ಚಿತ್ರದುರ್ಗದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಟಿ.ರಘುಮೂರ್ತಿ,ಬಿ.ಜಿ.ಗೋವಿಂದಪ್ಪ,ಕೆ.ಸಿ.ವೀರೇAದ್ರಪಪ್ಪಿ,ಪಿ.ರಘು,ಡಾ.ಯೋಗಿಶ್‌ಬಾಬು,ಆರ್.ಶಿವಣ್ಣ ಮತ್ತಿತರರು ಇದ್ದರು.
- ಅಽಕಾರಿಗಳಿಗೆ ಸಚಿವರ ಖಡಕ್ ವಾರ್ನಿಂಗ್
- ಪ್ರತಿ ತಾಲೂಕಲ್ಲೂ ಪ್ರಗತಿ ಪರಿಶೀಲನೆ
- ರೈತರಿಗೆ ಮಧ್ಯಂತರ ಪರಿಹಾರಕ್ಕಾಗಿ ಶಿಫಾರಸಿಗೆ ಸೂಚನೆ
ಚಿತ್ರದುರ್ಗ: ಕೆಡಿಪಿ ತ್ರೆÊಮಾಸಿಕ ಸಭೆ ಹೊರತು ಇನ್ನು ಮುಂದೆ ಒಂದೂವರೆ ತಿಂಗಳೊಮ್ಮೆ ಪ್ರತಿ ತಾಲೂಕಿನ ಪ್ರಗತಿ ಪರಿ ಶೀಲನಾ ಸಭೆ ನಡೆಸಲಾಗುವುದು ಎಂದು ಪ್ರಕೃತಿ ವಿಕೋಪ ಪರಿಹಾರಗಳ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.
ಜಿಪಂನಲ್ಲಿ ಮಂಗಳವಾರ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೆಡಿಪಿ ಸಹಿತ ಯಾವುದೇ ಪರಿಶೀಲನಾ ಸಭೆಗಳಿರಲಿ ಎಷ್ಟು ಹೊತ್ತಾದರೂ ಸರಿ ಶಾಸಕರೊಂದಿಗೆ ಎಲ್ಲ ಇಲಾಖೆಗಳ ವರದಿ ಪಡೆಯಲು ಸಂಕಲ್ಪ ಮಾಡಿದ್ದೇನೆ ಎಂದರು.
ಅಽಕಾರಿಗಳು ಸ್ಥಳ ಪರಿಶೀಲಿಸಿ ನಿಖರ ಮಾಹಿತಿ ನೀಡಬೇಕು. ಬ್ಲಾಕ್‌ಮೇಲ್‌ಗಳಿಗೆ ಹೆದರದೆ ಸರಿಯಾಗಿ ಕೆಲಸ ಮಾಡಬೇಕು. ತಮ್ಮನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ಎಂದರು.
ಇನ್ನು ಕೈ ಬೀಸಿಕೊಂಡು ಸಭೆಗೆ ಬಂದರೆ ನಡೆಯಲ್ಲ. ಉದಾಸೀನತೆ, ಅವ್ಯವಹಾರ ಕಂಡುಬAದರೆ ಶಿಸ್ತು ಕ್ರಮ ಖಚಿತ. ಜವಾಬ್ದಾ ರಿಯಿಂದ ಕೆಲಸ ಮಾಡಿದರೆ ಮಾಹಿತಿ ನೀಡಲು ತಡವರಿಸುವುದಿಲ್ಲ. ಜಿಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಜನಪ್ರತಿನಿಽಗಳು ಇಲ್ಲ.
ಈ ಅಽಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಹೊಣೆ ಆಡಳಿತಾಽಕಾರಿಗಳದ್ದಾಗಿದೆ ಎಂದರು.
ಪ್ರಕೃತಿ ವಿಕೋಪ ಹಾಗೂ ಬರಗಾಲದಂಥÀ ಸಂದರ್ಭದಲ್ಲಿ ಅಽಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ತುರ್ತು ಸಂದರ್ಭಗಳಲ್ಲಿ ಮೇಲಽಕಾರಿ ಅನುಮತಿ ಪಡೆದರೂ ಡಿಸಿ ಗಮನಕ್ಕೆ ತಾರದೆ ಕೇಂದ್ರಸ್ಥಾನದಿAದ ತೆರಳಬಾರದು ಎಂದರು.
