ಚಿತ್ರದುರ್ಗದಲ್ಲಿರುವ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ ನಿವಾಸ ನವೀಕರಣ ಕಾಮಗಾರಿಯನ್ನು ಮಂಗಳವಾರ ಜಿಲ್ಲಾಽಕಾರಿ ಟಿ.ವೆಂಕಟೇಶ್ ಪರಿಶೀಲಿಸಿದರು. ನಿರ್ಮಿತಿಕೇಂದ್ರದ ಯೋಜನಾ ನಿರ್ದೇಶಕ ಹರೀಶ್‌ಕುಮಾರ್, ಎಇ ರವಿ ಇತರರು ಇದ್ದರು. 
ಚಿತ್ರದುರ್ಗ

ಎಸ್.ನಿಜಲಿಂಗಪ್ಪÀ ನಿವಾಸ`ವಿನಯ'ಕ್ಕೆ ಪಾರಂಪರಿಕ ರೂಪ

ಪ್ರಮುಖ ಮುಖ್ಯಾಂಶಗಳು

  • ೧.೨೦ ಕೋಟಿ ರೂ.ವೆಚ್ಚದಲ್ಲಿ ನವೀಕರಣ
  • ಜಿಲ್ಲಾಽಕಾರಿ ಟಿ.ವೆಂಕಟೇಶ್ ಹೇಳಿಕೆ
  • ಕಾಮಗಾರಿ ಪರಿಶೀಲನೆ
ಚಿತ್ರದುರ್ಗ: ನಗರದ ವಿಪಿ ಬಡಾವಣೆಯಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರು ವಾಸವಿ ದ್ದ ನಿವಾಸ`ವಿನಯ'ನವೀಕರಣ ಕಾಮಗಾರಿಯನ್ನು ಜಿಲ್ಲಾಽಕಾರಿ ಟಿ.ವೆಂಕಟೇಶ್ ಮಂಗಳವಾರ ಪರಿಶೀಲಿಸಿದರು. ಕಾಮಗಾರಿ ಪರಿಶೀಲನೆ ಬಳಿಕ ಸುದ್ದಿಗಾರರೊ ಂದಿಗೆ ಮಾತನಾಡಿದ ಅವರು, ಪಾರಂಪರಿಕ ಸ್ಪರ್ಶದೊಂದಿಗೆ ೧.೨೦ ಕೋಟಿ ರೂ.ವೆಚ್ಚದಲ್ಲಿ ಮೂಲರೂಪಕ್ಕೆ ಧಕ್ಕೆ ಬಾರದಂತೆ ನಿವಾಸದ ನವೀಕರಿಸಲಾಗುತ್ತಿದೆ ಎಂದರು.
ನಿಜಲಿAಗಪ್ಪ ಅವರು ವಾಸವಿದ್ದ ಈ ನಿವಾಸವನ್ನು ಸರ್ಕಾರ ಈಗಾಗಲೇ ಖರೀದಿಸಿದೆ. ಕಟ್ಟಡದ ನವೀಕರಣ ಕಾಮಗಾರಿ ಪೂರ್ಣ ಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುವುದು. ಈ ವಿಚಾರದಲ್ಲಿ ನಿಜಲಿಂಗಪ್ಪ ಅವರ ವಂಶಸ್ಥರು ಸಹಕ ರಿಸಿದ್ದಾರೆ. ಈ ಮನೆ ಪಾರಂಪರಿಕ ಕಟ್ಟಡವಾಗಿದ್ದು,ಮೂಲ ರೂಪದಲ್ಲಿ ಯಾವುದೇ ಬದಲಾವಣೆ ಮಾಡದೆ ನವೀಕರಣ ಕಾರ‍್ಯ ನಡೆ ದಿದೆ.
ಯೋಜನೆಗೆ ರಾಜ್ಯಪುರಾತತ್ವ ಇಲಾಖೆ ಸಹಕಾರ ಹಾಗೂ ತಾಂತ್ರಿಕ ಸಲಹೆ ಪಡೆಯಲಾಗಿದೆ. ನಿರ್ಮಿತಿ ಕೇಂದ್ರದಿAದ ಡಿಪಿಆರ್
ಸಿದ್ಧ ಪಡಿಸಿದ್ದು, ಕಾಮಗಾರಿ ಪ್ರಾರಂಭವಾಗಿದ್ದು,ಕಟ್ಟಡದ ರಿಪ್ಲಾಸ್ಟರಿಂಗ್, -ÉÆ್ಲÃರಿಂಗ್, ವಿದ್ಯುತ್ ಕಾಮಗಾರಿಗಳನ್ನು ನಡೆಸ ಲಾಗುವುದು.

ಕನ್ನಡ ಮತ್ತು ಸಂಸ್ಕ್ಪçತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈಚೆಗೆ ಈ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಇದರ ನವೀಕರ ಣಕ್ಕೆ ಸಲಹೆ,ಸೂಚನೆ ನೀಡಿದ್ದರು. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ೮೪ ಲಕ್ಷ ರೂ.ಅನುದಾನವೂ ಬಿ ಡುಗಡೆಯಾಗಿದೆ. ಹೆಚ್ಚುವರಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ಡಿಸಿ ಹೇಳಿದರು.
ಸುಣ್ಣ, ಬೆಲ್ಲ,ಅಲೋವೆರ ಮಿಶ್ರಣದಿಂದ ತಯಾರಿಸಿದ ಗಾರೆ ಹಾಗೂ ಮಣ್ಣನ್ನು ಬಳಸಿ ಮೂಲ ಕಟ್ಟಡವನ್ನು ನಿರ್ಮಿಸಲಾಗಿದೆ.ಇದೇ ಮಾದರಿ ಕಟ್ಟಡದ ಪುನರ್ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಕುರಿತು ಪುರಾತತ್ವ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ಅಽಕಾರಿಗಳು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕಾಗಿ ನಿಜಲಿಂಗಪ್ಪ ಅವರ ಪುತ್ರ ಎಸ್.ಎನ್.ಕಿರಣ್‌ ಶಂಕರ್ ಅವರನ್ನು ಒ ಳಗೊಂಡAತೆ ಸಮಿತಿಯನ್ನೂ ರಚಿಸಲಾಗಿದೆ.
ಮೂಲ ವಿನ್ಯಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪಾರಂಪರಿಕವಾಗಿಯೇ ನಿವಾಸವನ್ನು ನವೀಕರಿಸಬೇಕಿದೆ. ಐದಾರು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶಿಸಿರುವುದಾಗಿ ಜಿಲ್ಲಾಽಕಾರಿ ವಿವರಿಸಿದರು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇ ಶಕ ಹರೀಶ್ ಕುಮಾರ್,ಸಹಾಯಕ ಇಂಜಿನಿಯರ್ ರವಿ ಇತರರು ಇದ್ದರು.