ಚಿತ್ರದುರ್ಗದಲ್ಲಿ ಮಂಗಳವಾರ ಸಂಸದ ಗೋವಿಂದ ಎಂ.ಕಾರಜೋಳ ಅವರು ಕುಡಿವ ನೀರಿನ ಸಮಸ್ಯೆ ಕುರಿತಂತೆ ಅಽಕಾರಿಗಳೊಂದಿಗೆ ಸಭೆ ನಡೆಸಿದರು. ಬಿ.ಟಿ. ಕುಮಾರಸ್ವಾಮಿ, ಡಾ.ಎಸ್. ಆಕಾಶ್ ಇದ್ದರು. 
ಚಿತ್ರದುರ್ಗ

೨೪ಗಂಟೆಯೊಳಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಅಽಕಾರಿಗಳ ಸಂಸದ ಕಾರಜೋಳ ತಾಕೀತು
  • ಆರ್‌ಒ ಘಟಕಗಳ ದುರಸ್ತಿಗೆ ನಿರ್ದೇಶನ
  • ಕುಡಿಯುವ ನೀರಿನ ಸಮಸ್ಯೆ
ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಹಳ್ಳಿಗಳಲ್ಲಿ ೨೪ ಗಂಟೆಯೊಳಗೆ ಸಮಸ್ಯೆ ನಿವಾರಿಸಬೇಕು. ತಕ್ಷಣವೇ ಶುದ್ಧ ಕುಡಿವ ನೀರಿನ ಘಟಕಗಳ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಅಽಕಾರಿಗಳಿಗೆ ತಾಕೀತು ಮಾಡಿದರು.
ಜಿಪಂನಲ್ಲಿ ಮಂಗಳವಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಅಽಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜನರು ನೀರಿನ ಸಮಸ್ಯೆ ಕುರಿತು ದೂರವಾಣಿ ಮೂಲಕ ಅಳಲು ತೋಡಿಕೊಳ್ಳುತ್ತಿದ್ದಾರೆ.
ಅಽಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿ ತಕ್ಷಣ ಸ್ಪಂದಿಸಬೇಕು. ತೀವ್ರ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಇರುವ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಕೊಳವೆಬಾವಿಗಳಿಲ್ಲದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ನಿರ್ದೇಶಿಸಿದರು.
ಬೇಸಿಗೆಯಲ್ಲಿ ಜನ, ಜಾನುವಾರು ಮತ್ತು ಪಕ್ಷಿಗಳಿಗೂ ನೀರಿನ ಅಗತ್ಯವಿದೆ. ಸಾರ್ವಜನಿಕರು ನೀರನ್ನು ವ್ಯರ್ಥ ಮಾಡದೆ ಮಿತವಾ ಗಿ ಬಳಸಬೇಕು. ಉಪ್ಪು ನೀರನ್ನು ಮನೆ ಬಳಕೆಗೆ ಮತ್ತು ಸಿಹಿ ನೀರನ್ನು ಕುಡಿಯಲು ಉಪಯೋಗಿಸುವಂತೆ ವಿನಂತಿಸಿದರು.
ಜಲಶಕ್ತಿ ಮಂತ್ರಾಲಯಕ್ಕೆ ಪತ್ರ
ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದಿಂದ, ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಪೂರೈಸುವುದನ್ನು ಟಿ.ಬಿ. ಡ್ಯಾಂ ಮಂಡಳಿ ನಿಲ್ಲಿಸಿದೆ. ಇದರಿಂದ ಮುಂಬರುವ ಕೆಲ ವಾರಗಳಲ್ಲಿ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಪರಿಸ್ಥಿತಿ ಎದುರಾಗಿದೆ.
ಮಳೆ ಕೊರತೆ ಹಿನ್ನೆಲೆ ಕುಡಿಯವ ನೀರಿಗೆ ಆದ್ಯತೆ ನೀಡಿ, ಜಲಾಶಯದ ನೀರು ಬಳಸಲು ಅನುಮತಿ ನೀಡುವಂತೆ ಕೇಂದ್ರ ಜಲಶಕ್ತಿ ಮಂತ್ರಾಲಯ ಹಾಗೂ ಟಿ.ಬಿ.ಡ್ಯಾಂ ಮಂಡಳಿಗೆ ಪತ್ರ ಬರೆಯುವುದಾಗಿ ಸಂಸದರು ತಿಳಿಸಿದರು.
ವಿ.ವಿ. ಸಾಗರದಿಂದ ಹಿರಿಯೂರು ಸುವರ್ಣಮುಖಿ ನದಿಗೆ ಕುಡಿಯುವ ನೀರಿನ ಬಳಕೆಗೆ ೦.೧ಟಿಎಂಸಿ ನೀರು ಹರಿಸಲು ಪ್ರಾದೇಶಿಕ ಆಯುಕ್ತರಿಂದ ಅನುಮತಿ ಪಡೆಯುವಂತೆ ಸಂಸದರು ಸೂಚಿಸಿದರು.
ಜಿಪಂ ಸಿಇಒ ಡಾ.ಎಸ್. ಆಕಾಶ್ ಅವರು ಮಾತನಾಡಿ, ಜಿಲ್ಲೆಯ ಅಂದಾಜು ೯೩ ಗ್ರಾಪಂ ವ್ಯಾಪ್ತಿಯ ೨೧೬ ಜನವಸತಿ ಪ್ರದೇಶ ಗಳಲ್ಲಿ ನೀರಿನ ಅಭಾವವಿದೆ. ಪ್ರಸಕ್ತ ವರ್ಷ ಹೊಸದಾಗಿ ೫೪ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದರಲ್ಲಿ ೭ ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಲಭ್ಯವಾಗಿದೆ.
ಹೊಳಲ್ಕೆರೆ ತಾಲೂಕು ಆರ್. ನುಲೇನೂರು ಗ್ರಾಪಂನ ರಂಗಾಪುರ ಲಂಬಾಣಿಹಟ್ಟಿ, ಚಿಕ್ಕಜಾಜೂರಿನ ಮಾರುತಿ ನಗರ, ಹಿರಿಯೂ ರು ತಾಲೂಕಿನ ಕುಂಟಪ್ಪನಹಟ್ಟಿ ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿರುವ ೧೦ ೪೫ ಆರ್‌ಒಘಟಕಗಳ ಪೈಕಿ ೮೩೨ ಕಾರ್ಯಾಚರಣೆಯಲ್ಲಿವೆ. ೧೩೩ ಘಟಕಗಳು ಸ್ಥಗಿತಗೊಂಡಿವೆ. ಇವುಗಳ ದುರಸ್ತಿಗೆ ೬೩ ಲಕ್ಷ ರೂ.ಅನುದಾನ ಅವಶ್ಯವಿದೆ. ಹೊಸ ಆರ್‌ಒಗಳ ನಿರ್ಮಾಣಕ್ಕೆ ಕೆಎಂಇಆರ್‌ಸಿ ಅಡಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಫ್.ಎಚ್. ಲಮಾಣಿ, ಜಿಪಂ ಉಪ ಕಾರ್ಯ ದರ್ಶಿ ಡಾ. ರಂಗಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಚಿತ್ರದುರ್ಗ ನಗರಸಭೆ ಆಯುಕ್ತೆ ಎಸ್. ಲಕ್ಷಿ÷್ಮÃ ಮತ್ತಿತರ ಅಽಕಾರಿಗಳು ಇದ್ದರು.