ಚಿತ್ರದುರ್ಗ ಜಿಲ್ಲಾ ಕಾರಾಗೃಹ. 
ಚಿತ್ರದುರ್ಗ

ಬಂದೀಖಾನೆ ನಿವಾಸಿಗಳಿಗೆ ಕೌಶಲಾಧರಿತ ತರಬೇತಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮಾನವ ಸಂಪನ್ಮೂಲ ಸದ್ಬಳಕೆಗೆ ಮುಂದಾದ ಜೈಲು ಅಽಕಾರಿಗಳು
  • ವಿವಿಧ ಉತ್ಪನ್ನಗಳ ತಯಾರಿಕೆ, ಮಾರಾಟಕ್ಕೆ ಪ್ಲ್ಯಾನ್
  • ತರಬೇತಿಗೆ ೫೦ ಲಕ್ಷ ರೂ. ಅನುದಾನ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ರಾಜ್ಯದ ಕಾರಾಗೃಹಗಳ ವಿಚಾರಣಾಽÃನ ಕೈದಿ ಹಾಗೂ ಸಜಾ ಬಂದಿಗಳು ಬಿಡುಗಡೆಯಾದ ಬಳಿಕ ಸಮಾಜದ ಮುಖ್ಯವಾಹಿ ನಿಗೆ ಸೇರಲು ಅನುಕೂಲವಾಗುವಂತೆ ಅವರಿಗೆ ಕೌಶಲಾಧರಿತ ವೃತ್ತಿ ತರಬೇತಿ ನೀಡಲು ಕಾರಾಗೃಹ ಇಲಾಖೆ ಮುಂದಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿರುವ ಇಲಾಖೆ ಹಿರಿಯ ಅಽಕಾರಿಗಳು, ಜೈಲು ಅಽಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
೧೫-೨೦ ದಿವಸಗಳ ತರಬೇತಿ ನೀಡಿ ಸುಮ್ಮನಾಗದೆ, ಮಾನವ ಸಂಪನ್ಮೂಲ ಸದ್ಬಳಕೆ ಆಗಬೇಕು. ತರಬೇತಿ ಪಡೆದ ಜೈಲು ನಿವಾಸಿಗಳು ಅಗರಬತ್ತಿ, ಫಿನಾಯಿಲ್ ಇತರ ಅಗತ್ಯವಸ್ತುಗಳ ಉತ್ಪನ್ನಕ್ಕೆ ತಯಾರಿಕೆಗೆ ಮುಂದಾಗಬೇಕು. ಇದರಿಂದ ಆದಾಯ ದೊರಕಲಿದೆ ಎಂದು ಇಲಾಖೆ ಯೋಜಿಸಿದೆ.
ಈಗಾಗಲೇ ಕೇಂದ್ರ ಕಾರಾಗೃಹಗಳ ಹಲವು ಜೈಲುಗಳಲ್ಲಿ ಸೋಪು, ಸೋಪಿನ ಪುಡಿ, ಮರಗೆಲಸ, ಬೇಕರಿ ತಿನಿಸು ಇತ್ಯಾದಿಗಳ ನ್ನು ತಯಾರಿಸಲಾಗುತ್ತಿದೆ. ಎಲ್ಲ ಕಾರಾಗೃಹಗಳಲ್ಲಿ ಈ ಕೆಲಸ ನಿರಂತರವಾಗಿರಬೇಕೆಂದು ಸೂಚಿಸಲಾಗಿದೆ. ತರಬೇತಿಗೆ ಇಲಾ ಖೆ ೫೦ ಲಕ್ಷ ರೂ. ಅನುದಾನವನ್ನೂ ಕಾಯ್ದಿರಿಸಿದೆ.
ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಕೌಶಲಾಭಿವೃದ್ಧಿ ಇಲಾಖೆ ಮತ್ತು ರುಡ್‌ಸೆಟ್ ನೆರವಿನೊಂದಿಗೆ ಅಗರಬತ್ತಿ, ಫಿನಾಯಿಲ್ ತಯಾ ರಿಕೆ ತರಬೇತಿ ಹಾಗೂ ಅವುಗಳ ಉತ್ಪಾದನೆಗೆ ಸಿದ್ಧತೆ ನಡೆದಿದೆ. ಈ ಜೈಲುಗಳಲ್ಲಿ ಸರಾಸರಿ ೨೨೦ ನಿವಾಸಿಗಳಿದ್ದು, ಆಯ್ದ ಕೈದಿ ಗಳಿಗೆ ಶೀಘ್ರ ತರಬೇತಿ ಆರಂಭವಾಗಲಿದೆ. ಉತ್ಪನ್ನಗಳಿಗೆ ಅಗತ್ಯವಿರುವ ಯಂತ್ರೋಪರಣಗಳನ್ನು ಎನ್‌ಜಿಒ ಅಥವಾ ಇಲಾಖೆ ಅನುದಾನದಲ್ಲಿ ಖರೀದಿಸಲಾಗುತ್ತಿದೆ.
