಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ಅನುದಾನ ದುರ್ಬಳಕೆಯಾದಲ್ಲಿ ಕಠಿಣ ಕ್ರಮ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಮಿತಿ ರಚನೆ
  • ಡಿಸಿ ವೆಂಕಟೇಶ್ ಹೇಳಿಕೆ
  • ಜಿ¯್ಲÁ ಜಾಗೃತಿ ಮತ್ತು ಉಸ್ತುವಾರಿ ಸಮಿತಿ
ಚಿತ್ರದುರ್ಗ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಆಗಿರುವುದು ಖಚಿತವಾದರೆ ಅಂತಹ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿ¯್ಲÁಽಕಾರಿ ಟಿ. ವೆಂಕಟೇಶ್ ಎಚ್ಚರಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತ್ರೆÊಮಾಸಿಕ ಜಿ¯್ಲÁ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಯಲ್ಲಿ ಮಾತನಾಡಿದರು.
ಕೊಳೆಗೇರಿ ಅಭಿವೃದ್ಧಿ ಸೇರಿ ವಿವಿಧ ನಿಗಮ, ಮಂಡಳಿಗಳಲ್ಲಿ ಸರ್ಕಾರಿ ನಿಯಮ ಸರಿಯಾಗಿ ಪಾಲಿಸದೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಬಳಸಿರುವ ಕುರಿತು ದೂರುಗಳು ಕೇಳಿಬರುತ್ತಿವೆ. ಹೀಗಾಗಿ ಸಮಗ್ರ ಪರಿಶೀಲನೆಗೆ ಜಿ¯್ಲÁಮಟ್ಟದ ಅಽಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ದುರ್ಬಳಕೆಯಾದಲ್ಲಿ ಕ್ರಮ ಖಚಿತ ಎಂದು ಹೇಳಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಽಕಾರಿಗಳು ಎಸ್ಸಿ-ಎಸ್ಟಿ ಸಮುದಾಯಕ್ಕಾಗಿ ಸರ್ಕಾರ ನೀಡಿರುವ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡಿz್ದÁರೆ. ಆದ್ದರಿಂದ ಸಂಬAಽಸಿದ ಅಽಕಾರಿಗಳು, ಗುತ್ತಿಗೆದಾರರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಮಿತಿ ಸದಸ್ಯರು ಒತ್ತಾಯಿಸಿದರು.
ದೌರ್ಜನ್ಯ ತಡೆ ಕಾಯ್ದೆಯಡಿ ಸಂತ್ರಸ್ತರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸಲು ತಾಲೂಕು ಮಟ್ಟದಲ್ಲಿ ಅಽಕಾರಿಗಳು ಕಡ್ಡಾಯವಾಗಿ ಸಭೆಗಳನ್ನು ನಡೆಸಬೇಕು. ಪ್ರಾಥಮಿಕ ಹಂತದಲ್ಲೇ ಗುರುತಿಸಿ ಬಗೆಹರಿಸಿದರೆ ಜಿ¯್ಲÁಮಟ್ಟಕ್ಕೆ ಬರುವ ದೂರುಗಳ ಸಂಖ್ಯೆ ಕಡಿಮೆಯಾಗಲಿದೆ. ಅಲ್ಲದೆ, ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲೂ ೧೫ ದಿನಕ್ಕೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಡಿಸಿ ಸೂಚಿಸಿದರು.
ಇತರೆ ಜಿ¯್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಎಸ್ಸಿ-ಎಸ್ಟಿ ಜನಸಂಖ್ಯೆ ಹೆಚ್ಚಿದೆ. ಇದರ ಆಧಾರದಡಿ ಹೆಚ್ಚಿನ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಗಂಗಾಕಲ್ಯಾಣ, ಉದ್ಯೋಗ ಸಾಲ ಯೋಜನೆ, ಮನೆ ಹಂಚಿಕೆ, ಭೂ ಒಡೆತನ ಸೇರಿ ನಿಗದಿತ ಕಾರ್ಯಗಳಲ್ಲಿ -Àಲಾನುಭವಿಗಳ ಆಯ್ಕೆ ಸಂಖ್ಯೆ ಹೆಚ್ಚಳಕ್ಕೂ ಮನವಿ ಮಾಡುವುದಾಗಿ ತಿಳಿಸಿದರು.
