ರಾಜ್ಯಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಭೋವಿ ಸಮುದಾಯದ ನಿರುದ್ಯೋಗ ಯುವಕ, ಯುವತಿಯರಿಗೆ ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಟೈಲರಿಂಗ್ ಉಚಿತ ತರಬೇತಿ ಹಾಗೂ ಯಂತ್ರೋಪಕರಣ ವಿತರಣೆ ಕಾರ್ಯಕ್ರಮಕ್ಕೆ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಚಾಲನೆ ನೀಡಿದರು. ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಚಂದ್ರನಾಯ್ಕ್, ಆರ್. ಶಿವಣ್ಣ, ಎಂ.ಕೆ. ತಾಜ್‌ಪೀರ್, ವೈ. ರವಿಕುಮಾರ್, ತಿಪ್ಪೇಸ್ವಾಮಿ ಇತರರು ಇದ್ದರು.  
ಚಿತ್ರದುರ್ಗ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸ್ವಯಂ ಉದ್ಯೋಗ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ. ರಾಮಪ್ಪ ಅಭಿಮತ
  • ಟೈಲರಿಂಗ್ ತರಬೇತಿ, ಯಂತ್ರೋಕರಣ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
  • ತರಬೇತಿಯನ್ನು ಗಂಭೀರವಾಗಿ ಪರಿಗಣಿಸಿ
ಚಿತ್ರದುರ್ಗ: ಸ್ವಯಂ ಉದ್ಯೋಗದಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ರಾಮಪ್ಪ ಹೇಳಿದರು.
ನಿಗಮದಿಂದ ಪರಿಶಿಷ್ಟ ಜಾತಿ ಭೋವಿ ಸಮುದಾಯದ ನಿರುದ್ಯೋಗಿ ಯುವಕ, ಯುವತಿಯರಿಗೆ ನಗರದ ಮದರ್ ತೆರೆಸಾ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಟೈಲರಿಂಗ್ ಉಚಿತ ತರಬೇತಿ ಹಾಗೂ ಯಂತ್ರೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದರು.
ತರಬೇತಿಯನ್ನು ಗಂಭೀರವಾಗಿ ಪರಿಗಣಿಸಿ, ಕಟ್ಟುನಿಟ್ಟಾಗಿ ಭಾಗವಹಿಸಬೇಕು. ಟೈಲರಿಂಗ್ ಮಹಿಳೆಯರಿಗೇ ಅಲ್ಲ,ಪುರುಷರಿಗೂ ಅಗತ್ಯವಿದೆ. ಮನೆಕೆಲಸದ ಜತೆಗೆ ಟೈಲರಿಂಗ್‌ನಿAದ ತಿಂಗಳಿಗೆ ಅಂದಾಜು ೨೦ ಸಾವಿರ ರೂ. ಆದಾಯಗಳಿಸಬಹುದು.
ದಶಮಾನೋತ್ಸವದ ಸಂಭ್ರ ಮದಲ್ಲಿರುವ ನಿಗಮದಿಂದ ಹಸು ಸಾಕಾಣಿಕೆ ಸಾಲ, ೧ಲಕ್ಷ ರೂ.ನೇರ ಸಾಲ, ಗಂಗಾ ಕಲ್ಯಾಣ ಯೋಜನೆ,ಸಾರಥಿ ವಾಹನ ಸೌಲಭ್ಯ ಸಾಲ ಹಾಗೂ ಮಹಿಳಾ ಸಂಘಗಳಿಗೆ ೫ ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಟೈಲರಿಂಗ್ ತರಬೇತಿಯೊಂದಿಗೆ ಹಸು, ಕುರಿ ಸಾಕಲು ಧನ ಸಹಾಯ ಪಡೆದ ಮಹಿಳೆಯರು ಮತ್ತು ವಿದ್ಯಾವಂತ ಯುವತಿಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ನಮ್ಮ ಸಮುದಾಯದವರು ನಾಲ್ಕು ಜನರಿಗೆ ಕೆಲಸ ನೀಡುವ ಮಟ್ಟಿಗೆ ಬೆಳೆಯಬೇಕೆಂದು ರಾಮಪ್ಪ ಹೇಳಿದರು.
ತರಬೇತಿ ಪ್ರಮಾಣಪತ್ರ ಉದ್ಯೋಗ ಭದ್ರತೆ ಒದಗಿಸಲಿದೆ. ಒಂದು ವೇಳೆ ಉದ್ಯೋಗ ದೊರೆಯದಿದ್ದರೂ ಸ್ವಯಂ ಉದ್ಯೋಗಕ್ಕೆ ನೆರವಾಗಲಿದೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಭೋವಿ ಅಭಿವೃದ್ಧಿ ನಿಗಮದಿಂದ ಯುವಕ-ಯುವತಿಯರ ಆರ್ಥಿಕ ಸಬಲೀಕರಣಕ್ಕೆ ಅನೇಕ ಯೋಜನೆಗಳು ಮತ್ತು ಸಹಾಯಧನ ಲಭ್ಯವಿದೆ.
