ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ಮೂವರು ಸಾಧಕ ವಿದ್ಯಾರ್ಥಿಗಳೊಂದಿಗೆ ಬಿ.ಎ. ಲಿಂಗಾರೆಡ್ಡಿ, ಎಂ.ಎಸ್. ಪ್ರಭಾಕರ್ ಇದ್ದಾರೆ. 
ಚಿತ್ರದುರ್ಗ

ಎಸ್‌ಆರ್‌ಎಸ್ ಸಿಬಿಎಸ್‌ಇ ಶಾಲೆಗೆ ಶೇ. ೧೦೦ -Àಲಿತಾಂಶ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಾಧನೆಯ ಗರಿ
  • ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ
  • ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ
ಚಿತ್ರದುರ್ಗ: ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಗೆ ೨೦೨೫-೨೬ನೇ ಸಾಲಿನ ಸಿಬಿಎಸ್‌ಇ ೧೦ನೇ ತರಗತಿಯಲ್ಲಿ ಶೇ. ೧೦೦ರಷ್ಟು -Àಲಿತಾಂಶ ಲಭಿಸಿದೆ. ಸತತ ೯ನೇ ವರ್ಷವೂ ಈ ಸಾಧನೆಯ ಗರಿ ಮುಡಿಗೇರಿಸಿಕೊಂಡಿದೆ.
ವಿದ್ಯಾರ್ಥಿಗಳಾದ ರುಮಂಡ್ಲ ಅದಿತ್ರಿ (ಶೇ. ೯೮.೨), ಜಿ.ಆರ್. ಲಲಿತ್‌ಕಿಶೋರ್ (ಶೇ. ೯೮), ವಿ.ಎನ್. ಪ್ರತೀಕ್ಷ (ಶೇ. ೯೬.೪)ಅಂಕಗಳನ್ನು ಪಡೆದಿದ್ದಾರೆ. ೯ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಶೇ.೧೦೦ರಷ್ಟು ಅಂಕಗಳಿಸಿದ್ದಾರೆ.
ಒಟ್ಟು ೧೮೭ ವಿದ್ಯಾರ್ಥಿಗಳಲ್ಲಿ ೨೭ ಮಂದಿ ಶೇ. ೯೦ಕ್ಕಿಂತ ಅಽಕ ಹಾಗೂ ೧೧೬ ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಽಕಾರಿ ಡಾ.ಟಿ.ಎಸ್. ರವಿ, ಪ್ರಾಚಾರ್ಯ ಎಂ.ಎಸ್. ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.