ಚಿತ್ರದುರ್ಗ ನಗರದ ಸಮಾಜ ಕಲ್ಯಾಣ ಇಲಾಖೆ ಜಿ¯್ಲÁ ಕಚೇರಿಗೆ ತಾಲೂಕು ಕಚೇರಿ ಸ್ಥಳಾಂತರಿಸಿ ಎರಡೂ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದರೆ, ಜನರಿಗೆ ಅನುಕೂಲವಾಗಲಿದೆ. ಮೊಳಕಾಲ್ಮೂರು ಪಟ್ಟಣದಲ್ಲಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ಸಾಮಗ್ರಿಗಳನ್ನು ದುರುಪಯೋಗ ಮಾಡಿಕೊಂಡ ಮೇಲ್ವಿಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಕಟ್ಟಡ ಕಾರ್ಮಿಕ ಮಂಡಳಿಯಿAದ ಕಾರ್ಮಿಕ ಮಕ್ಕಳ ವಿವಾಹಕ್ಕೆ ನೀಡುವ ಪ್ರೋತ್ಸಾಹಧನ ಯೋಜನೆಯಲ್ಲಿ ಅವ್ಯವಹಾರ ನಡೆ ಯುತ್ತಿದೆ. ಹೊಸದುರ್ಗ ತಾಲೂಕಿನಲ್ಲಿ ಅಽಕಾರಿಗಳ ಹೆಸರೇಳಿ -Àಲಾನುಭವಿಗಳಿಂದ ೧೦-೧೫ ಸಾವಿರ ರೂ.ಗಳನ್ನು ಖಾಸಗಿ ವ್ಯಕ್ತಿಗಳು ಪಡೆಯುತ್ತಿz್ದÁರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಸಮಿತಿ ಸದಸ್ಯರು ಸಭೆಯಲ್ಲಿ ಕೋರಿದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಅಽಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಡಿಸಿ ಎಚ್ಚರಿಸಿದರು.
ಜಿ¯್ಲÁ ನ್ಯಾಯಾಲಯದಲ್ಲಿ ಪ್ರಸಕ್ತ ಜೂನ್ ಅಂತ್ಯಕ್ಕೆ ದೌರ್ಜನ್ಯ ಸಂಬAಧ ೧೭೩ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ೨ ಕೇಸ್‌ಗಳಲ್ಲಿ ಶಿಕ್ಷೆ ಹಾಗೂ ೧ರಲ್ಲಿ ಬಿಡುಗಡೆಯಾಗಿದೆ ಎಂದು ಸರ್ಕಾರಿ ಅಭಿಯೋಜಕರು ಸಭೆಗೆ ತಿಳಿಸಿದರು.
ಜಿಪಂ ಸಿಇಒ ಡಾ.ಎಸ್. ಆಕಾಶ್, ಸಿಪಿಒ ಗಾಯತ್ರಿ, ಎಎಸ್ಪಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲï, ಸಮಿತಿ ಸದಸ್ಯರಾದ ಬಿ. ರಾಜಪ್ಪ, ಟಿ.ಡಿ. ರಾಜಗಿರಿ, ವೈ. ಮುದ್ದಪ್ಪ, ಪ್ರಶಾಂತ್‌ಕುಮಾರ್, ಟಿ. ರವೀಂದ್ರ, ಹೇಮೇಗೌಡ, ಜಿ.ಪಿ. ರವಿಶಂಕರ್, ಎಂ. ರಾಜಣ್ಣ, ಓಂಕಾರಮೂರ್ತಿ, ಅರುಣ್‌ಕುಮಾರ್, ಅವಿನಾಶ್ ಇನ್ನಿತರ ಅಽಕಾರಿಗಳು ಇದ್ದರು.