ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಆಯೋಜಿಸಿದ್ದ ಅಬಕಾರಿ ಪೊಲೀಸ್ ಪೇದೆಗಳ ಬುನಾದಿ ತರಬೇತಿಗೆ ಪೊಲೀಸ್ ಉಪ ಮಹಾ ನಿರ್ದೇಶಕ (ತರಬೇತಿ) ಡಿ. ದೇವರಾಜ್ ಚಾಲನೆ ನೀಡಿದರು. ಪಿ. ಪಾಪಣ್ಣ, ಡಾ.ಡಿ. ಮಾದೇಶ್, ಶೈಲಜಾ ಕೋಟೆ, ಕೆ. ಆಶಾಲತಾ ಇತರರು ಇದ್ದರು. Excise
- ಡಿಐಜಿ ಡಿ. ದೇವರಾಜ್ ಹೇಳಿಕೆ
- ಅಬಕಾರಿ ಪೊಲೀಸ್ ಪೇದೆಗಳಿಗೆ ಬುನಾದಿ ತರಬೇತಿ
ಐಮಂಗಲ: ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯದೆ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಪೊಲೀಸ್ ಉಪ ಮಹಾ ನಿರೀಕ್ಷಕ (ತರಬೇತಿ) ಡಿ. ದೇವರಾಜ್ ಹೇಳಿದರು. Excise
ಗ್ರಾಮದ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಗುರುವಾರ ಒಂದನೇ ತಂಡದ ಅಬಕಾರಿ ಪೊಲೀಸ್ ಪೇದೆಗಳ ಬುನಾದಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಇಲಾಖೆಗೆ ಉತ್ತಮ ಹೆಸರು ತರಬೇಕು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮಾದಕ ವಸ್ತು ಸಾಗಣೆ ಹಾಗೂ ಮಾರಾಟ ಮಟ್ಟ ಹಾಕಬೇಕು. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಬೇಕು
ಎಂದು ಸಲಹೆ ನೀಡಿದರು. ತರಬೇತಿ ಅವದಿಯಲ್ಲಿ ದೇಹ ದಂಡಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಇಲ್ಲಿ ಸಿಗುವ ಅಮೂಲ್ಯ ಜ್ಞಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿಜಯನಗರದ ಉಪ ಅಬಕಾರಿ ಆಯುಕ್ತ ಡಾ.ಡಿ. ಮಾದೇಶ್ ಮಾತನಾಡಿ, ಅಬಕಾರಿ ಹಾಗೂ ಪೊಲೀಸ್ ಇಲಾಖೆ ಕಾನೂನುಗಳು ಒಂದೇ ಆಗಿವೆ. ಖಾಕಿಗೆ ಸಮಾಜದಲ್ಲಿ ಗೌರವವಿದೆ. ಅದಕ್ಕೆ ಚ್ಯುತಿ ಬಾರದಂತೆ ಕರ್ತವ್ಯ
ನಿರ್ವಹಿಸಬೇಕು ಎಂದು ತಿಳಿಸಿದರು.
ಉಪ ಮಹಾನಿರೀಕ್ಷಕ (ತರಬೇತಿ)ಡಿ. ದೇವರಾಜ್ ಅವರಿಗೆ ಆರ್‌ಪಿಐ ಎಸ್.ಬಿ. ವಿರುಪಾಕ್ಷ ಇವರ ನೇತೃತ್ವದಲ್ಲಿ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು. ಸವಿನೆನಪಿಗಾಗಿ ಅತಿಥಿಗಳು ಸಸಿ ನೆಟ್ಟು ನೀರರೆದರು.
ಪ್ರಾಚಾರ್ಯ ಪಿ. ಪಾಪಣ್ಣ, ಹೊಸಪೇಟೆ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ, ಚಿತ್ರದುರ್ಗದ ಉಪ ಅಬಕಾರಿ ಆಯುಕ್ತೆ ಕೆ. ಆಶಾಲತಾ, ಡಿವೈಎಸ್ಪಿ ಬಿ. ಪರಶುರಾಮ್, ಸಿಪಿಐಗಳಾದ ಎನ್.ಎಚ್. ಆಂಜನೇಯ, ಶಿವಕುಮಾರ್. ಡಿ.ಎಚ್.ವಿ. ಲೋಕೇಶ್, ಬಸವರಾಜ ಎಂ.ಕೆ., ಆರ್‌ಎಸ್‌ಐ ಶರಣಬಸವ, ಎಆರ್‌ಎಸ್‌ಐ ಕೆ. ಸುದರ್ಶನ್ ರೆಡ್ಡಿ, ಸೊಂಡೆಕೋಳ ಟಿ. ನಾಗರಾಜು, ಹೊರಾಂಗಣ ಬೋಧಕರು, ಪ್ರಶಿಕ್ಷಣಾರ್ಥಿಗಳು ಇದ್ದರು.