- ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
- ರಾಂಪುರ ಠಾಣೆ
- ಮೊಳಕಾಲ್ಮೂರು ತಾಲೂಕು ಕೊಪ್ಪ
ಚಿತ್ರದುರ್ಗ: ಮದ್ಯಕ್ಕೆ ಹಣ ಕೊಡಲಿಲ್ಲವೆಂದು ತಾಯಿಯನ್ನೇ ಚಾಕುವಿಂದ ಇರಿದು ಕೊಂದಿದ್ದ ಪುತ್ರನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಽ ಶಿಕ್ಷೆ ವಿಽಸಿ ಶನಿವಾರ ತೀರ್ಪು ನೀಡಿದೆ.
ಮೊಳಕಾಲ್ಮೂರು ತಾಲೂಕು ಕೊಪ್ಪದ ನಿವಾಸಿ, ಸಿ. ಶಿವಾರೆಡ್ಡಿ ಶಿಕ್ಷೆಗೆ ಗುರಿಯಾದ ಅಪರಾಽ. ಮದ್ಯ ಸೇವನೆ ಚಟಕ್ಕೆ ತುತ್ತಾಗಿದ್ದ ಶಿವಾರೆಡ್ಡಿ ಹಣಕ್ಕಾಗಿ ಪದೆ ಪದೇ ತನ್ನ ತಾಯಿ ಅಂಜಿನಮ್ಮ ಜತೆ ಜಗಳವಾಡುತ್ತಿದ್ದ. ೨೦೨೩ರ ನವೆಂಬರ್ ೨೫ರಂದು ಸಂಜೆ ಮನೆ ಕಟ್ಟೆ ಮೇಲೆ ಕುಳಿತಿದ್ದ ಅಂಜಿನಮ್ಮ ಅವರನ್ನು ಶಿವಾರೆಡ್ಡಿ ಮದ್ಯ ಸೇವಿಸಲು ಹಣ ಕೊಡುವಂತೆ ಕೇಳಿದ್ದ. ಆದರೆ ಹಣ ಕೊಡಲು ನಿರಾಕರಿಸಿದಾಗ ಆಕ್ರೋಶಗೊಂಡು ಚಾಕುವಿಂದ ತಾಯಿಗೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಂಜಿನಮ್ಮ ಅವರನ್ನು ರಾಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ರಾಂಪುರ ಠಾಣೆ ಸಿಪಿಐ ವಸಂತವಿಠಲ್ ಅಸೋದೆ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ವೀರಣ್ಣ ಸೋಮಶೇಖರ ಅವರು, ಅಪರಾಽಗೆ ಜೀವಾವಽ ಶಿಕ್ಷೆ ವಿಽಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಂಶೀರ್ ಅಲಿ ಖಾನ್ ವಾದಿಸಿದ್ದರು.