ಎಐಎಂಎಸ್‌ಎಸ್ ರಾಜ್ಯಸಮಿತಿ ಬೆಂಗಳೂರಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಮಹಿಳಾ ಸಮಾವೇಶದ ಕರಪತ್ರಗಳನ್ನು ಚಿತ್ರದುರ್ಗ ದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ಎಸ್. ಕಲ್ಯಾಣಿ, ಡಿ. ಸುಜತಾ, ಕುಮುದಾ, ಬಿಂದು, ಜ್ಯೋತಿ ಇದ್ದರು. 
ಚಿತ್ರದುರ್ಗ

೭ರಂದು ಬೆಂಗಳೂರಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶ

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ
  • ರಾಜ್ಯಮಟ್ಟದ ಮಹಿಳೆಯರ ಸಮಾವೇಶ
  • ಕರಪತ್ರ
ಚಿತ್ರದುರ್ಗ: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎAಎಸ್‌ಎಸ್)ರಾಜ್ಯ ಸಮಿತಿಯಿಂದ ಬೆಂಗಳೂರಿನ ಗಾಂಽ ಭವನದಲ್ಲಿ ಜ.೭ ರಂದು ಬೆಳಗ್ಗೆ ೧೦.೩೦ಕ್ಕೆ ರಾಜ್ಯಮಟ್ಟದ ಮಹಿಳೆಯರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಂಟಿ ಕಾರ್ಯದರ್ಶಿ ಕಲ್ಯಾಣಿ ಹೇಳಿದರು.

ಮೈಸೂರಿನ ರಂಗಕರ್ಮಿ ಪ್ರೊ. ರಾಮೇಶ್ವರಿವರ್ಮಾ ಸಮಾವೇಶ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಬೆಂಗಳೂರಿನ ನ್ಯಾಯವಾದಿ ಹೇಮಲತಾ ಮಹಿಷಿ, ವೈದ್ಯರಾದ ಡಾ. ಶ್ರೀದೇವಿಕುಮಾರ್, ಡಾ. ಸುಧಾ ಕಾಮತ್, ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ, ಚಲನಚಿತ್ರ ಗೀತೆ ರಚನೆಕಾರ ಕವಿರಾಜ್ ಭಾಗವಹಿಸುವರು. ಎಐಎಂಎಸ್‌ಎಸ್ ರಾಜ್ಯ ಸಮಿತಿ ಅಧ್ಯಕ್ಷೆ ಎಂ.ಎನ್. ಮಂಜುಳಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಕಳೆದ ನವೆಂಬರ್‌ನಿAದ ೨೫ ಮಾರ್ಚ್ವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಆಂದೋಲನದಡಿ ನಾನಾ ಕಾರ್ಯಕ್ರಮ ಗಳ ಮೂಲಕ ಮಹಿಳೆ ಮತ್ತು ಮಕ್ಕಳ ಜಾಗೃತಿಗೆ ಶ್ರಮಿಸುತ್ತಿದೆ. ನಿತ್ಯ ನಡೆಯುವ ನಾನಾ ದೌರ್ಜನ್ಯಗಳಿಗೆ ಸಾವಿರಾರು ಮಹಿಳೆ ಯರು ಬಲಿಯಾಗುತ್ತಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾತ್ತಿವೆ. ಇಂಥ ಅಮಾನವೀಯ ವ್ಯವಸ್ಥೆ ವಿರುದ್ಧ ನಾವೆಲ್ಲರೂ ಸಂಗ್ರಾಮಕ್ಕೆ ಸಜ್ಜಾಗಬೇಕಾಗಿದೆ ಎಂದು ತಿಳಿಸಿದರು. ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ. ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ -Áಸ್ಟ್ಟ್ಯಾಕ್ ಕೋರ್ಟ್ಗಳನ್ನು ಸ್ಥಾಪಿಸಿ, ಅಪರಾಽಗಳಿಗೆ ಶಿಕ್ಷೆ ನೀಡುವುದು ಮತ್ತಿತರ ಹಕ್ಕೋತ್ತಾಯಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದರು. ಡಿ. ಸುಜಾತಾ, ಕುಮುದಾ, ಬಿಂದು, ಜ್ಯೋತಿ ಇದ್ದರು.