ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನ್ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಬೆಂಬಲಿಗರು ಗದ್ದಲ ಸೃಷ್ಟಿಸಿದರು. 
ಚಿತ್ರದುರ್ಗ

ಗದ್ದಲದ ಗೂಡಾದ ಸಂಘಟನ್ ಸೃಜನ್ ಅಭಿಯಾನ್

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಸ್ಥಾನ ಶಿ-Áರಸ್ಸಿಗೆ ಬೆಂಬಲಿಗರ ಒತ್ತಾಯ
  • ಸೂಕ್ಷ÷್ಮವಾಗಿ ಗಮನಿಸಿದ ವೀಕ್ಷಕರು
  • ಸಂಘಟನ್ ಸೃಜನ್ ಅಭಿಯಾನ್ ಸಭೆ

ಚಿತ್ರದುರ್ಗ:

ಜಿಲ್ಲೆಯಲ್ಲಿ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಆಯ್ಕೆ ಸಂಬAಧ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸಂಘಟನ್ ಸೃಜನ್ ಅಭಿಯಾನ್ ಸಭೆಯಲ್ಲಿ ಗದ್ದಲ ಸೃಷ್ಟಿಯಾಗಿ, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೆಲ ಆಕಾಂಕ್ಷಿಗಳ ಬೆಂಬಲಿಗರು ಘೋಷಣೆ ಕೂಗಲಾರಂಭಿಸಿದ್ದು ಗದ್ದಲಕ್ಕೆ ತಿರುಗಿ ಕಾಂಗ್ರೆಸ್ ವೀಕ್ಷರೊಟ್ಟಿಗೆ ಮಾತಿನ ಜಟಾಪಟಿಗೂ ಕಾರಣವಾಯಿತು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಿ.ಟಿ. ಜಗದೀಶ್ ಸಭೆಗೆ ಬಂದಾಗ ಬೆಂಬಲಿಗರು ಜೈಕಾರ ಹಾಕಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಎಸ್‌ಬಿಎಲï ಮಲ್ಲಿಕಾರ್ಜುನ್ ಕೂಡ ಅಧ್ಯಕ್ಷ ಸ್ಥಾನ ನೀಡಬೇಕೆಂದು ಅವರ ಪರ ಏರು ಧ್ವನಿಯಲ್ಲಿ ಕೂಗಿ ವೀಕ್ಷಕರ ಎದುರು ಭಾವ ಚಿತ್ರ ಪ್ರದರ್ಶಿಸಿದರು. ಇದೇ ವೇಳೆ ಜೊತೆಯಲ್ಲಿದ್ದ ಬೆಂಬಲಿಗರು ನಾಯಕರತ್ತ ನುಗ್ಗಿದ್ದರಿಂದ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಸಭೆ ಗದ್ದಲದಲ್ಲಿ ಮುಳುಗಿತು.
ಜಿ¯್ಲÁ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ನಗರಸಭೆ ಮಾಜಿ ಅಧ್ಯಕ್ಷ ಎಚ್. ಮಂಜಪ್ಪ ವೇದಿಕೆ ಹತ್ತಿ ಜಗದೀಶ್ ಪರ ಘೋಷ ಣೆ ಕೂಗಿದರು. ಆಗ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಶಿಸ್ತಿಲ್ಲದ ನಿಮ್ಮ ನಡೆ ಸಹಿಸುವುದಿಲ್ಲ. ಬಿಜೆಪಿ ಬೆಂಬಲಿಗರAತೆ ಕಾಣು ತ್ತೀರಿ ಎಂದಾಗ ಪರಸ್ಪರ ಹರಿಹಾಯ್ದರು. ನಿಮ್ಮ ಗೊಡ್ಡು ಬೆದರಿಕೆಗೆಲ್ಲ ಜಗಲ್ಲ. ಸಭೆಯಿಂದ ಹೊರ ನಡೆಯಿರಿ ಎಂದು ಉಗ್ರಪ್ಪ ಗದರಿದರು.

ಜಿ¯್ಲÁಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ೬೦ ಜನರ ಹೆಸರನ್ನು ಸೌಗಂಽಕಾ ರಘು ನಾಥ್ ಓದಿ, ಇದರಲ್ಲಿ ಒಬ್ಬರ ಹೆಸರನ್ನು ಮಾತ್ರ ಹೈಕಮಾಂಡ್‌ಗೆ ಶಿ-Áರಸು ಮಾಡುವುದಾಗಿ ತಿಳಿಸಿದಾಗ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲೆಯ ಆರೂ ತಾಲೂಕುಗಳಲ್ಲಿ ಸಭೆ ನಡೆಸಿದಾಗ ಆರು ಜನರ ಹೆಸರನ್ನು ಆಯ್ಕೆ ಮಾಡಿ ಪಕ್ಷದ ವರಿಷ್ಠರಿಗೆ ಕಳುಹಿಸುವುದಾಗಿ ತಿಳಿಸಿದ್ದು, ಈಗ ತಾರತಮ್ಯವೇಕೆ ಎಂದು ಕೆಲ ಆಕಾಂಕ್ಷಿಗಳು ಪ್ರಶ್ನಿಸಿದಾಗ ಸಭೆ ಮತ್ತೆ ಗೊಂದಲ ಎದುರಿಸಬೇಕಾಯಿತು. ಕೊನೆ ಗೆ ಜಿ¯್ಲÁಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಶಿಸ್ತಿಲ್ಲದೆ ವರ್ತಿಸುವವರಿಗೆ ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಗ್ರಪ್ಪ ಕ್ಷಮೆಯಾಚಿಸುವಂತೆ ಜಗದೀಶ್ ಬೆಂಬಲಿಗರು ಒತ್ತಾಯಿಸಿದರು. ಒಟ್ಟಾರೆ ಸಭೆ ಆರಂಭದಿAದ ಕೊನೆವರೆಗೂ ಗದ್ದಲದಲ್ಲಿಯೇ ನಡೆಯಿತು.
*ಮೂವರ ವಿರುದ್ಧ ನೋಟಿಸ್ ಜಾರಿ

