ಚಿತ್ರದುರ್ಗ ಪಿಯು ಡಿಡಿ ಕಚೇರಿ. 
ಚಿತ್ರದುರ್ಗ

ದುರ್ಗದ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ನಿರೀಕ್ಷೆ

ಪ್ರಮುಖ ಮುಖ್ಯಾಂಶಗಳು

  • ಸೆಕೆಂಡ್ ಪಿಯು ವಾರ್ಷಿಕ ಪರೀಕ್ಷೆ|
  • ೨ ದಿನಗಳ ವೆಬ್‌ಕಾಸ್ಟಿಂಗ್ ಟೆಸ್ಟಿಂಗ್
  • ೨೬ ಕೇಂದ್ರಗಳು, ೧೪೨೮೧ ವಿದ್ಯಾರ್ಥಿಗಳು
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಸೆಕೆಂಡ್ ಪಿಯುಸಿ ಪರೀಕ್ಷೆ ಪ್ರಕ್ರಿಯೆ ಕಣ್ಗಾವಲಿಗೆ ಈ ಬಾರಿಯೂ ವೆಬ್‌ಕಾಸ್ಟಿಂಗ್ ಮುಂದುವರಿಯಲಿದೆ. ಜಿಲ್ಲಾ ಕೇಂದ್ರ ಹಾಗೂ ಪರೀಕ್ಷಾ ಮಂಡಳಿಯಲ್ಲಿ ರಾಜ್ಯದ ಅಂದಾಜು ೧೧೫೭ ಕೇಂದ್ರಗಳಲ್ಲಿ ಅಳವಡಿಸಿರುವ ಕ್ಯಾಮರಾಗಳ ದೃಶ್ಯಾವಳಿ ವೀಕ್ಷಣೆ ನಡೆಯಲಿದೆ. ಕ್ಯಾಮರಾಗಳ ಟೆಸ್ಟಿಂಗ್ ಕಾರ್ಯ ಸೋಮವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ.
ರಾಜ್ಯದಲ್ಲಿ ಅಂದಾಜು ೭ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಗೆ ಈ ಬಾರಿ ಹೆಚ್ಚಿನ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಜಿಲ್ಲೆಯ ೧೪೧ ಸರ್ಕಾರಿ, ಅನುದಾನಿತ ಹಾಗೂ ಅನುದಾನಿತ ರಹಿತ ಪಿಯು ಕಾಲೇಜುಗಳ ಹಾಗೂ ಖಾಸಗಿ ಸಹಿತ ಒಟ್ಟು ೧೪೨೮೧ವಿದ್ಯಾರ್ಥಿಗಳು ೨೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಖಾಸಗಿ ೧೭೩, ರಿಪೀರ‍್ಸ್ ೧೬೭೫ ಹಾಗೂ ಉತ್ತಮ ಫಲಿತಾಂಶ ಬಂದಿಲ್ಲವೆAದು ಮತ್ತೆ ಐವರು ಪರೀಕ್ಷೆ ಬರೆಯುತ್ತಿದ್ದಾರೆ. ಶೇ.೭೫ ಹಾಜರಾತಿ ಇಲ್ಲವೆಂಬ ಕಾರಣಕ್ಕೆ ಜಿಲ್ಲೆಯ ೯೭೪ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಫೆ. ೨೬ ರಿಂದ ಪ್ರವೇಶ ಪತ್ರ ವಿತರಿಸಲಾಗುತ್ತಿದೆ.
ಕಳೆದ ಬಾರಿ ಜಿಲ್ಲೆಯ ಫಲಿತಾಂಶ ಶೇ. ೫೯ಕ್ಕೆ ಸ್ಥಗಿತಗೊಂಡಿದ್ದು, ರಾಜ್ಯದಲ್ಲಿ ೨೮ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಈ ಬಾರಿ ಫಲಿತಾಂಶ ಸುಧಾರಣೆಗೆ ಜಿಪಂ ಸಿಇಒ ಡಾ.ಎಸ್. ಆಕಾಶ್ ನಿಗಾವಹಿಸಿದ್ದಾರೆ. ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು, ಪ್ರಿಪ್ರರೇಟರಿ -೧ನ್ನು ಮೈನ್ ಪರೀಕ್ಷೆ ಮಾದರಿಯಲ್ಲೇ ನಡೆಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ನಡೆಸಲಾಗಿದೆ.
ಈ ಬಾರಿ ರಾಜ್ಯ ಮಟ್ಟದಲ್ಲಿ ೧೦ ರೊಳಗೆ ಸ್ಥಾನದ ಗುರಿ ಇದ್ದರೂ, ೨೦ ರೊಳಗೆ ಎಂದು ನಿರೀಕ್ಷಿಸಲಾಗಿದೆ. ಪ್ರಿಪರೇಟರಿ ಪರೀಕ್ಷೆಯಲ್ಲಿ ಶೇ.೭೨ ಫಲಿತಾಂಶ ಬಂದಿದೆ.
ಫೆ. ೨೮ ರಿಂದ ಮಾ. ೧೭ರವರೆಗೆ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ರವರೆಗೆ ಪರೀಕ್ಷೆ ನಡೆಯಲಿದೆ. ಏ. ೭ರಂದು ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಬೆಳಗ್ಗೆ ೯.೩೦ ರ ಹೊತ್ತಿಗೆ ಪರೀಕ್ಷಾ ಕೊಠಡಿಯಲ್ಲಿ ಹಾಜರಾಗುವುದು ಉತ್ತಮ. ಪರೀಕ್ಷೆ ಪ್ರಾರಂಭವಾದ ಅರ್ಧ ತಾಸಿನೊಳಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶವಿದೆ. ಅದಕ್ಕಿಂತ ತಡವಾದಲ್ಲಿ ವಿದ್ಯಾರ್ಥಿಗೆ ಕೊಠಡಿ ಪ್ರವೇಶ ನಿರಾಕರಿಸಲಾಗುತ್ತದೆ.
ವಿದ್ಯಾರ್ಥಿಗಳು ಸ್ಮಾರ್ಟ್-ೆÇÃನ್, ವಾಚ್ ಇತ್ಯಾದಿಗಳನ್ನು ಕೊಠಡಿಗೆ ತರುವಂತಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರ ಅಳವಡಿಸಲಾಗಿರುತ್ತದೆ. ಪರೀಕ್ಷಾ ಸಮಯ ಮೂರು ತಾಸಿನೊಳಗೆ ಕಾಲ, ಕಾಲಕ್ಕೆ ವಾರ್ನಿಂಗ್ ಬೆಲ್ ಮೊಳಗಿಸಲಾಗುತ್ತದೆ.
ಎಡಿಸಿ ನೇತೃತ್ವದಲ್ಲಿ ಪಿಯು ಡಿಡಿ ಹಾಗೂ ಜಿಲ್ಲಾ ಖಜಾನಾಽಕಾರಿ ಸಮ್ಮುಖದಲ್ಲಿ ಆಯಾ ವಿಷಯಗಳ ದಿನಗಳಂದು ಬೆಳಗ್ಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಪಡೆದು, ಪೊಲೀಸ್ ಬೆಂಗಾವಲಿನಲ್ಲಿ ಜಿಪಿಎಸ್ ಅಳವಡಿಸಿರುವ ವಾಹನದಲ್ಲಿ ಕೇಂದ್ರಗಳಿಗೆ ರವಾನಿಸಲಾಗುತ್ತದೆ.
"

ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶವೇ ಇಲ್ಲದಂತೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸಿದೆ. ಇದಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಯಾ ವಿಷಯ ಪರೀಕ್ಷೆ ದಿನದ ಬೆಳಗ್ಗೆ ೧೦ ಗಂಟೆವರೆಗೆ ಯಾರಿಗೂ ಪ್ರಶ್ನೆ ಪತ್ರಿಕೆ ಹೇಗಿದೆ ಎಂಬುದು ತಿಳಿಯಲು ಸಾಧ್ಯವೇ ಇಲ್ಲ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ವಂಚನೆ, ಗೊಂದಲ ಮೂಡಿಸುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು, ಪಾಲಕರು ವಂದAತಿಗಳನ್ನು ನಂಬಿ ಮೋಸ ಹೋಗಬಾರದು.

----------
ತಾಲೂಕು- ಕೇಂದ್ರಗಳ ಸಂಖ್ಯೆ- ವಿದ್ಯಾರ್ಥಿಗಳ ಸಂಖ್ಯೆ
ಚಿತ್ರದುರ್ಗ -೧೦ -೫೯೭೬
ಚಳ್ಳಕೆರೆ -೪ -೨೬೩೭
ಹಿರಿಯೂರು -೪ -೧೭೧೦
ಹೊಸದುರ್ಗ -೪ -೧೮೦೦
ಮೊಳಕಾಲ್ಮೂರು - ೨ -೮೦೧
ಹೊಳಲ್ಕೆರೆ -೨ -೧೩೫೭