ಬ್ಯಾಂಕ್ ಠೇವಣಿಗಳ ಇತ್ಯರ್ಥಕ್ಕಾಗಿ ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಶಿಬಿರಕ್ಕೆ ಜಿಪಂ ಸಿಇಒ ಡಾ.ಎಸ್. ಆಕಾಶ್ ಚಾಲನೆ ನೀಡಿದರು. ಆರ್‌ಬಿಐ ಮುಖ್ಯ ಪ್ರಬಂಧಕಿ ಮೀನಾಕ್ಷಿ ಗುಂಜು, ಎಂ. ರಾಘವೇಂದ್ರ, ಜಯಲಕ್ಷಿ÷್ಮÃ, ಜಗನ್ನಾಥ, ಅನಿತಾ ಇತರರು ಇ ದ್ದರು. 
ಚಿತ್ರದುರ್ಗ

ಠೇವಣಿಗಳ ಇತ್ಯರ್ಥಕ್ಕೆ ಸ್ವಸಹಾಯ ಗುಂಪುಗಳ ನೆರವು ಪಡೆಯಿರಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್ ಅಽಕಾರಿಗಳಿಗೆ ಸಿಇಒ ಸೂಚನೆ
  • ಚಿತ್ರದುರ್ಗದಲ್ಲಿ ವಿಶೇಷ ಶಿಬಿರಕ್ಕೆ ಚಾಲನೆ
  • ನಿಷ್ಕಿçಯ ಖಾತೆಗಳಲ್ಲಿದೆ ೬೭ ಕೋಟಿ ರೂ.
ಚಿತ್ರದುರ್ಗ: ದೀರ್ಘಕಾಲದವರೆಗೆ ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿ, ವಿಮಾ ಕಂತು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ನೆರವು ಪಡೆಯುವಂತೆ ಜಿಪಂ ಸಿಇಒ ಡಾ.ಎಸ್. ಆಕಾಶ್ ಬ್ಯಾಂಕ್‌ಅಽಕಾರಿಗಳಿಗೆ ಸೂಚಿಸಿದರು.
ಜಿಪಂನಲ್ಲಿ ಶುಕ್ರವಾರ ಹಕ್ಕು ಪಡೆಯದ ಬ್ಯಾಂಕ್ ಠೇವಣಿಗಳ ಇತ್ಯರ್ಥಕ್ಕಾಗಿ ಆಯೋಜಿಸಿದ್ದ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕುವಾರು ಬ್ಯಾಂಕಿನ ಪ್ರತಿ ಶಾಖೆಯಲ್ಲಿ ದೀರ್ಘಕಾಲದವರೆಗೆ ಹಕ್ಕು ಪಡೆಯದೇ ಉಳಿದಿರುವ ಠೇವಣಿಗಳ ವಾರಸುದಾರರ ಮಾಹಿತಿಯೊಂದಿಗೆ ಬ್ಯಾಂಕ್ ಅಽಕಾರಿಗಳು ಗ್ರಾಪಂ, ಸ್ವಸಹಾಯ ಗುಂಪುಗಳ ಸದಸ್ಯರ ಸಹಕಾರ ಪಡೆದು, ವಾರಸುದಾರರನ್ನು ಗುರುತಿಸಿ, ಠೇವಣಿ ಮೊತ್ತ ತಲುಪಿಸಬೇಕು. ಈ ಸಂಬAಧ ತಾಪಂ ಇಒಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳೂ ಸೇರಿ ೩.೦೮ ಲಕ್ಷಕ್ಕೂ ಹೆಚ್ಚು ಹಕ್ಕು ಪಡೆಯದ ಠೇವಣಿ, ನಿಷ್ಕಿಯ ಖಾತೆಗಳಿಂದ ೬೭ ಕೋಟಿ ರೂ. ಸಂಗ್ರಹವಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಒಂದರಲ್ಲೇ ೧.೪೦ ಲಕ್ಷಕ್ಕೂ ಹೆಚ್ಚು ನಿಷ್ಕಿçಯ ಖಾತೆಗಳಿಂದ ೨೩ ಕೋಟಿ ರೂ.ಇದೆ. ಸಂಬAಽಸಿದ ಶಾಖೆ ವ್ಯವಸ್ಥಾಪಕರ ಪ್ರಗತಿ ಪರಿಶೀಲಿಸಿ ಖಾತೆ ಮುಕ್ತಾಯ ಅಥವಾ ಸಕ್ರಿಯಗೊಳಿಸಬೇಕು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೆಚ್ಚಿನ ನಾಗರಿಕರ ನೋಂದಣಿಗೆ ಕ್ರಮವಹಿಸಬೇಕು ಎಂದರು.
ಆರ್‌ಬಿಐನ ಮುಖ್ಯ ಪ್ರಬಂಧಕಿ ಮೀನಾಕ್ಷಿ ಗುಂಜು ಮಾತನಾಡಿ, ಬ್ಯಾಂಕಿನಲ್ಲಿ ಹೊಸ ಖಾತೆಗಳನ್ನು ತೆರೆಯುವಾಗ ಹೊಸ ನಾಮಿನೇಷನ್ ನಿಯಮಾವಳಿಗಳನ್ನು ಅನುಸರಿಸಬೇಕು ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇAದ್ರ ಮಾತನಾಡಿ, ಈ ಶಿಬಿರ ಸಂಬAಽಸಿದ ಬ್ಯಾಂಕ್, ಕಚೇರಿ ಶಾಖೆಗಳಲ್ಲಿ ಡಿಸೆಂಬರ್ ೩೧ರವರೆಗೆ ಮುಂದುವರಿಲಿದೆ ಎಂದರು.
ಇದೇ ಸಂದರ್ಭದಲ್ಲಿ ನಿಷ್ಕಿçಯಗೊಂಡಿದ್ದ ಬ್ಯಾಂಕ್ ಖಾತೆದಾರರಿಗೆ ಖಾತೆ ಸಕ್ರಿಯಗೊಳಿಸಿದ ಪತ್ರಗಳನ್ನು ವಿತರಿಸಲಾಯಿತು. ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನ್ನಾಥ, ಕೆನರಾಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕಿ ಅನಿತಾ ಇತರರು ಇದ್ದರು.