ಎಪಿಸಿಸಿ ಮಾಜಿ ಅಧ್ಯಕ್ಷ, ವೀಕ್ಷಕ ರಿಪುನ್ ಬೊರಾ, ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಅಹಮದ್, ಮಾಜಿ ಶಾಸಕ ಎ.ವಿ. ಉಮಾಪತಿ, ಪದಾಽಕಾರಿಗಳಾದ ಕೆ.ಎಂ. ಹಾಲಸ್ವಾಮಿ, ಕೆ.ಪಿ. ಸಂಪತ್‌ಕುಮಾರ್, ಡಿ.ಎನ್. ಮೈಲಾರಪ್ಪ, ಯು. ಲಕ್ಷಿ÷್ಮÃಕಾಂತ್, ಆರ್. ಪ್ರಕಾಶ್ ಇತರರಿದ್ದರು.

ಪಕ್ಷ ನಿಷ್ಠರಿಗೆ ಮನ್ನಣೆ

ಕೋಮುವಾದಿ, ಸಂವಿಧಾನ ವಿರೋಽ ಬಿಜೆಪಿಯನ್ನು ೨೦೨೮ರ ವಿಧಾನಸಭೆ, ೨೦೨೯ರ ಲೋಕಸಭೆ ಚುನಾವಣೆಯಲ್ಲಿ ಸಮರ್ಥ ವಾಗಿ ಎದುರಿಸುವ, ಪಕ್ಷ ನಿಷ್ಠರ ಹೆಸರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಚಿಸಿ ಎಐಸಿಸಿ, ಕೆಪಿಸಿಸಿಗೆ ಕಳುಹಿಸುವುದಾಗಿ ರಿಪುನ್ ಬೊರಾ ತಿಳಿಸಿದರು. ನೈಜ ಕಾರ್ಯಕರ್ತರು, ಪದಾಽಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ನಂತರವೇ ಆಕಾಂಕ್ಷಿಗಳ ಹೆಸರನ್ನು ರವಾನಿಸಲಾಗುವುದು. ಶಿಸ್ತಿನಿಂದ ವರ್ತಿಸಿದರೆ, ಸೂಕ್ತ ಸ್ಥಾನಮಾನ ಸಿಗಲಿದೆ. ಅಲ್ಲಿಯವರೆಗೂ ಕಾಯಬೇಕೆಂದು ಸಲಹೆ ನೀಡಿದರು.

ರಾಹುಲ್ ಪಿಎಂ ಆಗಿಸಲು ಶ್ರಮಿಸೋಣ

ಜಿ¯್ಲೆಯ ಆರೂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಗೆಲ್ಲಬೇಕು. ರಾಜ್ಯದಲ್ಲಿ ಮತ್ತೆ ಅಽಕಾರಕ್ಕೆ ಬರಬೇಕು. ಲೋಕಸಭಾ ಎಲೆಕ್ಷನ್ ಕೂಡ ಬಹುಮತ ಸಾಽಸಿ ರಾಹುಲï ಗಾಂಽ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಕಾರ್ಯಕರ್ತರೆಲ್ಲ ಶ್ರಮಿಸೋಣ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್‌ಕುಮಾರ್ ಹೇಳಿದರು. ಅನಿಸಿಕೆ ತಿಳಿಸಲು ಎಲ್ಲರಿಗೂ ಅವಕಾಶವಿದೆ. ಜಿ¯್ಲÁಧ್ಯಕ್ಷ ಸ್ಥಾನಾಕಾಂಕ್ಷಿಗಳ ನೇಮಕ ಸಂಬAಧ ಪ್ರತಿಯೊಬ್ಬರ ಅಭಿಪ್ರಾಯ ಪಡೆದು ವರಿಷ್ಠರಿಗೆ ಕಳಿಸುತ್ತೇವೆ ಎಂದರು.
"

ಶಿಸ್ತಿಲ್ಲದಿದ್ದರೆ, ಪಕ್ಷ ಬೆಳೆಸಲು ಆಗದು. ಗೊಂದಲದಿAದ ಅರ್ಹರಿಗೆ ತೊಂದರೆಯಾಗಲಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಎದುರಿಸಬೇಕಿದೆ. ಹೀಗಾಗಿ ಹೈಕಮಾಂಡ್ ಸೂಕ್ತರನ್ನು ಜಿ¯್ಲÁಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಿದೆ.

— | ವಿ.ಎಸ್. ಉಗ್ರಪ್ಪ, ಮಾಜಿ ಸಂಸದ