ಡಾ.ಎಸ್.ಪದ್ಮಶ್ವೇತಾ,ಡಾ.ಎಸ್.ಎಂ.ಸಾಧನಾ,ಡಾ.ಕೆ.ಬೃಂದಾ  
ಚಿತ್ರದುರ್ಗ

ಎಸ್‌ಜೆಎಂ ದಂತ ವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್

ಪ್ರಮುಖ ಮುಖ್ಯಾಂಶಗಳು

  • ಎಸ್‌ಜೆಎಂ ದಂತ ಮಹಾವಿದ್ಯಾಲಯ
  • ಪ್ರಥಮ ರ‍್ಯಾಂಕ್‌
  • ಡಾ.ಎಸ್.ಪದ್ಮಶ್ವೇತಾ
ಚಿತ್ರದುರ್ಗ: ರಾಜೀವ್‌ಗಾಂಽ ಯೂನಿವರ್ಸಿಟಿ ೨೦೨೫-೨೬ನೇ ಸಾಲಿನ ಪರೀಕ್ಷೆಯಲ್ಲಿ ನಗರದ ಎಸ್‌ಜೆಎಂ ದಂತ ಮಹಾ ವಿದ್ಯಾ ಲಯದ ಎಂಡಿ ಎಸ್ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಎಸ್.ಪದ್ಮಶ್ವೇತಾ ಪ್ರಥಮ, ಡಾ.ಎಸ್.ಎಂ.ಸಾಧನಾ ೫ನೇ ರ‍್ಯಾಂಕ್ ಮತ್ತು ಸ್ನಾತಕ ಪದವಿ ವಿಭಾಗದಲ್ಲಿ ಡಾ.ಕೆ.ಬೃಂದಾ ಪ್ರಥಮ ರ‍್ಯಾಂಕ್‌ಗಳಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಡಾ.ಎಂ.ಎಚ್. ರಘುನಾಥರೆಡ್ಡಿ ತಿಳಿಸಿದ್ದಾರೆ.
ಮೊದಲನೆಯ ಬಿಡಿಎಸ್‌ನಿಂದ ಅಂತಿಮ ಬಿಡಿಎಸ್‌ವರೆಗೆ ವಿವಿಧ ವಿದ್ಯಾರ್ಥಿಗಳಿಗೆ ಬೇರೆ, ಬೇರೆ ವಿಷಯಗಳಲ್ಲಿ ೫೬ ರ‍್ಯಾಂಕ್‌ಗಳು ಲಭಿಸಿವೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯP್ಷÀ ಶಿವಯೋಗಿ ಸಿ.ಕಳಸದ್, ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಡಾ.ಪಿ.ಎಸ್.ಶಂಕರ್, ಎಸ್.ಎನ್.ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ.