CHITRADURGA DDPI OFFICE 
ಚಿತ್ರದುರ್ಗ

ನಗರ ವಿದ್ಯಾರ್ಥಿಗಳಿಗೆ ಗ್ರಾಮೀಣಾನುಭವ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • *ರಾಜ್ಯದ ೨.೧೫ ಲಕ್ಷ ಸ್ಟೂಡೆಂಟ್ಸ್ಗೆ ವಿಲೇಜ್ ಲೈಫ್ ಪರಿಚಯ
  • *ರಾಜ್ಯದ ೨.೧೫ ಲಕ್ಷ ಸ್ಟೂಡೆಂಟ್ಸ್ಗೆ ವಿಲೇಜ್ ಲೈಫ್ ಪರಿಚಯ
  • * ೮, ೯ ಮತ್ತು ಪ್ರಥಮ ಪಿಯುಸಿಯವರಿಗೆ ಅವಕಾಶ
ಚಿತ್ರದುರ್ಗ: ನಗರ ಪ್ರದೇಶದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಅಂಶಗಳನ್ನು ಒಳಗೊಂಡAತೆ ಗ್ರಾಮೀಣ ಜೀವನ ಪರಿಚಯ ಮಾಡಿಸಲು ಗ್ರಾಮಾನುಭವ ಕಾರ್ಯಕ್ರಮ ಅನುಷ್ಠಾನಕ್ಕೆ ರಾಜ್ಯಸರ್ಕಾರದ ನಿರ್ಧರಿಸಿದೆ.
ನಗರ ಪ್ರದೇಶದ ಎಲ್ಲ ೫೮ ಪಿಎಂಶ್ರೀ, ೬೦ ಕೆಪಿಎಸ್ ಹಾಗೂ ೮೦೦ಕ್ಕೂ ಅಽಕ ವಿದ್ಯಾರ್ಥಿಗಳಿರುವ ಇತರೆ ೪೨ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ ೯೩೧ ಶಾಲೆಗಳ ೨.೧೫ ಲಕ್ಷ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಪರಿಚಯಿಸಲು ಪ್ಲಾ÷್ಯನ್ ಮಾಡಿರುವ ಸರ್ಕಾರ ಇದಕ್ಕಾಗಿ ೨.೫೦ ಕೋಟಿ ರೂ.ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
ಗ್ರಾಮೀಣ ಜೀವನ ಶೈಲಿ ನೇರ ಅನುಭವ, ಕೃಷಿ, ಪಶುಸಂಗೋಪನೆ, ಜಾನಪದ ಕಲೆ ಮತ್ತು ಸಂಸ್ಕೃತಿಯ ಕುರಿತ ಪರಿಚಯ ಮತ್ತು ಪ್ರಾಯೋಗಿಕ ಅರಿವನ್ನು ನಗರ ಪ್ರದೇಶದ ವಿದ್ಯಾರ್ಥಿಗಳು ಪಡೆಯಲಿ ಎಂಬ ಉದ್ದೇಶದೊಂದಿಗೆ ಒಂದು ರಾತ್ರಿ ವಾಸ್ತವ್ಯದೊಂದಿಗೆ, ೨ ದಿನಗಳ ಕ್ಷೇತ್ರ ಅಧ್ಯಯನದ ಈ ಗ್ರಾಮ ಪ್ರವಾಸ ಕರ‍್ಯಕ್ರಮವನ್ನು ಸೆಪ್ಟೆಂಬರ್-ಡಿಸೆAಬರ್ ತಿಂಗಳೊಳಗೆ ಹಾಗೂ ಶಾಲಾ-ಕಾಲೇಜು ಮಟ್ಟ ದಲ್ಲಿ ೨೦೨೭ರಿಂದ ಜನವರಿ-ಫೆಬ್ರವರಿ ಅನುಪಾಲನ ಚಟುವಟಿಕೆಗಳನ್ನು ಪೂರ್ಣಗೊಳಿಸ ಬೇಕಾಗಿದೆ.
ಇದಕ್ಕಾಗಿ ಜಿಪಂ ಸಿಇಒ ಅಧ್ಯಕ್ಷತೆ ವಿವಿಧ ಅಽಕಾರಿಗಳನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ. ಕೃಷಿ, ಶಿಕ್ಷಣ ಇಲಾಖೆ ಮತ್ತಿತರ ಇಲಾಖೆ ಸಹಯೋಗದಲ್ಲಿ ಅನುಷ್ಠಾನವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು, ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಲಿದ್ದಾರೆ.
ಕೃಷಿ ಪದ್ಧತಿಗಳು, ಬೆಳೆ ಆಯ್ಕೆಗಳು, ಕೃಷಿ ನಿರ್ವಹಣೆ, ಆಹಾರ ಉತ್ಪಾದನೆ, ಗ್ರಾಮೀಣ ಬದುಕು ಮತ್ತು ಕೃಷಿಯಲ್ಲಿ ಸವಾಲುಗ ಳನ್ನು ಅರಿಯಲಿದ್ದಾರೆ. ಕೃಷಿ, ತೋಟಗಾರಿಕೆ,ಹಾಲು ಉತ್ಪಾದನೆ, ರೇಷ್ಮೆ ಕೃಷಿ, ಕೋಳಿ ಸಾಗಣೆ, ಅರಣ್ಯ ಶಾಸ್ತç ಹಾಗೂ ಸಂಬAಽತ ಸ್ಥಳೀ ಯ ಚಟುವಟಿಕೆಗಳನ್ನು ವೀಕ್ಷಿಸಲಿದ್ದಾರೆ.
ಮಣ್ಣಿನ ಆರೋಗ್ಯ, ಮಿಶ್ರಗೊಬ್ಬರ ತಯಾರಿಕೆ, ಬಿತ್ತನೆ ಬೀಜಗಳ ಆಯ್ಕೆ, ನೀರು ಸಂರಕ್ಷಣೆ ವಿಧಾನ, ಪೌಷ್ಠಿಕ ವನ, ಕೃಷಿ ಉಪಕ ರಣಗಳು ಮತ್ತು ಸುಸ್ಥಿರ ಕೃಷಿ ಅಭ್ಯಾಸಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಯಲಿದ್ದಾರೆ. ರೈತ ಉತ್ಪಾದಕ ಸಂಸ್ಥೆಗಳು, ಸ್ವಯಂ ಸಹಾಯಕ ಗುಂಪುಗಳು ಹಾಗೂ ಇತರೆ ಸಮುದಾಯ ಆಧಾರಿತ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ. ಸ್ಥಳೀಯ ಕಲೆ, ಸಂಸ್ಕೃತಿ, ಪರಂಪರೆ, ಜ್ಞಾನ ವ್ಯವಸ್ಥೆ, ಶಿಲ್ಪ ಕಲೆ, ಆಹಾರ ಪದ್ಧತಿ, ಜನಪ್ರಿಯ ಪರಂಪರೆ ಮತ್ತು ಗ್ರಾಮೀಣ ಜೀವನದ ಕುರಿತು ವಿದ್ಯಾರ್ಥಿಗಳು ಅಧ್ಯಯನ ಮಾ ಡಲಿದ್ದಾರೆ.
ಪಿಎಂಶ್ರೀ ಶಾಲೆಗಳು ೬೦ ಹಾಗೂ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳು ೪೨, ಅನುದಾನಿತ- ೩೯,ಅನುದಾನ ರಹಿತ ೭೩೨ ಸಹಿತ ೯೩೧ ಶಾಲೆಗಳ ೮ನೇ ತರಗತಿಯ ಒಟ್ಟು ೨೫೪೪, ೯ನೇ ತರಗತಿಯ ೧,೦೫,೨೬೪ ಹಾಗೂ ಫಸ್ಟ್ ಪಿಯುಸಿಯ ೧,೦೭,೭೬೯ ಸೇರಿದಂತೆ ಒಟ್ಟು ೨,೧೫,೫೭೭ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ.
---
ಷರತ್ತುಗಳು
ಕ್ಷೇತ್ರ ಭೇಟಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಮುನ್ನ ಅವರ ಪಾಲಕರ ಅನುಮತಿಯನ್ನು ಪಡೆಯುವುದು ಕಡ್ಡಾಯ. ಸ್ಥಳಗಳಲ್ಲಿ ಸುರಕ್ಷತೆ, ಮೂಲ ಸೌಲಭ್ಯ, ಭದ್ರತೆ ಮೊದಲಾದ ಅಂಶಗಳನ್ನು ಅಽಕಾರಿ-ಶಿಕ್ಷಕರು ಖಚಿತಪಡಿಸಿಕೊಳ್ಳ ಬೇಕು. ಸಾಧ್ಯವಾದಷ್ಟು ಶಾಲಾ, ಕಾಲೇಜಿನಿಂದ ೫೦ ಕಿ.ಮಿ.ವ್ಯಾಪ್ತಿಯೊಳಗಿರುವ ಕಲಿಕಾ ಸ್ಥಳಗಳ ಆಯ್ಕೆ ಸೇರಿ ಕರ‍್ಯಕ್ರಮ ಅನುಷ್ಠಾನಕ್ಕೆ ಸಂಬAಽಸಿದAತೆ ಸರ್ಕಾರ ೩೧ ಷರ ತ್ತುಗಳನ್ನು ವಿಽಸಿದೆ.
---
"

ಕೋಟ್ನಗರ ಪ್ರದೇಶ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಪರಿಚಯಿಸಲು ಉದ್ದೇಶಿಸಿರುವ ಸರ್ಕಾರ ಈ ನಿಟ್ಟಿನಲ್ಲಿ ಆದೇಶಿಸಿದೆ. ಸಿಇಒ ಅವರ ಅಧ್ಯಕ್ಷತೆ ಸಮಿತಿ ಸಭೆಯಲ್ಲಿ ಚರ್ಚಿಸಿ ಜಿಲ್ಲೆಯಲ್ಲಿ ಈ ಕರ‍್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.