ಸಿದ್ಧಪಡಿಸಿದ ಉತ್ಪನ್ನಗಳ ಬೈ-ಬ್ಯಾಕ್‌ಗೆ ಕೋರುವುದು, ಇತರೆ ಕಾರಾಗೃಹಗಳಿಗೆ, ಸರ್ಕಾರಿ ಕಚೇರಿಗಳಿಗೆ ಅಗತ್ಯವಿರುವ ವಸ್ತು ಗಳನ್ನು ಪೂರೈಸುವುದು, ಉತ್ಪನ್ನದ ಪ್ರಮಾಣ ಹೆಚ್ಚಾದಂತೆ ಜೈಲು ಆವರಣದಲ್ಲಿ ಔಟ್‌ಲೆಟ್ ಸ್ಥಾಪಿಸಿ ಮಾರುಕಟ್ಟೆ ಒದಗಿಸಲು ಜಿ ಲ್ಲಾ ಕಾರಾಗೃಹ ಅಽಕಾರಿಗಳು ಯೋಜಿಸಿದ್ದಾರೆ. ಈ ತರಬೇತಿ ಸಂಬಂಧ ಶುಕ್ರವಾರ ರುಡ್‌ಸೆಟ್ ಅಽಕಾರಿಗಳೊಂದಿಗೂ ಚರ್ಚಿಸಿ ದ್ದಾರೆ.
ಹೆಸರು ಆಧರಿಸಿ ಬ್ಯಾರೆಕ್ ಅಲಾಟ್
ಇತ್ತೀಚೆಗೆ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕೈದಿಗಳಿಗೆ ಅವರ ಹೆಸರಿನ ಇಂಗ್ಲಿಷ್ ವರ್ಣಮಾಲೆ ಆಧರಿಸಿ ಬ್ಯಾರೆಕ್ ಅಲಾಟ್ ಮಾಡುವ ಪದ್ಧತಿ ಕಟ್ಟುನಿಟ್ಟಿನಿಂದ ಜಾರಿಯಾಗಿದೆ. ಕೈದಿಗಳ ಬಗ್ಗೆ ಅಽಕಾರಿಗಳು, ಸಿಬ್ಬಂದಿಯ ಅನಪೇಕ್ಷಿತ ಫೆವರಿಸಂ ತಡೆಯುವುದು ಇದರ ಮುಖ್ಯ ಉದ್ದೇಶ. ೧೮-೨೦ ವರ್ಷದೊಳಗಿನವರು, ನ್ಯೂ ಅಡ್ಮಿಶನ್ ಹಾಗೂ ಕಾರಾಗೃಹದಲ್ಲಿ ೭ ವರ್ಷ ಅವಽ ಮೀರಿದವರನ್ನು ಹೊರತುಪಡಿಸಿ, ಉಳಿದವರಿಗೆ ಈ ನಿಯಮ ಅನ್ವಯವಾಗಲಿದೆ.
ಬೆಂಗಳೂರು ಪರಪ್ಪನ ಅಗ್ರಹಾರದ ಅಂದಾಜು ೬ ಸಾವಿರ ಕೈದಿಗಳಿಗೆ ಬ್ಯಾರೆಕ್ ಅಲಾಟ್‌ಗೆ ಚಿತ್ರದುರ್ಗದ ಅಽಕಾರಿಗಳನ್ನು ಈಚೆಗೆ ನಿಯೋಜಿಸಲಾಗಿತ್ತು.
