ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಗುರುವಾರ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಶಾಂತವೀರ ಶ್ರೀ, ಕೇತೇಶ್ವರ ಶ್ರೀ, ಶಾಸಕ ಡಾ.ಎಂ.ಚAದ್ರಪ್ಪ ಇದ್ದರು.  
ಚಿತ್ರದುರ್ಗ

ಹೊಳಲ್ಕೆರೆಯಲ್ಲಿ ಮತ್ತೆ ಸಿದ್ಧರಾಮೇಶ್ವರ ಜಯಂತ್ಯುತ್ಸವ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚಂದ್ರಪ್ಪ ಹೇಳಿಕೆ
  • ಭೋವಿ ಗುರುಪೀಠದ ಕಾರ್ಯಕ್ರಮದಲ್ಲಿ ಭಾಗಿ
  • ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವವನ್ನು ೨೦೨೭ಜನವರಿ ೧೪ರಂದು ಮತ್ತೊಮ್ಮೆ ಆಯೋಜಿಸಲಾಗುವುದು
ಚಿತ್ರದುರ್ಗ: ಚದುರಿದ ಭೋವಿ ಸಮಾಜದ ಸಂಘಟನೆಯಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಶ್ರಮ ಅಪಾರ ವಾಗಿದೆ ಎಂದು ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.
ಗುರುಪೀಠದಲ್ಲಿ ಗುರುವಾರ ಆಯೋಜಿಸಿದ್ದ ಶಿವಯೋಗಿ ಶ್ರೀಸಿದ್ಧರಾಮೇಶ್ವರ ಜಯಂತುತ್ಸವ ಉದ್ಘಾಟಿಸಿ ಮಾತನಾಡಿ, ಸಮಾ ಜ ಸಂಘಟನೆ -Àಲವಾಗಿ ರಾಜ್ಯ, ರಾಷ್ಟç ಮಟ್ಟದಲ್ಲಿ ಸಮುದಾಯದ ಸದೃಢಗೊಳಿಸಲು ಸಾಧ್ಯವಾಗುತ್ತಿ ದೆ. ಹೊಳಲ್ಕೆರೆಯಲ್ಲಿ ರಾಜ್ಯ ಮಟ್ಟದ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವವನ್ನು ೨೦೨೭ಜನವರಿ ೧೪ರಂದು ಮತ್ತೊಮ್ಮೆ ಆ ಯೋಜಿಸಲಾಗುವುದು ಎಂದರು.
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ,ಸಿದ್ಧರಾಮೇಶ್ವರರ ವಚನ ಚಳವಳಿ ಬಹುದೊಡ್ಡ ಶಕ್ತಿಯಾಗಿದೆ. ಕಲ್ಯಾಣದಲ್ಲಿ ಶರಣರ ಮೇಲೆ ನಡೆದ ಹಿಂಸೆ ನಂತರದಲ್ಲಿ ವಚನ ಸಾಹಿತ್ಯ ಮತ್ತು ಚಳವಳಿಯ ಚಲನಶೀಲತೆಯನ್ನು ಸಿದ್ಧ ರಾಮೇಶ್ವರರು ರಕ್ಷಿಸಿದ್ದಾರೆ. ಇವರಿಂದ ವಚನ ಸಾಹಿತ್ಯ ಸಮÊದ್ಧವಾಗಿದೆ ಎಂದರು.
ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಮಾತನಾಡಿ,ಸಿದ್ದರಾಮರು ಸೀಮೆ ಮೀರಿದ ನಿಸ್ಸೀಮರು ಎಂದು ಚನ್ನಬಸವಣ್ಣ ವರ್ಣಿಸುತ್ತಾನೆ. ಒಬ್ಬ ವ್ಯಕ್ತಿಯ ನಿಜವಾದ ಸಾಧನೆಯೆಂದರೆ, ತಾನು ನಿರ್ಮಿಸಿದ ಎಲ್ಲೆಗಳನ್ನು ತಾನೇ ದಾಟಿ ಮುನ್ನಡೆಯುವುದು ಎಂದರು.
ಸಿದ್ದರಾಮೇಶ್ವರರು ಕಾಯಕ ವರ್ಗದ ಅಸ್ಮಿತೆಯಾಗಿದ್ದಾರೆ. ಮೌಢ್ಯ ಸಂಪ್ರದಾಯಗಳಿAದ ಮೌಲ್ಯ ಸಂಪ್ರದಾಯಗಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವಾತ್ಮರಿಗೆ ಲೇಸು ಬಯಸಿದವರು. ಸ್ತಿç ಸಮಾನತೆಗೆ ಧ್ವನಿ ಎತ್ತಿದವರು. ವಚನ ಸಂರಕ್ಷಣೆಯಲ್ಲಿ ಅಗ್ರಜನೆಂದು ಬಣ್ಣಿಸಿದರು.
ಕೊರಟಗೆರೆಯ ಶ್ರೀ ಮಹಾಲಿಂಗ ಶ್ರೀ, ಕೇತೇಶ್ವರ ಸ್ವಾಮೀಜಿ ಹಾಗೂ ಸೇವಾಲಾಲ್ ಸ್ವಾಮೀಜಿ ಮಾತನಾಡಿದರು. ಒಸಿಸಿಐ ರಾಜ್ಯಾಧ್ಯಕ್ಷ ಎಚ್. ಆನಂದಪ್ಪ, ಬಂಡೆ ರುದ್ರಪ್ಪ, ಹನುಮಂತಪ್ಪ, ಡಿ.ಸಿ.ಮೋಹನ್,ಪೇಂಟ್‌ತಿಮ್ಮಣ್ಣ, ಎಚ್.ಲಕ್ಷ÷್ಮಣ್, ಗೌನಹಳ್ಳಿ ಗೋವಿಂದಪ್ಪ, ಚಿತ್ರದುರ್ಗ ತಾಪಂ ಇಒ ರವಿಕುಮಾರ, ಜಿಆರ್ ಹಳ್ಳಿ ಪಿಡಿಒ ಆನಂದ, ಚಂದ್ರಶೇಖರ್,ಮೇದೆಹಳ್ಳಿ ಗ್ರಾಪಂ ಅಧ್ಯಕ್ಷ ನಿರಂಜನ್ ಇದ್ದರು.
ಕಾರು ಉಡುಗೊರೆ
ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವ ನಿಮಿತ್ತ ಶ್ರೀ ಇಮ್ಮಡಿ ಶ್ರೀಗಳಿಗೆ ಭೋವಿ ಸಮಾಜದ ಮುಖಂಡರು ೧.೫ ಕೋಟಿ ರೂ.ಮೌಲ್ಯದ ಬಿ ಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದರು.