- SRS
- ಬಿ.ಇಡಿ. ಪರೀಕ್ಷೆ ಫಲಿತಾಂಶ
- ರ‍್ಯಾಂಕ್ ಪಟ್ಟಿ
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾನಿಲಯದ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಬಿ.ಇಡಿ. ಪರೀಕ್ಷೆ ಫಲಿತಾಂಶದ ರ‍್ಯಾಂಕ್ ಪಟ್ಟಿ ಪ್ರಕಟ ವಾಗಿದ್ದು, ಚಿತ್ರದುರ್ಗದ ಎಸ್‌ಆರ್‌ಎಸ್ ಶಿಕ್ಷಣ ಮಾಹಾವಿದ್ಯಾಲಯದ ಬಿ.ಇಡಿ ಪ್ರಶಿಕ್ಷಣಾರ್ಥಿ ಎಚ್. ಆಶಾ(ಪಿ.ಎಂ ವಿಭಾಗ-ಶೇ.೮೮. ೨೦) ವಿಶ್ವವಿದ್ಯಾನಿಲಯ ಮಟ್ಟದಲ್ಲಿ ೧೦ ನೇ ರ‍್ಯಾಂಕ್ ಪಡೆದಿದ್ದಾರೆ. ಈ ಮೂಲಕ ಕಾಲೇಜು ಮತ್ತು ಕುಟುಂಬಕ್ಕೆ ಕೀರ್ತಿ ತಂದಿರುವ ಆಶಾ ಅವರ ಈ ಸಾಧನೆಗೆ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಪಿ. ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಪ್ರಾಚಾರ್ಯ ಡಾ.ಟಿ.ಎಸ್. ರವಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ ನಿರಂತರ ೪ನೇ ವರ್ಷದಲ್ಲಿ ಈ ರ‍್ಯಾಂಕ್ ಲಭಿಸಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.