ನಾಡಗೀತೆ,ರಾಷ್ಟ್ರಗೀತೆ ಕಡ್ಡಾಯ
ಕೈದಿಗಳಿಗೆ ಜೈಲುಗಳಲ್ಲಿ ನಿತ್ಯ ಪ್ರಾರ್ಥನೆ, ಯೋಗ, ಧ್ಯಾನ ಮೊದಲಾದ ದೈಹಿಕ, ಮಾನಸಿಕ ಕ್ಷಮತೆಯ ಚಟುವಟಿಕೆಗಳನ್ನು ಜಾ ರಿಗೊಳಿಸಲಾಗಿದೆ. ನಾಡಗೀತೆ, ರಾಷ್ಟ್ರಗೀತೆಯ ರೆಕಾರ್ಡ್ ಹಾಕದೇ ಕೈದಿಗಳು ಕೂಡ ಹಾಡುವಂತೆ ಅವರಿಗೆ ತರಬೇತಿ ಕೊಡ ಬೇಕು. ಇದರೊಂದಿಗೆ ಲಘು ಸಂಗೀತ ಕೇಳಿಸಬೇಕೆಂದು ಸೂಚಿಸಲಾಗಿದೆ. ಈಗ ಕೈದಿಗಳಿಗೆ ನಿತ್ಯ ಪರೇಡ್ ಕಡ್ಡಾಯವಾಗಿದೆ.
ಡ್ರಗ್ಸ್ ಸೇವನೆ ಅನುಮಾನ, ೨೫ ಕೈದಿಗಳ ಟೆಸ್ಟ್
ಜೈಲಿನಲ್ಲಿ ನಿಷೇಽತ ವಸ್ತುಗಳಿಗೆ ಕಟ್ಟುನಿಟ್ಟಿನ ನಿರ್ಬಂಧವಿದೆ. ಆದರೂ ಕೆಲವು ಕೈದಿಗಳು ಗಾಂಜಾ ಮತ್ತಿತರ ಮಾದಕ ವಸ್ತು ಸೇವಿಸಿದ್ದಾ ರೆ ಎಂಬ ದೂರಿನ ಹಿನ್ನೆಲೆಯಲ್ಲಿ ಚಿತ್ರದುರ್ಗ ಜೈಲಿನ ೨೫ ಕೈದಿಗಳಿಗೆ ಈಚೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ಬಂದಿದೆ.
೨೫ ಹೊಸ ವಾಹನಗಳು
ರಾಜ್ಯದ ಹಲವು ಜೈಲುಗಳಿಗೆ ಒದಗಿಸಲು ೨೫ ಹೊಸ ವಾಹನಗಳನ್ನು ಖರೀದಿಸಲಾಗಿದ್ದು, ಸದ್ಯದಲ್ಲೇ ಹಂಚಿಕೆ ಆಗಲಿವೆ. ರಾಜ್ಯ ದಲ್ಲಿರುವ ೧೦೨ ಜೈಲುಗಳ ಪೈಕಿ ಕಾರಾಗೃಹ ಇಲಾಖೆ ವ್ಯಾಪ್ತಿಯಲ್ಲಿ ೮ ಕೇಂದ್ರ ಕಾರಾಗೃಹಗಳು, ೨೦ ಸಬ್ ಜೈಲ್, ೧ ವಿಶೇಷ ಜೈಲು ಹಾಗೂ ೧ ಬಯಲು ಬಂದೀಖಾನೆ ಇದೆ. ತಾಲೂಕು ಮಟ್ಟದಲ್ಲಿರುವ ಉಳಿದ ಸಬ್ ಜೈಲುಗಳನ್ನು (ಕಂದಾಯ ಕಾರಾಗೃಹ)ತಮ್ಮ ವ್ಯಾಪ್ತಿಗೆ ಪಡೆಯಲು ಕಾರಾಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆಯಂತೆ.
"

ಕೈದಿಗಳಿಗೆ ಕೌಶಲಾಧರಿತ ವೃತ್ತಿ ತರಬೇತಿ ಹಾಗೂ ಅಗತ್ಯ ವಸ್ತುಗಳ ಉತ್ಪನ್ನ ತಯಾರಿಸಿ ಮಾರಾಟಕ್ಕೆ ಯೋಜಿಸಲಾಗಿದೆ. ಉತ್ಪನ್ನಗಳ ಮಾರಾಟದ ಆದಾಯದಲ್ಲಿ ಸರ್ಕಾರ ಮತ್ತು ಕೈದಿಗಳಿಗೆ ಹಂಚಿಕೆ ಕುರಿತಂತೆ ಇಲಾಖೆ ನಿರ್ದೇಶನ ನೀಡಲಿದೆ. ಚಿತ್ರದುರ್ಗ ಜೈಲಿನಲ್ಲಿ ಶೀಘ್ರ ತರಬೇತಿ ಆರಂಭವಾಗಲಿದೆ.