ಚಿತ್ರದುರ್ಗ ಜಿಲ್ಲೆಯಲ್ಲಿ ಜೋತಿರ್ಲಿಂಗ ದರ್ಶನ ಏರ್ಪಡಿಸಿರುವ ಕುರಿತಂತೆ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ವೇತಾ ಲಮಾಣಿ, ಮಂಜುನಾಥ್, ಡಾ.ರವಿಚಂದ್ರ, ಮಲ್ಲಿಕಾರ್ಜುನ್, ಮಹಾಂತೇಶ್ ಇತರರಿದ್ದರು. 
ಚಿತ್ರದುರ್ಗ

ಸೋಮನಾಥ ಜ್ಯೋತಿರ್ಲಿಂಗ ದರ್ಶನ ಮೇ ೨ರಿಂದ

ಪ್ರಮುಖ ಮುಖ್ಯಾಂಶಗಳು

  • ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿAದ ಆಯೋಜನೆ
  • ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ, ನಾಯಕನಹಟ್ಟಿಯಲ್ಲಿ ವ್ಯವಸ್ಥೆ
  • ಚಿತ್ರದುರ್ಗ ಮೆದೇಹಳ್ಳಿ ರಸ್ತೆ ಅಯ್ಯಪ್ಪಸ್ವಾಮಿ ದೇವಾಲಯ
ಚಿತ್ರದುರ್ಗ: ಸಾವಿರ ವರ್ಷ ಐತಿಹ್ಯವಿರುವ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ದರ್ಶನ, ರುದ್ರಪೂಜೆ ಮತ್ತು ಸತ್ಸಂ ಗಕ್ಕೆ ಜಿಲ್ಲೆಯ ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಆರ್ಟ್ ಆ-ï ಲಿವಿಂಗ್ ಸಂಸ್ಥೆಯ ಶ್ವೇತಾ ಲಮಾಣಿ ಹೇಳಿ ದರು.
ನಗರದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಈ ಆಶ್ರಮದಿಂದ ಹಮ್ಮಿಕೊಂಡಿರುವ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಯಾತ್ರೆ ಚಿತ್ರದುರ್ಗದಲ್ಲಿ ಮೇ ೨ರಿಂದ ೩ ದಿನಗಳ ಕಾಲ ನಡೆಯಲಿದೆ ಎಂದರು.
ಮೇ ೨ರಂದು ಚಿತ್ರದುರ್ಗ ಮೆದೇಹಳ್ಳಿ ರಸ್ತೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ೭.೩೦ರಿಂದ ಮಧ್ಯಾಹ್ನ ೧೨.೩೦ರವರೆಗೆ ಹಾಗೂ ಸಂಜೆ ೫ರಿಂದ ರಾತ್ರಿ ೮ಗಂಟೆವರೆಗೆ ಹಾಗೂ ೩ರಂದು ಹೊಸದುರ್ಗದ ಅಶೋಕ ರಂಗ ಮಂದಿರದಲ್ಲಿ ಬೆಳಗ್ಗೆ
೭.೩೦ರಿಂದ ೧೧.೩೦ ಹಾಗೂ ಸಂಜೆ ೫ರಿಂದ ೭ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಮೇ ೪ ರಂದು ಚಳ್ಳಕೆರೆ ಬಿಎಂಜಿಎಚ್‌ಎಸ್ ಮೈದಾನದಲ್ಲಿ ಬೆಳಗ್ಗೆ ೭.೩೦ರಿಂದ ೧೦ರವರೆಗೆ ಹಾಗೂ ಅದೇ ದಿನ ಸಂಜೆ ೪ರಿಂದ ೭ರವರೆಗೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದ ಹೊರಮಠದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು.
ಸೋಮನಾಥ ದೇವಾಲಯದ ಮೇಲೆ ಕ್ರಿ.ಶ.೧೦೨೬ರಲ್ಲಿ ನಡೆದಿದ್ದ ದಾಳಿ ವೇಳೆ ೧೨ ಜೋತಿರ್ಲಿಂಗಗಳಲ್ಲಿ ಮೊದಲನೆಯದು ಧ್ವಂಸಗೊAಡು ಕಣ್ಮರೆಯಾಗಿತ್ತು ಎಂದು ನಂಬಲಾಗಿತ್ತು. ಆದರೆ ಈ ಲಿಂಗದ ಅವಶೇಷಗಳು ಸಾವಿರ ವರ್ಷಗಳಿಂದ ರಹಸ್ಯವಾಗಿ ಸಂರಕ್ಷಿಸಲ್ಪಟ್ಟಿದ್ದವು ಎಂದು ಹೇಳಿದರು.
ಇವುಗಳನ್ನು ದಕ್ಷಿಣ ಭಾರತಕ್ಕೆ ತಂದ ದೈವಭಕ್ತ ಅಗ್ನಿಹೋತ್ರಿ ಬ್ರಾಹ್ಮಣರ ವಂಶಸ್ಥರು, ಹಿಂದಿನ ಕಂಚಿಶ್ರೀಗಳ ಅಣತಿಯಂತೆ ಜೋತಿರ್ಲಿಂಗದ ಪೂರ್ಣ ವೈಭವ ಮುನ್ನಡೆಸಲು ಜಾಗತಿಕ ಆಧ್ಯಾತ್ಮಿಕ ಗುರು ಗುರುದೇವ ರವಿಶಂಕರ್ ಅವರಿಗೆ ಅರಿಕೆ ಮಾಡಿಕೊಂಡಿದ್ದಾರೆ ಎಂದರು.
ಸAಸ್ಥೆ ಪ್ರಾಜೆಕ್ಟ್ ಭಾರತ್ ಕರ್ನಾಟಕ ಮುಖ್ಯಸ್ಥ ಮಂಜುನಾಥ್ ಮಾತನಾಡಿ, ಜೋತಿರ್ಲಿಂಗದ ದರ್ಶನ ಎಲ್ಲರಿಗೂ ಸಿಗಲಿ ಎನ್ನು ವ ಉದ್ದೇಶದಿಂದ ದೇಶದ ಮೂಲೆ ಮೂಲೆಗಳಿಗೂ ಈ ಯಾತ್ರೆ ನಡೆದಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿAದ ಒತ್ತಡ ನಿವಾರ ಣೆಗೆ ನಾನಾ ಶಿಬಿರಗಳನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು.
ತುಮಕೂರು ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ರವಿಚಂದ್ರ ಒತ್ತಡ ನಿವಾರಣೆಗೆ ಯೋಗ, ಧ್ಯಾನದ ಅಗತ್ಯವಿದೆ ಎಂದರು. ರಾಜಶೇಖರ್, ಮಹಾಂತೇಶ್, ಅರವಿಂದ್, ಮಲ್ಲಿಕಾರ್ಜುನ್ ಇತರರು ಇದ್ದರು.