ಚಿತ್ರದುರ್ಗ ಎಸ್‌ಜೆಂ ಪಾಲಿಟೆಕ್ನಿಕ್‌ನಲ್ಲಿ ಕ್ರೀಡಾ, ಸಾಂಸ್ಕೃತಿಕ ಸಮಾರೋಪ ಸಮಾರಂಭ ಪಾಲಿಫೆಸ್ಟ್ ಅಂಗವಾಗಿ ಗುರುವಾರ ಸಾಂಪ್ರದಾಯಕ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ವರ್ಗದವರು. ಪ್ರಾಚಾರ್ಯ ಪ್ರೊ.ಎಸ್.ವಿ. ರವಿಶಂಕರ್ ಇತರರು ಇದ್ದರು.
- ಸಮಾರೋಪ ಸಮಾರಂಭ
- ಕನ್ನಡದ ಗೀತೆಗಳಿಗೆ ವಿದ್ಯಾರ್ಥಿಗಳ ಹೆಜ್ಜೆ
ಚಿತ್ರದುರ್ಗ: ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ಆವರಣದಲ್ಲಿ ೨೦೨೫-೨೬ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಪಾಲಿಫೆಸ್ಟ್-೨೦೨೬ರ ಮುನ್ನಾ ದಿನ ಗುರುವಾರ ಪಾಲಿಟೆಕ್ನಿಕ್‌ನ ಎಲ್ಲ ವಿದ್ಯಾರ್ಥಿಗಳು ಸಂಭ್ರಮದಿAದ ಭಾಗವಹಿಸಿದ್ದರು.
ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ವರ್ಗದವರು ಸಾಂಪ್ರಾದಾಯಕ ಉಡುಗೆ, ತೊಡುಗೆಗಳೊಂದಿಗೆ ಕಂಗೊಳಿಸಿದರು. ಕನ್ನಡದ ಹಳೇ, ಹೊಸ ಗೀತೆಗಳ ಗಾಯನಕ್ಕೆ ಹೆಜ್ಜೆ ಹಾಕಿದರು. ಪ್ರಾಚಾರ್ಯ ಪ್ರೊ. ಎಸ್.ವಿ. ರವಿಶಂಕರ್, ಪಿ.ಬಿ. ರಾಜೇಶ್‌ಕುಮಾರ್, ಸವಿತಾ, ವಿಶ್ವನಾಥ್, ಪಿ.ಎ. ರಘು, ಮೋಹನ್‌ಕುಮಾರ್, ಲಿಂಗರಾಜು, ಮೋಹನ್ ಹಾಗೂ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಇದ್ದರು.
ಏ.೧೦ ರಂದು ಬೆಳಗ್ಗೆ ೧೦.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಉದ್ಘಾಟಿಸುವರು. ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಎಐ ಜಗತ್ತಿನ ಮುಂದುವರಿದ ತಂತ್ರಜ್ಞಾನ:
ಜಗತ್ತಿನ ಮುಂದುವರಿದ ತಂತ್ರಜ್ಞಾನವಾಗಿರುವ ಕೃತಕ ಬುದ್ಧಿಮತ್ತೆ(ಎಐ)ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿರುವುದಾಗಿ ಚಿತ್ರದುರ್ಗ ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಹೇಳಿದರು.
ಕಾಲೇಜಿನಲ್ಲಿ ಆಯೋಜಿಸಿರುವ ಎರಡು ದಿನಗಳ ಅ್ಠಜಞಛ್ಞಿಠಿಛಿb ್ಕಛಿZ್ಝಜಿಠಿqs - IಛಿಠಿZqಛ್ಟಿoಛಿ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ವಿಭಾಗದ ವಿದ್ಯಾರ್ಥಿಗಳಿಗೂ ಎಐ ತಂತ್ರಜ್ಞಾನ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಸAಪನ್ಮೂಲ ವ್ಯಕ್ತಿಗಳಾದ ಹೈದರಾಬಾದ್‌ನ ಡಿಪ್‌ಲೋಪ್ ಟೆಕ್ನಾಲಾಜಿಸ್ ಸಂಸ್ಥೆ ಕೋ -Ëಂಡರ್, ಸಿಇಒ ಸೂರ್ಯಪ್ರಕಾಶ್ ಹಾಗೂ ಟೀಮ್ ಲೀಡರ್ ವಿನೋದ್ ಹಾಗೂ ಕಾಲೇಜಿನ ಎಐ ಮತ್ತು ಎಂಎಲ್ ವಿಭಾಗದ ಮುಖ್ಯಸ್ಥ ಡಾ.ಟಿ.ವಿ. ಅರವಿಂದ್, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಕೃಷ್ಣರೆಡ್ಡಿ, ಐಕ್ಯೂಎಸಿ ಮುಖ್ಯಸ್ಥ ಡಾ.ಎ.ಎಂ. ರಾಜೇಶ್, ಡೀನ್ ಅಕಾಡೆಮಿಕ್ಸ್ ಡಾ.ಚೇತನ್, ಕಾರ್ಯಾಗಾರ ಸಂಚಾಲಕ ಪ್ರೊ.ಎಸ್. ಧನುಷ್ ಇತರರು ಇದ್ದರು.
ಟಿ. ಸಂಜನಾ ಪ್ರಾರ್ಥಿಸಿದರು, ಕವನಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಅಪ್ನಕೌಸರ್ ನಿರೂಪಿಸಿದರು.