ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ದಿನಾಚರಣೆಯನ್ನು ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗ ಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಉದ್ಘಾಟಿಸಿದರು. ಬಿ.ಪಿ. ಪ್ರೇಮನಾಥ್, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಎಸ್.ಕೆ.ನಾಗೇಂದ್ರ, ಜೆ. ವೈಶಾಲಿ, ಅಧ್ಯಕ್ಷ ಆರ್. ಮಂಜುನಾಥ, ಕೆ. ಮಲ್ಲೇಶಪ್ಪ, ಎಂ.ಕೆ. ರವೀಂದ್ರ ಇತರರು ಇದ್ದರು. 
ಚಿತ್ರದುರ್ಗ

ಸಮಾಜಕ್ಕೆ ತಮ್ಮ ಅನುಭವ ಧಾರೆ ಎರೆಯಿರಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತರಿಗೆ ಜಿ.ಎಸ್.ಮಂಜುನಾಥ್ ಮನವಿ
  • ನಿವÊತ್ತ ನೌಕರರ ದಿನಾಚರಣೆ,ಸನ್ಮಾನ ಕರ‍್ಯಕ್ರಮ
  • ಸಾಮಾಜಿಕ ಸೇವಾ ಚಟುವಟಿಕೆ
ಚಿತ್ರದುರ್ಗ: ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮ ಅನುಭವ ಧಾರೆ ಎರೆಯುವಂತೆ ಸರ್ಕಾರಿ ನಿವೃತ್ತ ನೌಕರರಿಗೆ ರಾಜ್ಯ ಆದಿಜಾಂಬವ ಅಭಿವÊದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮನವಿ ಮಾಡಿದರು.
ರಾಜ್ಯಸರ್ಕಾರಿ ನಿವÊತ್ತ ನೌಕರರ ಸಂಘದ ಜಿಲ್ಲಾ ಘಟಕ ಶನಿವಾರ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನಿವÊತ್ತ ನೌಕರರ ದಿನಾಚರಣÉ, ಪೌರ ಕಾರ್ಮಿಕರು, ಸಂಘದ ಸದಸ್ಯರು, ಸಾಧಕರಿಗೆ ಸನ್ಮಾನ ಹಾಗೂ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಕೆಲಸದಿಂದ ನಿವೃತ್ತಿ ಪಡೆದಿರಬಹುದು, ಆದರೆ, ಸಮಾಜದ ಕೆಲಸಕ್ಕೆ ಯಾವತ್ತೂ ನಿವÊತ್ತಿ ಎಂಬುದಿಲ್ಲ. ನಿಮ್ಮ ಅನುಭ ವನ್ನು ಯುವ ನೌಕರರಿಗೆ ಧಾರೆ ಎರೆಯಬೇಕು. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಸಮಾಜಕ್ಕೆ ನಿವೃತ್ತ ನೌಕರರ ಮಾರ್ಗದರ್ಶನ ಅಗತ್ಯವಿದೆ. ನಿವÊತ್ತಿ ನಂತರದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಪರಿಹರಿಸುವುದಾಗಿ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಪ್ರೇಮನಾಥ್ ಮಾತನಾಡಿ, ಸಂಘಕ್ಕೆ ನಗರದಲ್ಲಿ ನಿವೇಶನ ಮಂಜೂರು ಮಾಡುವಂತೆ ಎಡಿಸಿಗೆ ಮನವಿ ಮಾಡಿದರು.
ನಿವÊತ್ತ ಪ್ರಾಚಾರ್ಯ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿದರು. ಕ.ರಾ.ಸ.ನಿ. ನೌಕರರ ಕೇಂದ್ರ ಸಂಘದ ಜಂಟಿ ಕಾ ರ್ಯದರ್ಶಿ ಎಸ್.ಕೆ. ನಾಗೇಂದ್ರ, ಜಿಲ್ಲಾ ಅಂಗವಿಕಲರ ಕಲ್ಯಾಣÁಽಕಾರಿ ಜೆ. ವೈಶಾಲಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ, ಜಿಲ್ಲಾಧ್ಯಕ್ಷ ಕೆ. ಮಲ್ಲೇಶಪ್ಪ, ರೋಟರಿಯನ್ ಎಂ.ಕೆ. ರವೀಂದ್ರ, ನಿವೃತ್ತ ನೌಕರರ ಸಂಘದ ಸದಸ್ಯರು, ಪೌರಸೇವಾ ನೌಕರರನ್ನು ಸನ್ಮಾನಿಸಲಾಯಿತು.
ವೈ. ಚಂದ್ರಶೇಖರಯ್ಯ, ಟಿ.ಆರ್. ಮಂಜುನಾಥ್, ಎಂ. ಶಿವಾನಂದಪ್ಪ, ಬಿ. ಮಂಜುನಾಥ್, ಎ-ï. ಆರ್. ಹಾಲಗೇರಿ, ಎನ್.ಆರ್. ಬೈಯಣ್ಣ, ಟಿ. ತಿಮ್ಮಪ್ಪ ಇತರರು ಇದ್ದರು.
ಎನ್.ವೆಂಕಟಸ್ವಾಮಿ ಪ್ರಾರ್ಥಿಸಿದರು. ಟಿ. ತಿಮ್ಮಪ್ಪ ಸ್ವಾಗತಿಸಿ, ಜ್ಞಾನಮೂರ್ತಿ ವಂದಿಸಿದರು. ಮಂಜುನಾಥ್ ನಿರೂಪಿಸಿದರು.