ಚಿತ್ರದುರ್ಗ ತಾಲೂಕು ಡಿಎಸ್‌ಹಳ್ಳಿಯಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆಗೆ ಸಭಾ ಭವನ ನಿರ್ಮಾಣಕ್ಕೆ ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಭೂಮಿ ಪೂಜೆ ನೆರವೇರಿಸಿದರು. ಬಿಇಒ ಗಿರಿಜಮ್ಮ, ದೇವರಾಜ್‌ರೆಡ್ಡಿ, ಧನಂಜಯರೆಡ್ಡಿ, ಡಾ.ಸಿ.ಎಲ್. ಶಿವಮೂರ್ತಿ, ವೆಂಕಟೇಶ ರೆಡ್ಡಿ ಇತರರು ಇದ್ದರು.
- ಶಿಕ್ಷಕರಿಗೆ ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಸಲಹೆ
- ಸ್ನೇಹ ಸಮ್ಮೇಳನ ಕರ‍್ಯಕ್ರಮ
- ದೊಡ್ಡಸಿದ್ದವನಹಳ್ಳಿ ಸರ್ಕಾರಿ ಪ್ರೌಢಶಾಲೆ
ಚಿತ್ರದುರ್ಗ: ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸನ್ಮಾರ್ಗದಡೆಗೆ ಕರೆದೊಯ್ಯುವ ಕೆಲಸ ಶಿಕ್ಷಕರದ್ದಾಗಿದೆ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹೇಳಿದರು.
ಚಿತ್ರದುರ್ಗ ತಾಲೂಕು ದೊಡ್ಡಸಿದ್ದವನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಹಳೆ ವಿದ್ಯಾರ್ಥಿಗಳ ನೆರವಿನಿಂದ ಸಭಾಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಕ್ಕಳಿಗೆ ತಾಯಿ ಮೊದಲ ಶಿಕ್ಷಕಿ, ನಂತರದಲ್ಲಿ ಶಿಕ್ಷಕರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ಸಾಗುವುದನ್ನು ಹೇಳಿಕೊಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಆದ್ದರಿಂದ ಸರ್ಕಾರಿ ಶಾಲೆ ಎಂಬ ತಾತ್ಸಾರ ಬೇಡ. ಈ ಶಾಲೆಗೆ ೪ ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಶಿಕ್ಷಕ ಮಹಂತೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕೋರಿದರು.
ಬಿಇಒ ಗಿರಿಜಮ್ಮ, ಹಳೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ದೇವರಾಜ್‌ರೆಡ್ಡಿ, ಅಧ್ಯಕ್ಷ ಡಾ.ಸಿ.ಎಲ್. ಶಿವಮೂರ್ತಿ, ನಗರ ಹಾಗೂ ಗ್ರಾಮಾಂತರ ಯೋಜನೆ ಇಲಾಖೆ ನಿವೃತ್ತ ನಿರ್ದೇಶಕ ಧನಂಜಯರೆಡ್ಡಿ, ವೆಂಕಟೇಶ ರೆಡ್ಡಿ, ಮಹಡಿ ಶಿವಮೂರ್ತಿ, ಲಿಂಗಬಸಪ್ಪ, ತಿಪ್ಪೇಸ್ವಾಮಿ, ಗುರುಮೂರ್ತಿ, ಕೃಷ್ಣಮೂರ್ತಿ, ಶ್ರೀನಿವಾಸರೆಡ್ಡಿ, ಬಾಬುರೆಡ್ಡಿ, ವರಲಕ್ಷಿ÷್ಮÃ, ಮಲ್ಲಿಕಾರ್ಜುನ್, ಸುರೇಶರೆಡ್ಡಿ ಇತರರು ಇದ್ದರು.