ಪ್ರತಿ ಜಿಲ್ಲೆಯಲ್ಲೂ ಮಹಿಳೆಯರು ಈ ರೀತಿ ಜಾಗೃತರಾಗಿ ತರಬೇತಿ ಪಡೆದರೆ, ಭೋವಿ ಸಮುದಾಯ ಆರ್ಥಿಕವಾಗಿ ಶಕ್ತಿಯುತವಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ತರಬೇತಿಗೆ ಬಯೋಮೆಟ್ರಿಕ್ ಹಾಜರಾತಿ ಹಾಗೂ ಸಹಿ ಕಡ್ಡಾಯ. ನಿತ್ಯದ ಹಾಜರಾತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಹಾಜರಾತಿಯಲ್ಲಿ ಯಾವುದೇ ರೀತಿಯ ಪ್ರಭಾವ ಅಥವಾ ರಿಯಾಯಿತಿಗಳಿಗೆ ಅವಕಾಶವಿಲ್ಲ. ತರಬೇತಿ ಅವಽ ಯಲ್ಲಿ ನಾನು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇನೆ.
ಯಾರಾದರೂ ಗೈರಾಗಿದ್ದರೆ ಅವರ ಹೆಸರನ್ನು ತಕ್ಷಣ ಡಿಲೀಟ್ ಮಾಡಲಾಗುವುದು ಮತ್ತು ಅವರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುವುದಿಲ್ಲ. ಕೇವಲ ಅನಿರೀಕ್ಷಿತ, ತುರ್ತು ಕೌಟುಂಬಿಕ ಸಮಸ್ಯೆಗಳಿದ್ದರೆ ಮುಂಚಿತವಾಗಿ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ ರಿಯಾಯಿತಿ ಪಡೆಯಬಹುದು ಎಂದು ರಾಮಪ್ಪ ತಿಳಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರನಾಯ್ಕ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾನ ಹಕ್ಕು, ಪ್ರಾತಿನಿಧ್ಯ ಪಡೆದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಬೇಕು ಎನ್ನುವುದೇ ನಿಗಮದ ಮುಖ್ಯಉದ್ದೇಶ. ೭೫ ದಿನಗಳ ತರಬೇತಿ ಮುಗಿದ ನಂತರ ಎಲ್ಲರಿಗೂ ಕಡ್ಡಾಯವಾಗಿ ಗಾರ್ಮೆಂಟ್ಸ್ -Á್ಯಕ್ಟರಿಗಳಲ್ಲಿ ಕೆಲಸ ಸಿಗುವ ಆದೇಶ ದೊಂದಿಗೆ ಪವರ್‌ಮಷಿನ್‌ಗಳನ್ನು ವಿತರಿಸಲಾಗುವುದು. ಈಗಾಗಲೇ ಮೈಸೂರಿನಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿದರು. ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ. ರವಿಕುಮಾರ್, ಭೋವಿ ಸಮಾಜದ ಮುಖಂಡ ತಿಪ್ಪೇಸ್ವಾಮಿ ಇತರರು ಇದ್ದರು.
ನಿಗಮದ ಯೋಜನೆಗಳು ಪೂರಕ
ಭೋವಿ ಸಮುದಾಯದ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ನಿಗಮದ ಯೋಜನೆಗಳು ಪೂರಕವಾಗಿವೆ ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಐಟಿಬಿಟಿ ವಲಯದಲ್ಲಿ ವರ್ಕ್ -À್ರಮ್ ಹೋಮ್ ಇರುವಂತೆ ಯುವಕ, ಯುವತಿಯರು ಮನೆಯಲ್ಲೇ ಇದ್ದು ಟೈಲರಿಂಗ್ ಅಥವಾ ಅಂಗಡಿಮುAಗಟ್ಟು ಪ್ರಾರಂಭಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತರಬೇತಿ ನೆರವಾಗಲಿದೆ.
ರಾಮಪ್ಪ ಅವರು ನಿಗಮದ ಅಧ್ಯಕ್ಷರಾಗಿ ಅಽಕಾರ ವಹಿಸಿಕೊಂಡ ೬ ತಿಂಗಳಲ್ಲಿ ವಿಶೇಷ ಯೋಜನೆಗಳನ್ನು ಅನುಷ್ಠಾನ ಗೊಳಿಸು ತ್ತಿದ್ದಾರೆ. ಆರ್ಥಿಕ ಸಬಲೀಕರಣದ ಮೂಲಕ ಪ್ರಬುದ್ಧ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಅವರ ಯೋಜನೆಗಳು ಶ್ಲಾಘನೀಯವಾಗಿವೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.