ಚಿತ್ರದುರ್ಗದಲ್ಲಿ ಸೋಮವಾರ ದ್ವಿಚಕ್ರ ವಾಹನಗಳ ಕರ್ಕಶ ಶಬ್ದದ ಸೈಲೆನ್ಸರ್‌ಗಳನ್ನು ಸಂಚಾರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. 
ಚಿತ್ರದುರ್ಗ

ಕರ್ಕಶ ಶಬ್ದದ ದ್ವಿಚಕ್ರ ವಾಹನಗಳ ಸೈಲೆನ್ಸರ್ ವಶ

ಪ್ರಮುಖ ಮುಖ್ಯಾಂಶಗಳು

  • ಸವಾರರಿಗೆ ದಂಡ, ಎಚ್ಚರಿಕೆ
  • ಸಂಚಾರ ಠಾಣೆ ಪಿಎಸ್‌ಐ ವಿಶ್ವನಾಥ್
  • ಆಂದೋಲನ
ಕರ್ಕಶ ಶಬ್ದದ ದ್ವಿಚಕ್ರ ವಾಹನಗಳ ಸೈಲೆನ್ಸರ್ ವಶ
ಚಿತ್ರದುರ್ಗ: ಕರ್ಕಶವಾಗಿ ಧ್ವನಿ ಹೊರಡಿಸುವ ದ್ವಿಚಕ್ರ ಮತ್ತಿತರ ಮೋಟಾರು ವಾಹನಗಳ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳುವ ಆಂದೋಲನವನ್ನು ಪೊಲೀಸರು ಆರಂಭಿಸಿದ್ದಾರೆ.
ನಗರದಲ್ಲಿ ಸೋಮವಾರ ೧೨ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಸವಾರರಿಗೆ ತಲಾ ಒಂದು ಸಾವಿರ ರೂ. ದಂಡ ವಿಽಸಿದ್ದಾರೆ.
ಈ ಕರ‍್ಯಾಚರಣೆ ಭಾನುವಾರ ಆರಂಭವಾಗಿದ್ದು, ಮೊದಲ ದಿನ ಐವರು ದ್ವಿಚಕ್ರ ವಾಹನ ಸವಾರರು ದಂಡ ತೆತ್ತಿದ್ದಾರೆ. ವಾಹನ ಸ ವಾರರ ಮೊದಲ ಬಾರಿಯ ತಪ್ಪಿಗೆ ಒಂದು ಸಾವಿರ ರೂ. ದಂಡ ವಿಽಸುವುದರೊಂದಿಗೆ ದೋಷಪೂರಿತ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.
ಅದೇ ಸವಾರ ಮತ್ತೆ ಅಂಥದ್ದೇ ತಪ್ಪನ್ನು ಮಾಡಿದರೆ ಕೋರ್ಟ್, ತಪ್ಪಿತಸ್ಥರಿಗೆ ೫ ಸಾವಿರ ರೂ. ದಂಡ ವಿಽಸಲಿದೆ ಎಂದು ಸಂಚಾ ರ ಠಾಣೆ ಪಿಎಸ್‌ಐ ವಿಶ್ವನಾಥ್ ತಿಳಿಸಿದ್ದಾರೆ. ಸವಾರರು ತಮ್ಮ ಮೋಟಾರ್ ಬೈಕ್ ಮತ್ತಿತರ ವಾಹನಗಳಲ್ಲಿ ಡಿಫೆಕ್ಟಿವ್ ಸೈಲೆನ್ಸರ್‌ ಗಳಿದ್ದರೆ ಕೂಡಲೇ ಬದಲಿಸಬೇಕೆಂದು ಮನವಿ ಮಾಡಿದ್ದಾರೆ.