ಬಿತ್ತನೆ ವೈ-Àಲ್ಯಕ್ಕೆ ಮಧ್ಯಂತರ ಬೆಳೆ ಪರಿಹಾರಕ್ಕೆ ಶಿ-Áರಸು
ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿರುವ ಬಿತ್ತನೆ ವೈ-Àಲ್ಯಕ್ಕೆ ಮಧ್ಯಂತರ ಬೆಳೆ ಪರಿಹಾರಕ್ಕೆ ಶಿ-Áರಸು ಮಾಡುವಂತೆ ಸ ಚಿವರು ಸೂಚಿಸಿದರು. ಎಲ್ಲ ರೈತರಿಗೂ ಬೆಳೆ ವಿಮೆ ಮತ್ತು ಸರ್ಕಾರದ ಇತರೆ ಸೌಲಭ್ಯಗಳು ತಲುಪಬೇಕು. ರಾಗಿ ಬೆಳೆ ವಿಮೆ ನೋಂದಣಿಗೆ ಆ.೧೪ ರವರೆಗೆ ಅವಕಾಶವಿದೆ.
ಇನ್ನು ೨೦-೨೫ ಸಾವಿರ ರೈತರು ಹೆಚ್ಚುವರಿಯಾಗಿ ನೋಂದಣಿ ಆಗಬೇಕು. ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆ ಮುನ್ಸೂಚನೆ ಇರುವುದರಿಂದ ರೈತರಿಗೆ ಶೇ.೨೫ ರಷ್ಟು ಪರಿಹಾರ ದೊರಕಬೇಕು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪರಿಶೀಲಿಸಿ ನಿಖರ ಮಾಹಿತಿ ಕೊಡಬೇಕೆಂದು ಸಚಿವರು ಹೇಳಿದರು.
ಡಿಸಿ ಟಿ. ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ೩.೦೨ ಲಕ್ಷಕ್ಕೂ ಅಽಕ ರೈತರಿದ್ದು,ಪ್ರಸಕ್ತ ೬.೨೪ ಲಕ್ಷ ಹೆಕ್ಟೇರ್ ಪೈಕಿ ೧.೧೮ ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ಬಿತ್ತನೆ ವೈ-Àಲ್ಯದಡಿ ಬೆಳೆ ವಿಮೆ ಹಾಗೂ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಮುಂಬರುವ ದಿನಗಳಲ್ಲಿ ಮಧ್ಯಂತರ ಪರಿಹಾರಕ್ಕೂ ಪ್ರಸ್ತಾವನೆ ಕಳುಹಿಸಲಾಗುವುದು. ಇದರಿಂದ ಜಿಲ್ಲೆಯ ಶೇ.೮೫ ರೈತರಿಗೆ ವಿಮಾ ಸೌಲಭ್ಯ ದೊರೆಯಲಿದೆ. ಮಳೆ ಆಶ್ರಿತ ಹಾಗೂ ನೀರಾವರಿ ಎರಡೂ ವಿಭಾಗದ ಬೆಳೆ ಹಾನಿ ಪ್ರದೇಶಗಳನ್ನು ಒಳಗೊಂಡು ಶೇ.೧೦೦ರಷ್ಟು ಅರ್ಹ ರೈತರಿಗೆ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಒಟ್ಟು ರೈತರಲ್ಲಿ ಪ್ರಧಾನಮಂತ್ರಿ -Àಸಲ್ ಬಿಮಾ ಯೋಜನೆಯಡಿ ಕೃಷಿ ಬೆಳೆಗೆ ೧,೯೬,೫೫೩ ರೈತರು, ಹವಾಮಾನ ಆಧಾರಿತ ಬೆಳೆ ವಿಮೆಯಡಿ ತೋಟಗಾರಿಕೆ ಬೆಳೆಗಳಿಗೆ ೪೬,೯೪೭ ರೈತರು ಸೇರಿ ೨,೪೩,೦೭೫ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ. ಸವಿತಾ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಎಲ್ಲ ಬಹುಗ್ರಾಮ ಕುಡಿವ ನೀರು ಯೋಜನೆಗಳು(ಎಂವಿಎಸ್)ಡಿಸೆAಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಚಿವರು ತಾಕೀತು ಮಾಡಿದರು.
೪ ವರ್ಷಗಳಾದರೂ ಯೋಜನೆಗಳ ಅನುಷ್ಠಾನಕ್ಕಾಗಿ ಅರಣ್ಯಭೂಮಿ ತೊಡಕು ನಿವಾರಿಸದ ಅಽಕಾರಿಗಳ ನಡೆಗೆ ಸಚಿವರು ಬೇಸರ ವ್ಯಕ್ತಪಡಿಸಿದರು.
