ಜಿಲ್ಲಾಽಕಾರಿ ಟಿ. ವೆಂಕಟೇಶ್  
ಚಿತ್ರದುರ್ಗ

ಸ್ವಯಂ ಗಣತಿ ಪ್ರಕ್ರಿಯೆಗೆ ಸಹಕರಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ
ಚಿತ್ರದುರ್ಗ: ಭಾರತ ಜನಗಣತಿ-೨೦೨೭ರ ಅಂಗವಾಗಿ ಸಾರ್ವಜನಿಕರು ತಾವಾಗಿಯೇ ಮಾಹಿತಿ ನೀಡುವ ಸ್ವಯಂ ಗಣತಿ ಪ್ರಕ್ರಿಯೆ ಏಪ್ರಿಲ್ ೧ರಿಂದ ಆರಂಭವಾಗಲಿದೆ ಎಂದು ಜಿಲ್ಲಾಽಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಸಾರ್ವಜನಿಕರು ಏಪ್ರಿಲ್ ೧ರಿಂದ ೧೫ರವರೆಗೆ ಇಲಾಖೆ ವೆಬ್‌ಸೈಟ್ www.se.census.gov.inರಲ್ಲಿ ತಮ್ಮ ಕುಟುಂಬದ ವಿವರಗಳನ್ನು ಭರ್ತಿ ಮಾಡಬಹುದು.
ಮಾಹಿತಿ ಸಲ್ಲಿಸಿದ ನಂತರ ಲಭ್ಯವಾಗುವ ರೆ-Àರೆನ್ಸ್ ಐಡಿಯನ್ನು ಸಾರ್ವಜನಿಕರು ಸುರಕ್ಷಿತವಾಗಿಟ್ಟುಕೊಳ್ಳಬೇಕು. ೧೬ ರಿಂದ ಮೇ ೧೫ರವರೆಗೆ ನಿಗದಿ ಪಡಿಸಿದ ಕ್ಷೇತ್ರ ಮಾಹಿತಿ ಸಂಗ್ರಹಣೆ ಸಮಯದಲ್ಲಿ, ಮೌಲ್ಯೀಕರಣಕ್ಕಾಗಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ರೆ-Àರೆನ್ಸ್ ಐಡಿ ನೀಡಿ ಗಣತಿ ಕಾರ್ಯಕ್ಕೆ ಸಹಕರಿಸುವಂತೆ ಡಿಸಿ ಕೋರಿದ್ದಾರೆ.