ಪ್ರಮುಖ ಮುಖ್ಯಾಂಶಗಳು
ಚಳ್ಳಕೆರೆ:ಸಹಕಾರ ಕ್ಷೇತ್ರದಿಂದಗ್ರಾಮೀಣ ಜನರ ಬದುಕು ಸುಧಾರಣೆಆಗಲಿದೆ. ಆರ್ಥಿಕಪ್ರಗತಿ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿಹೇಳಿದರು.
ಅವರುಚಳ್ಳಕೆರೆ ನಗರದ ಹೊರವಲಯದ ಸಾಯಿಮಂದಿರದಲ್ಲಿ ಸಹಕಾರಿ ಕ್ಷೇತ್ರದ72ನೇವರ್ಷಾಚರಣೆ ಉದ್ಘಾಟಿಸಿಮಾತನಾಡಿದರು.
ಸಹಕಾರಕ್ಷೇತ್ರವು ದೇಶದ ಸಮಗ್ರ ಅಭಿವೃದ್ಧಿಗೆಕೆಲಸ ಮಾಡುತ್ತಿದೆ.ಪ್ರಸ್ತುತದೇಶದಲ್ಲಿ 8.5ಲಕ್ಷಕ್ಕೂಹೆಚ್ಚು ಸಹಕಾರ ಸಂಘಗಳಿವೆ.ಇವು ಗ್ರಾಮೀಣಭಾಗದ ಆರ್ಥಿಕ ವ್ಯವಹಾರವನ್ನುಕಾಪಾಡುತ್ತಿವೆ.ಸಹಕಾರ ಕ್ಷೇತ್ರದಪ್ರಗತಿಗೆ ಮಾಜಿ ಪ್ರಧಾನಿ ನೆಹರೂಅವರ ಸೇವೆ ಅಪಾರವಾಗಿದೆ.
ಶೂನ್ಯಬಡ್ಡಿ ಸಾಲ ಸದುಪಯೋಗಕ್ಕೆ ಕರೆ
ರಾಜ್ಯದಮುಖ್ಯಮಂತ್ರಿ ಸಿದ್ದರಾಮಯ್ಯನೇತೃತ್ವದಲ್ಲಿ ರೈತರಿಗೆ ಸಹಕಾರಕ್ಷೇತ್ರದ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ.ರೈತರು ಈ ಸೌಲಭ್ಯವನ್ನುಸದುಪಯೋಗಪಡಿಸಿಕೊಳ್ಳಬೇಕು.ಸಹಕಾರ ತತ್ವದಬಗ್ಗೆ ಜನರಿಗೆ ತಿಳಿವಳಿಕೆನೀಡಬೇಕು ಎಂದು ಅವರು ಸೂಚಿಸಿದರು.
ಈ ವೇಳೆಜಿಲ್ಲಾ ಸಹಕಾರ ಸಂಘದ ಒಕ್ಕೂಟನಿರ್ದೇಶಕ ಬಿ.ಸಿ.ಸಂಜೀವಮೂರ್ತಿ,ಜಿಲ್ಲಾಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ,ರವಿಕುಮಾರ್,ಆರ್.ರಾಮರೆಡ್ಡಿ,ಆರ್.ಮಲ್ಲೇಶಪ್ಪ,ಕೆ.ಜಗದೀಶ್,ಅಜ್ಜಣ್ಣ,ಮಂಜಣ್ಣ,ಚನ್ನಬಸಣ್ಣಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕರಾಜ್ಯ ಸಹಕಾರ ಮಹಾಮಂಡಳಿ ಈಕಾರ್ಯಕ್ರಮ ಆಯೋಜಿಸಿತ್ತು.ಜಿಲ್ಲಾ ಸಹಕಾರಯೂನಿಯನ್ ಕೂಡ ಸಹಯೋಗ ನೀಡಿತ್ತು.