ಹೊಸದುರ್ಗ ತಾಲೂಕು ಎಂವಿಎಸ್ ಸ್ಕೀಂಗಳ ಕುರಿತಂತೆ ಬೆಂಗಳೂರಲ್ಲಿ ಪ್ರತ್ಯೇಕ ಸಭೆ ನಡೆಸಬೇಕೆಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು. ತೆಂಗುಬೆಳೆಗೆ ತಗುಲುವ ರೋಗ ನಿವಾರಣೆಗೆ ಹೋಬಳಿ ಮಟ್ಟದಲ್ಲಿ ಬೆಳೆಗಾರರ ಜಾಗೃತಿ ಕಾರ್ಯಾಗಾರ ನಡೆಸಬೇಕು. ಹೊಸದುರ್ಗ ಹೊರತು ಉಳಿದ ಎಂವಿಎಸ್ ಕುರಿತು ಸಭೆ ಏರ್ಪಡಿಸುವಂತೆ ಸಚಿವರು ಜಿಪಂ ಸಿಇಒ ಡಾ.ಎಸ್. ಆಕಾಶ್‌ಗೆ ಸೂಚಿಸಿದರು.
ವಿಶೇಷ ಪ್ರಕರಣವೆಂದು ಪರಿಗಣಿಸಿ ಚಿತ್ರದುರ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಬೇಕಿದೆ ಎಂದು ಸಿಇಒ ಹೇಳಿದರು. ಈ ಕುರಿತು ವರದಿ ಕೊಡುವಂತೆ ಸಚಿವರು ಸೂಚಿಸಿದರು. ೨೦೩೧ರ ಜನಸಂಖ್ಯೆಗೆ ಅಂದಾಜಿಸಿದ್ದ ಚಿತ್ರದುರ್ಗಕ್ಕೆ ಕುಡಿವ ನೀರು ಪೂರೈಸುವ ಶಾಂತಿ ಸಾಗರ ನೀರಿನ ಪೂರೈಕೆಯಲ್ಲಿ ಕೊರತೆ ಆಗಿದೆ ಎಂದು ನಗರಸಭೆ ಆಯುಕ್ತೆ ಎಸ್.ಲಕ್ಷಿ÷್ಮÃ ತಿಳಿಸಿದರು.
ಈಗಲೇ ನೀರಿನ ಕೊರತೆ ನಗರವನ್ನು ಕಾಡಿದರೆ ಮುಂದಿನ ಎಂಟತ್ತು ತಿಂಗಳ ಪರಿಸ್ಥಿತಿ ಹೇಗಿರಲಿದೆ ಎಂದು ಪ್ರಶ್ನಿಸಿದ ಎಂಎಲ್‌ಸಿ ಕೆ.ಎಸ್. ನವೀನ್, ತಕ್ಷಣಕ್ಕೆ ಜಾನುವಾರಗಳಿಗೆ ಮೇವು ಖರೀದಿಸುವಂತೆ ಸಲಹೆ ನೀಡಿದರು. ಮೇವಿನ ಲಭ್ಯತೆ ಕುರಿತು ಮತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸುವಂತೆ ಸಚಿವರು ಸೂಚಿಸಿದರು.
ನಗರದ ಕವಾಡಿಗರ ಹಟ್ಟಿಯ ರಾ.ಹೆ.(ಲೋಕೋಪಯೋಗಿ)ಕಾಮಗಾರಿ ಪೂರ್ಣಗೊಳ್ಳದೆ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ಕಾಮಗಾರಿಗಳ ವಿಳಂಬದಿAದ ಜನರು ನಿತ್ಯಧೂಳು ಕುಡಿಯುವಂತಾಗಿದೆ. ಈ ಕುರಿತು ಕೇಳಿದರೆ ಪರಿಹಾರ ಕೊಟ್ಟಿದ್ದೇವೆ ಎಂದು ಅಽಕಾರಿ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದರು.
ಹೊಸದುರ್ಗ-ಕಡೂರು ಹೆದ್ದಾರಿ ಡಿವೈಡರ್ ಮತ್ತಿತರ ಕಾಮಗಾರಿಗಳು ಕಳಪೆಯಾಗಿವೆ ಎಂದು ಗೋವಿಂದಪ್ಪ ತಿಳಿಸಿದರು. ಸಂಬAಽಸಿದ ಅಽಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ನವೀನ್ ಅಭಿಪ್ರಾಯಪಟ್ಟರು. ಇದಕ್ಕೆ ಉತ್ತರಿಸಬೇಕಿದ್ದ ಅಽಕಾರಿ ಗೈರಾಗಿದ್ದರು.
ರಾಜ್ಯ ಸ-Áಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು, ರಾಜ್ಯ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ. ಯೋಗಿಶ್‌ಬಾಬು, ಜಿಲ್ಲಾ ಗ್ಯಾರಂಟಿ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ, ಕುಡಾ ಅಧ್ಯಕ್ಷ ತಾಜ್‌ಪೀರ್, ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಎಡಿಸಿ ಬಿ.ಟಿ. ಕುಮಾರಸ್ವಾಮಿ ಮತ್ತಿತರ ಅಽಕಾರಿಗಳು ಇದ್ದರು.